ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೪

ರಾಮಚಂದ್ರಚರಿತಪುರಾಣಂ

ಎನೆ ಕಪಿಲಂ ವಿಷಣ್ಣನಪ್ಪುದಂ ದೇವತೆಗೆ ಕೈಗಳಂ ಮುಗಿದು-


ಚ || ಎನಗವನೀಶ ದರ್ಶನದುಪಾಯಮನಂಬಿಕೆ ಪೇಮೆಂಬುದುಂ |
ಜಿನಗೃಹಮಿರ್ದುದೀ ಪುರದ ಪೂರ್ವವಿಭಾಗದೊಳಿರ್ದರಲ್ಲಿ ಸ ||
ನ್ನುನಿಪರುಪಾಸಕ ಕ್ರಮದಿನಲ್ಲಿ ದೃಢವ್ರತನಾಗಿ ಪೋದೊಡಾ |
ಮುನಿವರರಾಜ್ಞೆಗಡ್ಡ ವಿಸರಲ್ಲಿಯ ಕಾಸಿನ ಯಕ್ಷರಾಕ್ಷಸ || ೧೩೭ ||

ಎಂಬುದುವಾಯ ಬೆಸಸಿದಂದದೊಳೆ ಬಸದಿಗೆ ಬಂದು ಜಿನಮುನಿಗಳಂ
ಕಂಡು ಧರಮಂ ಬೆಸಗೊಂಡು ಲಘುಕರ್ಮಿಯಪ್ಪುದಿಂದೆ ದರ್ಶನ ಶುದ್ದನು
ಮಣುವ್ರತ ಧಾರಿಯುಮಾಗೆ ಋಷಿನಿವೇದಕನೊಡನೆ ಪೋಗಿ ಗಂಧೋದಕವನುಯ್ದು
ಕೊಟ್ಟು ರಘುವೀರ೦ಗಿ ಚ್ಚಾಕಾರ ಪೂರ್ವಕಂ ಸರ್ವಾಂಗಪ್ರಣತನಾಗಿ ಕಾಣ್ಣುದು
ಮಾತಂ ವ್ರತಕ್ಕೆ ಬಂದುದರ್ಕೆ ಮೆಚ್ಚುಗೊಟ್ಟು ಕುಪಿ -

ಚ || ಎಸಿಗದೆ ಬಾ ಗೆಟ್ಟೆಡೆಗೆ ಪೊಮ್ಮಲಿಯಂ ಧರೆಗಾವ ಕಾಲಮುಂ |
ಕರೆದು ಪರಾರ್ಥವೃತ್ತಿಯೊಳೆ ಪಾವನವಾಗಿರೆ ತನ್ನ ಜೀವನಂ ||
ತೋಜಿದು ಕಳಂಕ ಸಂಕಿಲತೆಯಂ ಮತಿಗಾಲದ ಸೊಂಪನೇಳಿಸಲ್ |
ನೆರೆದನುಬಂಧಮಂ ಮೆರೆದನಚ್ಚರಿ ಲಾಂಗಲಪಾಣಿ ಸೀತೆಯೊಳ್ ||೧೩೮||

ಅ೦ತು ರಾಮಲಕ್ಷ್ಮಣರಾ ಯಕ್ಷನ ವಿನಯೋಪಚಾರದಿಂ ಸಮಾಹಿತ
ಮನಸ್ಕರಲ್ಲಿರ್ಪುದುಂ-

ಚ || ಮುಗುಳ ತೊಡ೦ಬೆ ಗಂಟೆಡೆದೆ. ಆ ಬೆಳ್ಳುಳಿ ಪುಟ್ಟ ಪುಟ್ಟಿ ಕೇ |
ದಗೆಗಳ ಸೊರ್ಕು ಚೇತರಿಕೆ ಚಾದಗೆಗಂ-ಚಿರಮಾಗೆ ರಾಗಮಂ ||
ಚೆಗೆ ಕಿಜುವೀಲಿ ಕಣ್ಣೆ ಜತೆಯೆ ಸೋಗೆಗೆ ತಣ್ಣಸುವುಟ್ಟಿ ಬೆಟ್ಟವೇ |
ಸಗೆಯ ಬಿಸಿಲೆ ತೀಡಿದುದು ತಣ್ಣನೆ 'ಣ್ಣನೆ ಪಶ್ಚಿಮಾನಿಲಂ || ೧೩೯ ||


ಕ೦ || ಪರಿತಾಪಂ ಕಿಡೆ ಪುಳಕಾಂ
ಕುರಮೊದವೆ ಲತಾಂಗದೊಳ್ ನದೀ ಲೋಚನೆಗು ||
ರ್ವರೆಗಾನಂದಾಶ್ರುಗಳು
ಬೃರಮಾದುವು ಪಶ್ಚಿಮಾನಿಲಂ ಸೋಂಕಲೊಡಂ || ೧೪೦ ||


ಪಸುರ್ಗವಿಲನಾದ ನೀಪದ
ಕುಸುಮಮುಮಂ ದೆಸೆಗೆ ಕಂಪನೆತ್ತುವ ಲೋಧ್ರ ||
ಪ್ರಸನಮುಮಂ ಸಾಲ್ಕಾಟಾಳ್
ಪಸವಟ್ಟಂದದೊಳೆ ಮುಸು ಮುದುವಳಿಗಳ್ ||೧೪೧ ||