ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ್ರಯೋದಶಾಶ್ವಾಸಂ ಕಂ|| ಶ್ರೀ ಸುಕೃತಕ್ಕಾತ್ಮ ವಚ ಶ್ರೀ ಸೂಕೃತ ಸಂಪದಕ್ಕೆ ತೊಡವೆನೆ ಜಸವಾ | ಶಾ ಸುದತಿಗೆ ಸಾಹಿತ್ಯಕ ಲಾ ಸುಭಗಂ ಪೆಂಪುವೆತ್ತನಭಿನವಪಂಪಂ || ೧ || ಆ ಸಮಯದೊಳ್ ಮ! ಪ್ರ! ಜನಿತಾ ಕೋಲಾಹಲಂ ಕಾಹಳ ಬಹುವಿಧ ವಾದ್ಯಸ್ವನಂ ಶ೦ಖ ಭೇರೀ | ಧ್ವನಿ ಹೇಷಾಬ್ಬಂಹಿತಂಗಳ್ ವಿಲಯ ಜಲನಿಧಿ ಧ್ಯಾನವೆಂಬನ್ನೆಗಂ ಭೋ! ಕನೆ ಕರ್ಣಾಭೌರ್ಣಮಂ ಸಾರ್ತರೆ ಮುನಿದಸುರಂ ಪೊಯ್ಕೆ ಪೊಣ್ಮತ್ತು ಚಂಡಾ। ಶನಿಘೋಷಂ ಲೋಕಮಂ ಮೂವಳಸುವಳಸೆ ಸನ್ನಾಹಭೇರೀ ನಿನಾದಂ ||೨|| ಕಂ || ಎನಗೆ ರಣ ರಭಸದಿಂ ಗಡ ಮನುಜಂ 1ಮೇಲೆತ್ತಿ ಬಂದನಿಂ ದೋಃಕಂಡೂ || ಯನನುಂ ಕುಲೆಡೆಯಾ ಹೈನುತ್ತು ಮುತ್ತರಳ ತಾಮ್ರ ಲೋಚನನಾದಂ 1| ೩ | ಆಗಳಾ ಭೇರೀರವನ೦ಬರವನಾವರಿಸುವುದುಮತ್ತ ಭಾಸ್ಕರ ಪುರದ ಪಯೋ ಧರಪುರದ ಕಾಂಚನಪುರದ ಕಂಪನಪುರದ ಮ್ಯೂಮಪುರದ ಮೋಮವಲ್ಲಭ ಪುರದ ಗಂಧರ್ವಪುರದ ಶಶಿಮಂದಿರಪುರದ ಶಿವಮಂದಿರಪರದ ಸಿಂಹಪುರದ ಲಕ್ಷ್ಮೀಪುರದ ಮಹಾ ಶೈಲಪುರದ ಚಕ್ರಪುರದ ಸೀಮಂತಪುರದ ಮಲಯಪುರದ ಶ್ರೀಗುಹಾಪುರದ ಅಶ್ವಪುರದ ಚಂದ್ರಪುರದ ಕಿರಿಂಜಯಪುರದ .ಶಶಿಸ್ಥಾಪನಾಪುರದ ಮಾರ್ತಂಡಪುರದ ಸಹಸ್ಥಾಪನ ಪುರದ ವಿಶಾಲಸ್ಥಾಪನಪುರದ ಜಯಪುರದ ಪರೀಕ್ಷಾ ಪುರದ ವಿಶ್ವಪುರದ ಶ್ರೀಚಂದ್ರಪುರದ ಗಜಪುರದ ಗೋಪುರದ ಮಹಿಷೀಪುರದ ರತ್ನ ಪುರದ ವಿದ್ಯಾಧರರ್ ಮೊದಲಾಗೆ ಹಲವು೦ಪುರದ ವಿದ್ಯಾಧರರಾಜರೆಲ್ಲಂ ತಂತಮ್ಮ ಸಮಗ್ರ ಸಾಮಗ್ರೀಸಹಿತರಾಗಿ ಬಂದು ಕೂಡುವುದುಮವರಂ ಸನ್ಮಾನ ದಾನಪುರಸ್ಪರಂ ಸಂತೋಷಂಬಡಿಸಿ ಚತುಸ್ತ್ರಿಂಶತ್ಸಹಸ್ರಾಕ್ಷೌಹಿಣೀ ಬಲ೦ಬೆರಸು ದಶಗ್ರೀವಂ ರಣ ರಸೋದ್ದಿವನಾಗಿರ್ದನಾ ತ್ರಿಖಂಡ ಮಂಡಲಾಧಿಪತಿಯೊಳ್ 1. ಮುನಿದೆ. ಗ. . 2. ಮಂಡಲ, ಕ. .