ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೭

ಸಪ್ತಮಾಶ್ವಾಸಂ


ರೂಪವತಿ ಪುರುಷವೇಷಂ |
ಪೋಪುದುಮರ್ಚಿಸಿದ ಕೈದುವಿರ್ಪಂತಿರ್ದಳ್ ||೧೦೭ ||

ಕಂ || ಕ್ರಮ ನಿಕ್ಷೇಪದಿನಂಚೆಗೆ
ಸಮನಿಸೆ ದೈನ್ಯಂ ಲತಾಂಗಿ ಸೀತೆಗೆ ಚೆಲ್ವಂ ||
ಸಮನಧಿಕವೆಂಬ ಕೌತುಕ
ಮಮರ್ದಿರೆ ನಡೆತಂದು ಪಾರ್ಶ್ವದೊಳ್ ಕುಳ್ಳಿರ್ದಳ್ || ೧೦೮ ||

ಅಂತು ಸೀತೆಯ ಸಮಾಸದೊಳ್ ಕುಳ್ಳಿ ರ್ಪುದುಮಾಸಮಯದೊಳ್ -

ಉ || ಆ ನಗೆಗಣ್ಣಳಾ ನಿಮಿರ್ದ ಪುರ್ವುಗಳಾ ನಳಿತೋಳಳಾ ಸರೋ |
ಜಾನನವಾ ಮದಾಳಿ ಕುಳ ಕುಂತಳವಾ ಕಳಹಂಸ ಯಾನವಾ ||
ಸೀನ ಕುಚ೦ಗಳಾ ಕ್ಷಣದೊಳೀಕ್ಷಣಮಂ ಸೆಜಿಗೆಯ್ಯ ಕೃಷ್ಣನಾ |
ಮಾನಿನಿಗಿತ್ತು ತನ್ನ ಮನಮುಂ ಮರವಾನಸನಂತೆ ತೋಜಿದಂ || ೧೦೯ || <,br/>

ಆ ಸಮಯದೊಳ್ ದಾಶರಥಿ ಪುರುಷ ವೇಷಮಿಾ ಕನ್ನೆಗೇಕಾರಣವಾದುದೆನೆ
ಜಗಜ್ಜನಕಂಗೆ ತಜ್ಞನನಿ ಕೈಗಳಂ ಮುಗಿದೀ ಕುರವಕಪುರಮನಾಳ್ವಂ ವಾಲಖಿಲ್ಯ
ನೆಂಬನೆಮ್ಮರಸನಾತನ ಮೇಲೆ ವಿಂಧ್ಯಾ ಟಿವಿಯೊಳಿರ್ಪನವಂಧ್ಯ ಕೋಸಂ ರೌದ್ರಭೂತಿ
ಯೆಂಬಂ ಮೇಚ್ಛರಾಜನಸಂಖ್ಯಾತ ಕಿರಾತ ಬಲಂಬೆರಸೆತ್ತಿ ಬಂದು ನಾಡುಂಬೀಡು
ಮನಿ ಅದು ಸೂರೆಗೊಂಡೆಮ್ಮರಸನಂ ಸೆರೆವಿಡಿದುಯ್ದ ನದನವಂತೀ ವಲ್ಲಭಂ
ಸಿ೦ಹೋದರಂ ಕೇಳೆ ಮ್ಮರಸನ-ಪುತ್ರಕನೆಂದು ತಾನೀದೇಶಮಂ ಸ್ವೀಕರಿಸಲ್ಬಗೆದೊ
ಡೆಮ್ಮಮಂತ್ರಿಮುಖ್ಯಂ ವಾಲಖಿಲ್ಯನರಸಿ ಗರ್ಭಿಣಿಯೆಂದು ಬಿನ್ನವಿಸುವುದುಮದನಾತ
ನವಧಾರಿಸಿ ಸಂತೋಷಂಬಟ್ಟು ಗರ್ಭದ ಕೂಸು ಗಂಡುಗೂಸಾದೊಡಾತನೆ ನೆಲ
ಕೊಡೆಯನೆಂದೊಡಂಬಡುವುದುಮಾತನುಂ ಕೆಲವಾನುಂದಿವಸದಿಂದೀಕನ್ನಿಕೆಯಂ
ಪಡೆಯೆ ಮಂತ್ರಿಮುಖ್ಯಂ ಅರಸಿ ಮಗಂಬಡೆದಳೆಂದೊಸಗೆಯಂ ಮಾಡಿ ಕಲ್ಯಾಣ
ಮಾಲನೆಂದು ಹೆಸರನ್ನಿಟ್ಟು ನಡ ಪುತ್ರಿ ರ್ಪಿನಿಂದುದಿವಸಂ 'ದಿವ್ಯಜ್ಞಾನಿಗಳಂ
ಕಂಡು ವಾಲಖಿಲ್ಯಂಗೆ ಬಂಧನಮೋಕ್ಷಮಾರಿ೦ದಕ್ಕುಮೆಂದು ಬೆಸಗೊಳ್ಳುದುಮವ
ರಿಂತೆಂದರ್-

ಚ || ಅಳವಡೆ ಕೊಂಡ ಗಂಡವರಿಜಂ ಬಗೆಗೊಂಡಿರೆ ನೋಡಿ ನೋಡಿದಾ |
ಗಳೆ ವಧುವೆಂದು ನಿಶ್ಚಯಿಸಿ ಕೈವಿಡಿದಾತನೆ ನಿಮ್ಮ ಖೇದಮಂ ||

1. ಅವಧಿಜ್ಞಾನಿಗಳದ್ದವರಂ. ಚ.