ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಶ್ವಾಸಂ ೪44 ಕಂ || ಜಾನಕಿ: ಮೂರ್ಛಿತೆಯಾಗೆ ದ ಶಾನನನನುಕಂಪ ಪುಟ್ಟಿ ಕರುಣಿಸಿ ತನ್ನ೦ || ತಾನ ಪಟಿದುಬಿದು ಕರ್ಮಾ ಧೀನ ಸಮುತ್ಪನ್ನ ದುರಘ ದುಷ್ಪರಿಣತಿಯಂ || ೧೧೧ 11. ಕದಡಿದ ಸಲಿಲಂ ತಿಳಿವಂ ದದೆ ತನ್ನಿಂ ತಾನೆ ತಿಳಿದ ದಶವದನ೦ಗಾ || ದುದು ವೈರಾಗ್ಯಂ ಸೀತೆಯೊ ತುದಾತ್ರನೊಳ್ ಪುಟ್ಟದಲ್ಲಿ ನೀಲೀರಾಗಂ || ೧೧೨ | ಪತ್ತು ವಿಡದಿರ್ದನೇ ರವಿ ಪದ ಸ೦ಧ್ಯಾನುರಾಗಮಂ ಮನದ ಪಿಂ || ದೆತ್ತಾನುಂ ಪೊಲ್ಲೆನಿಪುದ ನುತ್ತ ಮನಾಚರಿಸಿ ಪತ್ತು ವಿಡದಿರ್ದಪನೇ !! ೧೩ || ಅಂತು ಮನದೊಳೊಗೆದ ಕಾರುಣ್ಯ ರಸಮೆ ಸೀತೆಯೊಳಾದನುರಕ್ತತೆಯಂ ಕರ್ಚಿ ಕಳೆವುದುಂ ಸ್ವಭಾವ ಪರಿಣತಿಯೊಳ್ ನಿ೦ದು ಸ್ವಕೀಯಾಪ್ತ ಪುರುಷ ಪರಿಷ ಜನಕ್ಕಿಂತೆಂದಂ ಚ ॥ ಗುಣ ಪರಿಪಾಲನಾರ್ಥಮನಗಂ ಬಗೆದೋರಿದಳಿಲ್ಲ ದಿವ್ಯ ಭೂ | ಷಣ ವಸನಾಂಗರಾಗಮುಮನೊಲ್ಲದೆ ಖೇಚರ ರಾಜ್ಯ ಲಕ್ಷ್ಮಿಯ೦ || ತೃಣ ಸಮನಾಗೆ ಭಾವಿಸಿದಳೀ ಸತಿಯುಂ ಮೊದಲಾಗಿ ಪೌರುಷ | ಪ್ರಣಯಿಯೆನಿಂತಪೇಕ್ಷಿಸುವೆನೇ ಗುಣಹಾನಿಯನೆನ್ನ ಪಾಪದಿಂ || ೧೧೪ || ಕಂ ॥ ಇವರಂ ಪ್ರಾಣಪ್ರಿಯರಂ ನೆವಮಿಲ್ಲದೆ ಕರ್ಮವಶಮೆ ನೆವ ಮನೆ ಕಂದ | ರ್ಪ ವಿಮೋಹದಿಂದಗಲ್ಲಿದೆ ನವಿವೇಕಿಯನೆನ್ನ ಕುಲದ ಹೆಂಪುವಿನೆಗಂ || ೧೧೫ || ರಾಮನನಗಲ್ಲಿ ತಂದಾ ನೀ ಮಾನಿನಿಗಿನಿತು ದುಃಖಮಂ ಪುಟ್ಟಿಸಿದೆಂ !! ಕಾಮ ವ್ಯಾಮೋಹದಿನಾ ಶಾ ಮುಖಮಂ ಪುದಿಯೆ ದುರಶಃಪಟಹ ರವಂ | ೧೬ || 37