ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೦ ಕಾಮಚ೦ದ್ರಚರಿತಪುರಾಣಂ ಚ | ತರುಣ ಮೃಣಾಲ ಗರ್ಭ ರುಚಿವೆತ್ತ ರಘೋಹ ದೇಹದೀಪ್ತಿ ಮಂ | ಜರಿಯನುಪಾಶ್ರಯಂಬಡೆದು ನಿಸ್ತುಲ ಮೌಕ್ತಿಕ ಹಾರಯಷ್ಟಿ ಪೇ || ರುರದೊಳದೇಂ ವಿರಾಜಿಸಿದುದೋ ಜನತಾ ನಯನೋತ್ಸಲೋತ್ಸವಂ || ಶರದದ ಸಾಂದ್ರ ಚಂದ್ರರುಚಿಯೊಳ್ ತಲೆದೋಯಿವ ತಾರಕಾಳಿಮೋಲ್ ೧೫|| ಅನಂತರಮಲ್ಲಿಂ ತಳರ್ದುಚ || ಚವರರುಹಂಗಳಂ ತನಗೆರಜಲದೊಳ್‌ ನಡೆತಂದು ಖೇಚರ | ಪ್ರಮದೆಯರಿಕ್ಕೆ ಬೆಳ್ಳೂಡ ಸುಧಾಕರನಂ ಕೋಪಚಾಡೆ ಮಾಡೆ ರಾ || ಗಮನೆಳೆವೆಣ್ಣೆ ಕೇಸಡಿಯ ಕೆಂಪು ತುಪ್ರಭೆ ಬೀಅತಿ ಚಂದ್ರಿಕಾ | ಭ್ರಮೆಯನಿಳಾಧಿಸಂ ನಡೆದನೋಲಗ ಸಾಲೆಗದೊಂದು ಲೀಲೆಯಿ೦ || ೧೬ || ಅಂತು ಬಂದು ತನ್ಮಧ ಸ್ಪಟಿಕ ಘಟಿತ ವೇದಿಕಾ ಶಿಖಂಡ ಮಂಡನಮೆನಿಪ್ಪ ಸಿಂಹಪೀಠದೊಳಮೋಘ ಬಾಣನ ಪ್ಪುದಾತ್ತರಾಘವನುಮಧಿರಾಜ ಪಾರ್ಶ್ವ ಮಣಿಮ ಯಾಸನದೊಳ್ ಸಾಗರಾವರ್ತ ಧನುರ್ಜ್ಯಾ ಲತಾ ತಾಡನ ಜನಿತ ಕಿಣ ಕಳ೦ಕಾಂಕಿತ ಪ್ರಕೋಷ್ಠನಪ್ಪ ಲಕ್ಷಣನುಮತ್ರಿ ಪುತ್ರನಂ ಬಳಸಿದ ನಕ್ಷತ್ರ ಮಂಡಲದಂತೆ ವಿವಿಧ ಮಣಿಮಂಡಲ ಮರೀಚಿ ನಭೋಮಂಡಲಮನಾವರಿಸೆ ಸೇನಾಪ್ರಧಾನ‌ ಸಮುಚಿ ತಾಸನದೊಳ್ ಸುಗ್ರೀವಾಂಗದ ನಳ ನೀಲ ಜಾಂಬವ ಹನುಮತ್ಸಮುಖ ನಿಖಿಲ ಖಚರ ಪರಿವೃಢರುಮಿರ್ಪುದುಮಾ ಸಮಯದೊಳ್ ಪುರೋಹಿತನುಚ್ಛರಿತ ಸ್ವಸ್ತಿ ಶಬ್ದಂ ದೇವ ದಿಗ್ವಿಜಯ ಪ್ರಯಾಣ ಲಗ್ನ ಮತ್ಯಾ ಸನ್ನವೆಂದು ಬಿನ್ನವಿಸೆ ಸೇನಾ ಪ್ರಧಾನಂ ನಳಂ ವಿಜಯ ದುಂದುಭಿಯಂ ಪೊಯ್ಯುವುದುಂ ಶಾ || ಲಂಕಾಧೀಶ್ವರ ಕಾಳೆಗಂ ನಿನಗೆ ಲೇಸ೦ತೆನಲ್ ವಾಸುದೇ! ವಂ ಕೊಲ್ವಂ ಪ್ರತಿವಾಸುದೇವನನಿದೇಂ ಸಂದೇಹಮೇ ಸೀತೆಯ೦ !! ನೀ೦ ಕೊಟ್ಟಟ್ಟು ಬರ್ದು೦ಕಲಾಟಿಸುವೊಡೆಂಬಂತಷ್ಟದಿಗ್ವಿತಿಯಂ | ಧೀಂಕಿಟ್ಟತ್ತು ರಘುವೀರ ವಿಜಯ ಪ್ರಸ್ಥಾನ ಭೇರೀರವಂ | ೧೭ || ಮ || ಕುಲ ಶೈಲ೦ಗಳ ಸಮ್ಮಿನೀಕುಲದ ದೇವೀಸಂಕುಲಂ ಬೆರ್ಚೆ ಸೆ | ಇಳಿಸುತ್ತುಂ ದೆಸೆಯಾನೆ ಬಿರ್ಚೆ ಕಿವಿಯಂ ಮಾರ್ತಂಡ ಸಪ್ತಾಶ್ವ ಮಂ || ಡಳಿ ಶಂಕಾಕುಳಿತಂ ಪೆಡಂನಗುತಿ ಶಕ್ರಾಲಿಂಗನಂಗೆಯ್ಯ ಸ೦ | ಚಲಿಸುತ್ತುಂ ಶಚಿ ಪೂರ್ಣಿಸಿತ್ತು ವಿಜಯಪ್ರಸ್ಥಾನ ಭೇರೀರವಂ || ೧೮ || ಕ೦ !! ಬಲಭದ್ರನ ನಿರ್ಮಲ ಕೀ. .ರ್ತಿ ಲತಾ ಕ೦ದಳ ಮೆನಿಪ್ಪ ಸನ್ನೆರಡುಂ ಮಂ ||