ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೦

ರಾಮಚಂದ್ರಚರಿತಪುರಾಣಂ

ಕಂ || ಬಂಹಿಮವನ್ಮಹಿಮಂ ನಿಜ
ಸಿಂಹ ಕಟೀ ತಟ ವಿಲಾಸಿ ಪರ೦ಕ ತಳಂ ||
ಸಿಂಹಾಸನವೆನೆ ಭರತಂ
ಗೇಲ ಹಲಿ ಸಾಮ್ರಾಜ್ಯ ಪಟ್ಟಮಂ ಕಟ್ಟಿದನೋ|| ೨೨ ||


ಅಂತು ನಿಜ ವದಾನ್ಯತಾ ಗುಣ ವಿಶುದ್ದ ಸಿದ್ದರಸ ಪ್ರವಾಹಕ್ಕೆ ಸೇತುಗಟ್ಟುವಂತೆ
ಪಟ್ಟಮಂ ಕಟ್ಟಿ ವಿನಯಮಂ ಮುಂದಿಟ್ಟು-

ಉ || ಈಕ್ಷೆಸುವನ್ನೆಗಂ ಭುವನವಲ್ಲಭ ನಿಮ್ಮ ಪದಾರವಿಂದಮಂ |
ರಕ್ಷಿಸುವೆಂ ಧರಾವಲಯಮಂ ಭವದಾಜ್ಞೆಗೆ ಬೆರ್ಚಿ ಮನ್ಮನ ||
ಸ್ಟಾಕ್ಷಿಕವಾನಪೇಕ್ಷಿಸುವೆನು ಪಭೋಗಮನೆಂದು ಪೂಣ್ಮನೇ |
ನಕ್ಷತಧೈರ್ಯನೋ ಭರತನೊಲ್ವನೆ ಲೋಭರತ ಪ್ರಪಂಚಮಂ || ೨೩ ||

ಅಂತು ಪ್ರತಿ ಜ್ಞಾರೂಢನಾದ ಭರತನುಮಂ ಜನನಿಯುಮನುಚಿತಪ್ರತಿ
ಪತ್ರಿ ಯಿಂ ಮನ್ನಿಸಿ ಪೊಅ ಕಲಸಿ ರಾಮಲಕ್ಷ್ಮಣರ್ ಸೀತಾಸಮೇತಂ ಪಯಣಂ
ಬೋಪುದುಮಿ ಭರತಂ ಕೈಕೆವೆರಸಯೋಧ್ಯೆಯಂ ಪೊಕ್ಕು-

ಮ || ಅಮಳೋತ್ತಂತೆ ಸಮಾನಮಾಗೆ ಭರತಂ ಕೊಂಡಾಡಿದಂ ಕ್ಷತ್ರಧ |
ರ್ಮಮುಮಂ ಧರ್ಮಮುಮಂ ಧರಾವಲಯಮಂ ವಿಕ್ರಾಂತದಿಂ ತಾಳಿ ಸ೦ ||
ಯನ ಸಂರಕ್ಷಣ ಸತ್ವದಿ೦ ತಳೆದು ದಾನಂ ಪೂಜೆ ಶೀಲೋಪನಾ |
ಸಮನತ್ಯುನ್ನತರಾದ ರಾಜ ತನಯ‌ ತನ್ನನ್ನರಾರೆಂಬಿನಂ || ೨೪ ||

ಅಂತು ಭರತ೦ ರಾಜ್ಯ ಸುಖ ವಿಮುಖನರಸುಗೆಯ್ಯುತಿ ರ್ಪಿನಮಿತ್ತಲ್-

ಉ || ಆತಪ ತಾಪಮಂ ತಳಿರ ಸತ್ತಿಗೆಯಿಂದ ತೃಷಾ ವಿಷಾದಮಂ |
ಶೀತಲ ತೋಯದಿಂದ ಪಸಿವಂ ಪರಿಪಕ್ವ ಫಲಂಗಳಿ೦ದೆ ನಿ ||
ದ್ರಾತುರ ವೇಗಮಂ ಲತೆಯ ಮಂಟಪದಿಂದೆ ಪಥ ಶ್ರಮಾಂಬುವಂ |
ಸೀತೆಗೆ ತಳ್ಳಿದ ಕದಳಿಕಾ ದಳ ವೀಜನದಿಂದೆ ರಾಘವಂ || ೨೫ ||
ಮ || ವನಕೇಳಿ ಗಮನಕ್ಕೆ ದೀಪ ಕಲಿಕಾ ದೀಪ್ತಿ ಪ್ರತಾನಕ್ಕೆ ವೀ |
ಜನ ವಾತಕ್ಕೆ ಬಲಿ ಸೀತೆ ಗಮನಾಯಾಸಕ್ಕೆ ಚಂಡಾಂಶು ತಾ ||
ಪ ನಿರೋಧಕ್ಕೆ ಸಮಗ್ರ ವಾತ ಹತಿಗೇನುಂ ಬೇವಸಂಬಟ್ಟ೪ |
ಇನಿಯಂ ತನ್ನೊಡನುಯ್ದ ಪಂ ರಘುಜನೆಂಬೀ ರಾಗದುದ್ರೇಕದಿಂ || ೨೬ ||