ತ್ರಯೋದಶಾಶ್ವಾಸಂ ೩೮೧ ರ್ಗವನೆಳಸಿ ಬಳಸಿ ನಡೆದ ಸಮರ ಕೊಣಿಗೆ ಸುಷೇಣನು೦ ಜಾ೦ಬವನುಂ | ೨೬ || ಅ೦ತು ನಿಜ ನಾಮಾಂಕಿತ ವಿಜಯ ವೈಜಯಂತಿಗಳ೦ಬರಮನಳ್ಳಿ ಆಿಯೆ ಚಾ೦ಬವಾಂಗದ ಸುಷೇಣ ಪ್ರಮುಖ ನಿಖಿಲ ವಲೀಮುಖ ಧ್ವಜಪ್ರಧಾನ ರಣ ರಸಿಕರಾಗಿ ನಡೆದರ್ ಮತ್ತಂ ಪ್ರಭಾಮಂಡಲನುಂ ಮಹೇಂದ್ರನುಂ ಚ೦ದ್ರಾಭನುಂ ಮಹಾಬಲನುಂ ಸಮುನ್ನ ತಬಲನುಂ ಸರ್ವ ಪ್ರಿಯನುಂ ದುರ್ಬುದ್ದಿಯುಂ ಶರಭ ನುಂ ಪ್ರೀತಿ೦ಕರನುಂ ಅನುಂದರನುಂ ದೃಢರಥನುಂ ಕುಮುದಾವರ್ತನುಂ ಸೂರ ಜ್ಯೋತಿಯುಂ ವಿಜಯಾಶ್ರಯನುಂ ವಿಮಲಸಾಗರನುಂ ಸನ್ಮಾನನುಂ ರತಿವರ್ಧನನು ಮೆಂಬ ಹೆಸರ ನಾಯಕರುತ್ವಾ ಯಕರಾಗಿ ನಡೆದರ್ ಮತ್ತ೦ ಕಂ | ಓರೊರ್ವರ ಚತುರಂಗಮ ನಾರೆಣಿಸ೮ ನೆ ಜನೆವರೆನೆ ರಣಾನಕ ರುತಿ ದಿ || ಗ್ಯಾರಣಮನೆಯೇ ಖೇಚರ ವೀರರಗುರ್ವವೆ್ರ ಸಂಗರ್ವಿಗೆ ಬಂದರ್ | ೨೭ | ಜವದೊಳ್ ದೊರೆಯೆನಿಸುವ ಖಚ ರ ವೀರ ಭಟರೇ ಆ ಪುಲಿಯ ರಥನಂ ಸಮರೋ !) ತೃವದಿಂ ನಡೆದರ್ ದಶವದ ನ ವರೂಥಿನಿಯಂ ಜವಂಗೆ ಬಾಣಸುಗೆಯ್ಯಲ್ || ೨೮ || ಪ್ರಸ್ತಾರಂ ದೋರ್ಬಲಮಂ ದುಸ್ತರಮಂ ಬೀಜಲೆಂದು ರಣಭೂಮಿಗೆ ತೇ | ಜಸ್ತರಣಿ ನಡೆದನಹಿತ ತ ಮಸ್ಕೊನನನಳುರೆ ಮಂಡಲಾಗ್ರ ಮಯೂಖಂ || ೨೯ || ಮತ್ತ೦ ವಿಪಕ್ಷಬಲ ಕುಧರಕುಲಿಶ ಪ್ರಹಾರನೆನಿಸಿದ ಪ್ರಸ್ತಾರನುಂ ಕದನಕೇಳಿ ಕೃತಾ೦ತನೆನಿಸಿದ ಹಿಮವಂತನುಂ ರಿಪುಮನೋಭ೦ಗನೆನಿಸಿದ ಭಂಗನುಂ ಪ್ರಚಂಡ ಪ್ರತಾಪನೆನಿಸಿದ ಪ್ರಿಯರೂಪನುನಾದಿಯಾಗೆ ಗಗನಚರ ಗಜಾರೋಹಕರಂಕುಶದ ಮಸೆಗಳ ಗಗನ ತಲಮನಾವರಿಸೆ ರಣಕೊಣಿಗೆ ನಡೆದರ್ ಮತ್ತಂ ಯಮ ಸಮಕಕ್ಷ ನೆನಿಪ ದುಪ್ರೇಕ್ಷನುಂ ರಿಪುಘಟಾ ವಿಘಟನ ಮೃಗೇಂದ್ರನಪ್ಪ ಪೂರ್ಣಚಂದ್ರನುಂ ಪ್ರಥನ ರಥ ಪಯೋಧಿಯಪ್ಪ ಸುವೀಧಿಯುಂ ರಿಪುಹೃದಯ ವಿದಾರಣ ರಣಾನಕ ಸ್ವನನೆನಿಪ್ಪ ನಿಸ್ವನನುಂ ನಿರ್ಜಿತಾನೇಕ ವಿಗ್ರಹನೆನಿಪ್ಪ ಪ್ರಿಯನಿಗ್ರಹನುಂ ಮೊದ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೭೧
ಗೋಚರ