೪೧೮ ರಾಮಚಂದ್ರಚರಿತಪುರಾಣಂ ಕಂ || ಗಗನ ಚರಂ ಅಕ್ಷೆಧರ | ನಗಣ್ಯ ಪುಣ್ಯ ಪ್ರಭಾವದಿಂ ಮತ್ತೊರ್ವ೦ !! ಗಗನ ತಳಂ ನಿಜ ಭೂಷಾಂ ಶುಗಳಿ೦ ಪ್ರಜ್ವಳಿಸುವಂತು ಬೇಗಂ ಬಂದಂ !! ೪೬ || ಅಂತು ಬಂದು ಬೀಡಂ ಪುಗುವಲ್ಲಿ ಕಾಪಿನವರಡ್ಡ೦ಬರ್ಪುದುಮಾತಂ ರಥ ನೂಪುರಚಕ್ರವಾಲಪುರದಿಂ ಕಾಳೆಗದ ಸುದ್ದಿ ಯ೦ ಜನಕನಾರಯ್ಯ ಲಟ್ಟಿ ದೊಡೆ ಬಂದೆನೆಂದವರನುಮತದಿಂ ಪ್ರಭಾಮಂಡಲನಂ ಬಂದು ಕಂಡು ತನ್ನ ಬಂದ ಬರವ ನಜಿಪಿ ಸೌಮಿತ್ರಿಯ ಮಾರ್ಛಾ ಪ್ರಪಂಚಮನವರ ದೆಸೆಯಿನ ದಾ ದಿವ್ಯ ಶಕ್ತಿ ಯಿಂದಾದಪಾಯಮನಪಹರಿಸುವುಪಾಯಮನಾಂ ಬಲ್ಲೆನೆಂಬುದುಂ ಪ್ರಭಾಮಂಡ ಲಂ ಪ್ರಮೋದ ಮುದಿತ ಹೃದಯನಾತನಂ ರಾಮಸ್ವಾಮಿಯಲ್ಲಿ ಗುಯ್ದು ದುಮಾತಂ ಸಾಷ್ಟಾಂಗ ಪ್ರಣತನಾಗಿ ದೇವ ಭವತ್ಪ ಸಾದದಿಂ ಲಕ್ಷ್ಮೀಧರಂಗೆ ಸರ್ವ ಕ್ಷೇಮ ಮಕ್ಕುವಾ ದೆಸೆಗುಮ್ಮಳಿಸದೆನ್ನ ಬಿನ್ನಪಮನವಧರಿಸುವುದೆಂದಿಂತೆಂದು ಚ | ನಿರುಪಮ ದೇವನೀತ ಪುರಮೆಮ್ಮ ಪುರಂ ಪುರ ವಲ್ಲಭಂ ಕಲಾ | ಪರಿಣತನೆನ್ನ ತಂದೆ ಶಶಿಮಂಡಲನಾನತಿ ಚ೦ದ್ರನೆಂಬ ಖೇ !! ಚರನೆನದೊರ್ಮೆ ವಾಯು ಪಥದೊಳ್ ಪರಮೋತೃವದಿಂ ವಿಹಾರಿಸು | ತಿರೆ ಪಗೆವಂ ಸಹಸ್ರವಿಜಯಂ ಕಡುಕೆಯ್ದಿ ದಿರಾಗಿ ತಾಗಿದಂ || ೪೭ || ಅಂತು ತಾಗೆ ಒರಿದುಪೊರ್ವರುಂ ಭರಂಗೆಯು ಕಾದುರ್ದು-- ಕಂ !! ಅವನಿಟ್ಟ ಶಕ್ತಿಯಿ೦ದಾಂ ಜವನ ಅದು ನಭೋವಿಭಾಗದಿಂ ಸಾಕೇತ | ಕೃವತರಿಸಿ ಮಹೇಂದ್ರೋದ್ಯಾ ನ ವನದ ತುಟಿಲ ತಾಣದೊಳ್ ಬಿದ್ದಿರ್ದೆ೦ || ೪೮ 11 ಚ ॥ ಭರತನುಮೆನ್ನ ಪುಣ್ಯವಶದಿಂದಿರದಲ್ಲಿಗೆ ಬಂದು ಮೂರ್ಛವೋ !, ಗಿರೆ ಕೃಪೆಯಿಂದಮೆನವಲೋಕಿಸಿ ದಿವ್ಯ ಸುಗಂಧ ತೇಯನಂ || ತರಿಸಿ ಮದಂಗದೊಳ್ ತಳಿಯೆ ಶಕ್ತಿಯ ಶಕ್ತಿ ಪೊಡರ್ಪುಗೆಟ್ಟು ಚ | ಚರಮದು ಪಿಂಗೆ ಮುಚ್ಚೆದಿಳಿದೆಂ ಮರವಟ್ಟವನೇ ಮಾತ್ರೆಯಿಂ || ೪೯ || ಅಂತು ಮೂರ್ಛಯಿಂದೆಬ್ಬಿತ್ತು ಕತಿಪಯ ಪರಿಜನಂಬೆರಸಿರ್ದು ಭರತನಂ ಕಂಡಕಾರಣ ಬಂಧುವಪ್ಪ ನಿನ್ನ ದೂಸಅಂದೆನಗೆ ಪುನರ್ಜನ್ಮವಾದುದೀ ಗಂಧ ಸಲಿಲಕ್ಕಿನಿತು ಸಾಮರ್ಥ್ಯವಾದ ಕಾರಣಮಂ ಪೇಳ್ವುದೆನೆ ಭರತನಿಂತೆಂದನೆಮ್ಮ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೦೮
ಗೋಚರ