ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ವಾಸಂ ೪೬ ದರವಿಜಯಲುರ್ಚಿದುವೆಂದುಂ ಕಣೋಲದೊಳ್ ಸುವ ಕಾಲಾಯಸ ಕಾಲ ಪುರುಷನಂ ಕಾಳಗಕ್ಕೆ ಜವಂ ನೆರಂಬಂದಪ್ಪನೆಂದುಮಾಗಸದೊಳೊಗೆವ ಧೂಮ ಕೇತುಗಳಂ ವಿಜಯ ಕೇತುಗಳೆಂದುಂ ಕಣ್ಳುಳ್ಳು ವುಲ್ಲಾ ಪಾತಮಂ ನಿಜಪ್ರತಾ ಪಾನಲ ಸುಲಿಂಗಂಗಳೆಂದುಮಭೂತ ಪೂರ್ವನಪ್ಪುತ್ತಾತಂಗಳನೇನುಮಂ ಬಗೆಯದೆ ಕೋಪಮನೆ ಬಗೆದು ಮ: ಪ್ರರದನಂಗಳ್ ನಾಲ್ಕ೦ದದ್ಭುತವೆನಿಪ ಸಹಸ್ರ ದ್ವಿಪ ಸ್ಕಂಧದೊಳ್ ಪೂ | ಡಿದ ವಿದ್ಯಾದೇವತಾ ನಿಶ್ಮಿತ ರಥವನತಿಕ್ಟೋಭದಿಂದೇಜಿ ಬ೦ದ೦ || ಕದನ ಕೋಣೀ ತಲಕ್ಕುನ್ನಮಿತ ಬಹು ಪತಾಕಾ ಪಟಚ್ಛನ್ನ ಮೇಘಾ | ಸ್ಪದಮಂ ಸಂಗ್ರಾಮ ಬೇರೀರವ ಬಧಿರಿತ ನಾನಾ ದಿಶಾಸ್ಯಂ ದಶಾಸ್ಯಂ || ೧೨೯ || ಅಂತು ಬಂದು ಸಂಗ್ರಾಮ ಭೂಮಿಯೊಳೊಡ್ಡಿ ನಿಲ್ವುದುಂ ಕಂ || ಈ ತೋರ್ಪುದಚಲನೋ ಜೀ ಮೂತನೋ ಪೇರೆಂದು ಪೊಳವುದ೦ ಜಾ೦ಬವನ೦ || ಕೌತುಕದಿಂ ಬೆಸಗೊಂಡಂ ಸೀತಾರಮಣಂ ದಶಾಸ್ಯನೇ ಆದ ರಥಮಂ ೧೩೦ || ಅ೦ತು ಬೆಸಗೊಳ್ಳುದು೦ ಜಾ೦ಬವನದು ದೇವ ರಾವಣನ ಬಹುರೂಪಿಣೀ ಎದ್ಯಾ ವಿನಿರ್ಮಿತ ವರೂಥಮೆಂಬುದುಂ ಲಕ್ಷಣಂ ಕೇಳು ಸನ್ನಾಹ ಭೇರಿಯಂ ಪೊಯಿಸೆ ಕಂ || ಆರಾಧಿಸಿ ಪಡೆದಂ ಗಡ ತೇರಂ ದೋಸ್ವಾರನಲ್ಲದ೦ಗೇವದೊ ಪೇರ್ತ 1 ತೇರೆಂದು ಸಿಂಹ ರಥಮುಂ ಪೀರಶ್ರೀ ರಮಣನೇ ಆದಂ ರಘುವೀರಂ || ೩೧ || ವಿಗ್ರಹ ಭೂಮಿಯೊಳಿಂದು ದ ಶಗ್ರೀವನನಿಕ್ಕಿ ವಿಜಯ ಲಕ್ಷ್ಮಿಯೊಳಾ೦ ಸಾ | ಣಿ ಗ್ರಹಣಮನೊಡರಿದೆನೆಂ ಬಾಗ್ರಹದಿಂ ಕೃಷ್ಣನೇ ಆದಂ ಸ್ವಂದನಮಂ || ೧೩೨ | ಅಂತು ಸಿಂಹ ಗರುಡ ವಾಹಿನೀ ರಥಂಗಳಂ ರಾಮಲಕ್ಷ್ಮಣರೇ ಆ ವಿದ್ಯಾ ಪರಮೇಶ್ವರರಪ್ಪ ವಿದ್ಯಾಧರರಿಂ ಪರಿವೃತರಾಗಿ ಚತುರಂಗ ಬಲ ಸಮರ್ತ ಶುಭ ಶಕುನಂಗಳನಿದಿರ್ಗೊಳುತ್ತುಂ ಸಂಗ್ರಾಮ ಭೂಮಿಗೆ ಬಂದೊಡ್ಡಿ ನಿಲ್ವುದುಂ ರಾವಣಂ