ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಅಷ್ಟಮಾಶ್ವಾಸಂ

೨೧೩

ಅಂತು ಪೇಅದುಮಾಮಾತನಾಕೆಯ ಸೊಸೆ ಕೇಳ್ದು ತನ್ನ ಪುರುಷನಪುದಿತಂ
ಗೆ ಪೇಟಿ ವಸುಭೂತಿಯ ಪೆಂಡತಿಯಪ್ಪ ರತಿಕಾರಿಣಿಯುಮಿಾರ್ಪೈಯಿಂದದನೆ
ಪಿಸುಣ್ಬೇರಿ ಕೇಳ್ದುದಿತಿನುಂ ವಿದಿತ ವೃತ್ತಾಂತರಾಗಿ ವಸುಭೂತಿ
ಗುಪಾಯದಿನಪಾಯಮಂ ಮಾರ್ಪದುಮವಂ ಸತ್ತು ಶಾರ್ದೂಲಾಸ್ಯಮೆಂಬ ಮಹಾ
ಗಹನದೊಳ್ ಕಾಲಜಂಘನೆಂಬ ಶಬರನಾಗಿ ಪುಟ್ಟಿದನೆಂದು ಪೇಳ್ದು ಮತ್ತಮಿಂ
ತೆಂದು ಎ ಪದ್ಮಪುರದುದ್ಯಾನದೊಳ್ ಸುಮತಿವರ್ಧನರೆಂಬಾಚಾರರ್‌
ಬಂದಿರ್ದರೆಂದು ಋಷಿನಿವೇದಕನ ಆಸೆ ವಿಜಯಪರ್ವತ ಮಹಾರಾಜರ ಪೂಜೆ
ವೆರಸು ಬಂದರ್ಚಿಸಿ ಪೊಡೆವಟ್ಟು ಕುಳ್ಳಿರ್ದು ಧರಮಂ ಕೇಳು ವೈರಾಗ್ಯಪರನಾಗಿ
ದೀಕ್ಷೆಗೊಳ್ತಂದೊಡನೆ ಸಹೋದರರಪುದಿತನುಮನುದಿತನುಂ ದೀಕ್ಷೆಗೊಂಡು ತೀರ್ಥ
ವಂದನಾರ್ಥ೦ ಸಮ್ಮೇದಶೈಲಕ್ಕೆ ಪೋಗುತ್ತಿರ್ಪ ಸಮಯದೊಳಾ ಮುನಿ ಯುಗಳ
ಮ೦ ಕಂಡು ಭವ ಬದ್ದ ಕ್ರೋಧದಿಂ ಕಾಲಜಂಘ೦ ಕೋಲಲತಿಜಂಘಾಲನಾಗಿ
ಮುಟ್ಟಿನರ್ಪುದುಮವರವನ ಧೂರ್ತ ಚೇಷ್ಟೆ ಯನಅದು-

ಕಂ|| ಉಪಸರ್ಗ೦ ಪಟಪಡುವಿನ
ಮಪಘನಮಾಹಾರವೆಂಬಿವಂ ತೊರೆದು ಸನಂ ||
ತುಪಶಾಂತರ್ ಕೈಯಿಕ್ಕಿರೆ |
ಕೃಪಾಳು ತತ್ಸತಿ ದುರಾತ್ಮನಂ ಬಾರಿಸಿದಂ || ೫೩ ||
ಎಂದು ಬೆಸಸೆ-


ಕಂ|| ಅನಿತು ದಯಾಪರತೆ ಕಿರಾ
ತ ನಾಯಕ೦ಗಾದುದಾವ ಕಾರಣದಿನದಂ ||
ಮುನಿಮುಖ್ಯ ಬೆಸಸಿಮೆನೆ ದಿ
ವ್ಯನಾದದಿಂ ದಿವ್ಯಯೋಗಿ ಹಲಿಗಿಂತೆಂದಂ ||||೫೪||

ಯಕ್ಷನಾನ ಗ್ರಾಮವಾಸಿಗಳೇಕೋದರ ಸುರೂಪನುಂ ಕರುಷನುಮೆಂಬ
ರಲ್ಲಿಗೊರ್ವಂ ವ್ಯಾಧನೊಂದು ಪಕ್ಕಿಯಂ ಸಿಡಿತರೆ ಕರುಣಿಸಿ ಬೇಡಂಗೆ ಬೆಲೆಗುಡಿಸಿ
ಬಿಡಿಸಿದೊಡಾ ಪಕ್ಷಿಯುವಶಕ್ಕೆ ಪಕ್ಕುಗೊಟ್ಟಸುವಂ ಬಿಟ್ಟು ಬೇಡವಟ್ಟಿಗೊಡೆಯ
ನಾದುದಾ ಸುರೂಪನುಂ ಕರುಷನುಂ ಕುಣಿದುದಿತನುಮನುದಿತನುವಾಗಿ ಪುಟ್ಟದ
ರಾತನುಂ ಮುನ್ನಿನುಪಕಾರಂ ಕಾರಣಮಾಗೆ ಕೊಲಲೀಯದೆ ನಿಯಮಿಸಿದನೆಂದು
ಬೆಸಸಿ ಮತ್ತ ಮಿಂತೆಂದರ್

ಕಂ || ಸದಮಲ ಚರಿತಂತಮ್ಮಿಂ
ದುದಿತೋದಿತವಾದುದೆನಿಸಿ ಸಂನ್ಯಸನದ ಸ ||
ತ್ತುದಿತಾನುದಿತ ಮುನೀಶ್ವರ
ರುದಾತರುತೃಷ್ಟ ದೇವಗತಿಯಂ ಪಡೆದರ್|| ೫೫ ||