ಉತ್ಸಾಹ || ಹರಿಯ ಬಳನ ನಡುವೆ ಸೀತೆ ಪೊಳೆಯ ಚಳ ವಿಲೋಚನಂ |
ಕರಿಯ ಬಿಳಿಯ ಮುಗಿಲ ನಡುವೆ ಪೊಳೆವ ಮಿಂಚಿನಂದದಿ೦ ||
ಬರೆ ಕಡ೦ಗಿ ವಜ್ರ ಕರ್ಣನವರನಾತ್ಮ ರಾಜ ಮಂ |
ದಿರದ ಪೊನ್ನ ನೆಲೆಯ ಮಾಡದಿದಿರೊಳಿರ್ದು ನೋಡಿದಂ || ೩೭ ||
ಕಂ || ಅತಿ ಲಲಿತ ಗಮನವತ್ಯಾ
ಯತ ನಯನಮನ್ನವಕ್ಷಮಾಜಾನು ವಿಳಂ ||
ಬಿತ ಬಾಹುಯುಗಲಮಪ್ರಾ
ಕೃತಫಾ ಸೌಂದರವಿನ್ನರಂ ಕಂಡಿಯೆಂ|| ೩೮ ||
ಕಾರಣ ಪುರುಷರಿವರ್ ಸಾ
ಧಾರಣರಲ್ಲರ್ ತೃಣೀಕೃತ ತ್ರಿಭುವನರೇ ||
ಕಾರಣವೆಂದರೆ ಬಲ
ನಾರಾಯಣರಪ್ಪನ್ನರುಟಿದರುಮೊಳರೇ||||೩೯||
ಎಂದು ನೀಡುಂ ಭಾವಿಸಿ ವಿಸ್ಮಯ ಸ್ತಿಮಿತ ಲೋಚನನಾಗಿ ನೋಡುತ್ತಿರ್ಪುದು
ನವರ್ ಪುರದುತ್ತರ ಗೋಪುರದ ಜಿನೇಂದ್ರ ಮಂದಿರವನೆಯ್ದೆ ನಂದು ಮೂಲ
ಸೂಲಗೊಂಡು ಜಗತ್ತಯ ಪ್ರಭುವಿಂಗಭಿಮುಖರಾಗಿ-
ಕಂ || ಜಯ ಜಿತವೃಜಿನ ಜಿನೇಶ್ವರ
ದಯಾನದೀ ಪುಳಿನ ರಾಜಹಂಸ ಭವಾಂಭೋ ||
ಧಿಯ ತಡಿಯನೆಷ್ಟೋಸೆಮ್ಮಂ
ನಯ ನಿಕ್ಷೇಪ ಪ್ರಮಾಣ ಪಾತ್ರದಿನರುಹಾ || ೪೦||
ನೇವಾಳವೆಂದು ಕೆಲಬರ್
ಪಾವಂ ಪಿಡಿವಂತೆ ದೇವ ನೀನಲ್ಲದರಂ ||
ದೇವರಿವರೆಂದು ಪಿಡಿದಿ
ವಿಧಿವಟ್ಟ ಪರೊ ಮೋಹ ಮೂರ್ಛಯಿನರುಹಾ|| ೪೧||
ನಿನಗೆ ರಸಮೊಂದೆ ಶಾಂತಮೆ
ಜಿನೇಂದ್ರ ಮನಮಾ ರಸಾಂಬು ನಿಧಿಯೊಳಗವಗಾ ||
ಹನಮಿರ್ದು ಮಿಕ್ಕ ರಸಮಂ
ಕನಸಿನೊಳಂ ನೆನೆಯದಂತು ಮಾಡಮರುಗಹಾ|| ೪೨||