ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೦೮
ರಾಮಚಂದ್ರಚರಿತಪುರಾಣಂ


ಅಂತು ನಿಶ್ಯಲ್ಯನಾಗಿ ಪೋಗಿ ಶ್ರುತಧಾರಣ ಭಟ್ಟಾರಕರ ಪದಪಾರ್ಶ್ವ ದೊಳ್ || ೩೫ ||
ಕಂ || ಬೆರ್ಚಿಸೆ ತನ್ನಂ ಕೃಷ್ಣಂ
ಬೆರ್ಚಿಸಿದಂ ಕೃಷ್ಣ ತನಯನಂ ಜಿನರೂಪಿಂ ||
ಕೆರ್ಚೆರಿದ ವೈರಾಗ್ಯದ
ಪೆರ್ಚಿ೦ ಮುಯ್ಯಂ ಮಗುಟ್ಟು ವಂತತಿವೀರ್ಯಂ
ಚ|| ನಿಜಭುಜ ವೀರ ಹಾನಿಗೆ ತಪಂಬಡೆ ತಂದೆ ಮಗ೦ಗೆ ರಾಜ್ಯ ಮಂ | ವಿಜಯರಥಂಗೆ ರಾಮನೊಸೆದೀವುದುಮಾತನ ತಂಗೆಯೊಳ್ ಜಗ || ದ್ವಿಜಯಿಗೆ ಲಕ್ಷ್ಮಣಂಗೆ ರತಿಮಾಲೆಯೊಳಾಯ್ತು ವಿವಾಹಮುತ್ಸವ | ಧ್ವಜ ಮಣಿತೋರಣಂ ತುಲುಗೆ ಫೂರ್ಣಿಸೆ ಮಂಗಲತೂರ್ಯ ನಿಸ್ವನಂ|| ೩೬ || ಆ ವಿವಾಹ ವಿಧಾನಾನಂತರಂ ನಂದ್ಯಾವರ್ತ ನಗರಮನಗಲ್ದು ನಿಚ್ಚವಯಣಂ ಗಳಿ೦ ಕ್ಷೇಮಾ೦ಜಲಿ ಪುರಕ್ಕೆ ಬಂದಾ ಪೊಳಿಲ ಪೋರಪೋಲಳಿಲ ಮನೋಹರೋದ್ಯಾನ ದೊಳ್ ದಾಶರಥಿಯುಂ ವೈದೇಹಿಯುಂ ವಿಶ್ರಮಿಸಿ ರ್ಪುದುಂ, ತತ್ಪುರ ನಿರೀಕ್ಷಣ ನಿಮಿತ್ತಂ ಲಕ್ಷ್ಮಣಂ ರಾಜವೀಥಿಯೊಳಗನೆ ಬರುತ್ತುಮಿರೆ ಪಲರುಮೊಂದೆಡೆಯೊ ಳಿರ್ದು ಜಿತಪದ್ಮೆಯ ಪಡೆಮಾತಂ ನುಡಿಯುತ್ತುಮಿರೆ ಕೇಳ್ದು ಲಕ್ಷ್ಮಣಂ ಜಿತಪದ್ಮೆ ಯೆಂಬಳಾರ್ಗೆ೦ಬುದುಮಾತನ ಸಮುದ್ರಘೋಷಮನಜನಿಸುವ ಗಂಭೀರ ಸ್ವರದೊಳಂ ಭದ್ರಾ ಕಾರದೊಳಮಾತಂ ಕಾರಣಪುರುಷನಾಗಲೆ ವೇಮ್ಕಿಮೆಂದು ನಿಶ್ಚಯಿಸಿ ಪುರಾಣ ಪುರುಷನೊರ್ವನಿಂತೆಂದಂ
ಕಂ || ಜನಪತಿ ಶತ್ರು೦ದಮನಾ
ತನರಸಿ ಕನಕಾಭೆ ತತ್ತನೂಜೆ ಸರೋಜಾ ||
ನನೆ ಮಸೆದ ಕುಸುಮ ಸಾಯಕ
ಮನಿಪಳ್ ಜಿತಪದ್ಮೆ ಪೆಸರೊಳಂ ರೂಪಿನೊಳಂ || ೩೭ ||
ಆ ಕನ್ಯಾರತ್ನಂ ಪುಟ್ಟಲೊಡನತ್ತ ಶಸ್ತ್ರಶಾಲೆಯೊಳೊಂದು ಶಕ್ತಿ ಪುಟ್ಟಿದುದಾ ಸಮಯದೊಳೊ೦ದಾಕಾಶವಚನವಿಂತೆಂದುದೀ ದೇವತಾಧಿಷ್ಠಿತಮಪ್ಪ ಶಕ್ತಿಯಿಂ ಶತ್ರುಂದಮನಿಡುವುದುಮದಂ ಸ೦ಚಲಿಸದೆ ಬ೦ಚಿಸಿ ಪಿಡಿದ ಮಹಾಸತ್ವನೀ ರಮಣಿ ಗಂ ದಕ್ಷಿಣ ಭರತ ಧರಣೀ ರಮಣಿಗಂ ರಮಣನಕ್ಕುಮೆಂಬ ದೇವತಾದೇಶಮಂ ಕೇಳ್ದಾ ತನಾ ತೆಅದಿನಲ್ಲದೆ ಕಲ್ಯಾಣೋತ್ಸವಮಂ ಮಾಡೆನೆಂದರೆ ಕನ್ಯಾ ಲೋಭದಿ ನನೇಕ ರಾಜಸುತರ್‌ ಬಂದೀಶಕ್ತಿ ಪ್ರಹಾರದಿಂ ಯಮಾಗಾರಮನೆಯ್ದಿ ದರೆ೦ದುಪೇಟತೆ ಲಕ್ಷ್ಮಣಂ ಕೇಳ್ದದಂ ಗಹನಂಗೆಯ್ಯದಾತನರಮನೆಯ ಬಾಗಿಲ್ಗೆ ಬಂದು ಪಾರ್ಥಿವ