ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಪ್ತಮಾಶ್ವಾಸಂ

೧೯೫

ಅಂತು ಘನಸಮಯ ಪ್ರವೇಶಮಖಿಲ ಜನ ಮನೋವಿಕಾಸಕ್ಕವಕಾಶಮಾಗೆ -

ಮ||ಸ್ತ ||ಅಪರಾಂಭೋರಾಶಿ ವೇಳಾ ವನಮಮರ ಪುರೋದ್ಯಾನಮಂ ನೋಡಲೇಂ ।
ದಪುದೋ ನೀಲಾಚಲಂಗಳ್ ಕುಲ ಪರಿಭವಮಂ ಪಿಂಗಿಸಲ್ ನಾಕಲೋಕಾ ||
ಧಿಪನೊಳ್ ಮೇಲೆತ್ತಿಕಾದಲ್ ನೆರೆದುವೊ ಬಡಬಾಭೀತಿಯಿಂ ಮೇಣ್ ಶರಣೋ |
ಈ ಪುದೋ ನೀರಾಕರಂ ಮೋಮಮನೆನೆ ನೆಗೆದತ್ತಂದು ನೀಲಾಭ್ರಜಾಲಂ|| ೧೪೨ ||

ಕಂ || ಪಡುವಣ ಕಡಲಿಂದೊಗೆದುದು
ಬಡಬಾಗ್ನಿಯ ಪೊಗೆ ಪೊದಟ್ಟು ಕಿಡಿವೆರಸೆನಲೇಂ ||
ಕುಡಿಮಿಂಚುವೆರಸು ಗಗನಮ
ನಡರ್ದುದೆ ನೀರಂಧ್ರ ನೀಲ ನೀರದ ನಿವಹಂ ||೧೪೩||

ಪೊತ್ತುವ ಬಡಬಾಗ್ನಿಯ ಪೊಗೆ
ಸುತ್ತಿದೊಡುಮ್ಮಳಿಸಿ ಕಟ್ ಪಡುವಣ ಕಡಲೊಳ್ ||
ನಿತ್ತರಿಸದೆ ನಡೆದುವು ಜಲ
ಮತ್ತ ದ್ವಿಪ ಘಟೆಗಳೆನಿಸಿದುವು ಘನ ಘಟೆಗಳ್ || ೧೪೪ ||

ಮ||ಸ್ತ ||ಇದಮೋಘಂ ಮೇಘಕಾಲಂ ಬರೆ ಗಗನ ಗೃಹ ದ್ವಾರದೊಳ್ ತೋರಣಂ ಕ |
ಔದುದೋ ಮೇಣ್ ಪಂಚರತ್ನಾವಳಿ ವಿಲಸಿತಮಂ ಕಂಠಿಕಾಮಾಲೆಯಂ ತಾ|
ಆದಳೋ ದಿಗ್ಗವಿ ಮೇಣ್ ರನ್ನ ಪೊರಜೆ ನವಾಂಭೋದ ಮಾದ್ಯದ ಜಕ್ಕಿ |
ಕ್ಕಿದುದೋ ಪೇಟಿಂಬಿನಂ ಕಣೆ ಸಮದು ಶಬಲಚ್ಛಾಯೆಯಿಂ ಶಕ್ರ ಚಾಪ೦||

ಅನಂತರಂ-

ಮ || ವಸುಧಾವಲ್ಲಭೆ ಮೇಘಕಾಲ ಏಟನೊಳ್ ಸಂಭೋಗಮಂ ಮಾಡೆ ಬ |
ಣ್ಣ ಸರಂ ಪೋರ್ಕುಳಿಯಿಂದಲೇ ಸಅದು ಸೂಸಿತ್ತಲ್ಲದಂದೆತ್ತಣಿಂ ||
ಪೊಸಮುತ್ತು೦ ಕಿಸುಗಲ್ಲಳುಂ ಕೆದ ಕಣ್ಣಿಂಬಾದುವೆಂಬಂತದೇ |
ನೆಸೆದೊಪ್ಪಿರ್ದುವೊ ಸೂಸಿದಾಲಿವರಲು೦ ತಂದ್ರಗೋಪಂಗಳುಂ || ೧೪೬ ||

ಉ|| ತೀಡುವ ಪಶ್ಚಿಮಾನಿಲನ ತೀಟದೊಳುತ್ಕಟಮಾಗೆ ರಾಗವಿ |
ರ್ಪೊಡಿದ ಚ೦ಚುವಂ ತೆದೆಅಂಕೆ ನೆಅಲಿರೆ ಕಂಠನಾಳಮಂ |
ನೀಡಿ ವಿಯತ್ತಲಕ್ಕೊಗೆದು ಕಾರ ಮುಗಿಲ್ವನಿಯಂ ಮನಂ ಕುಳಿ |
ರ್ಕೊಡುವಿನ ಕರ್ದು೦ಕಿ ನಲಿವಾಜಿದುವಾಡಿದುವಂದು ಚಾತಕಂ |