ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫೮ ರಾಮಚಂದ್ರಚರಿತಪುರಾಣಂ ಅದಂ ನಾರದನವಧಾರಿಸಿ ರಾಮಲಕ್ಷ್ಮಣರ ಕ್ಷೇಮವಾರ್ತೆಯಂ ನಿಮಗಿ೦ದೆ ತಂದಹೆನೆಂದಪರಾಜಿತಾಮಹಾದೇವಿಯ ಮನೋವಿಷಾದಮಂ ಕಳೆದು ಕಂ | ನೀರದ ಪಥಕ್ಕೆ ಭೋಂಕನೆ ನಾರದನೊಗೆದೆಯೇ ಲಂಕೆಯಂ ತನು ರುಚಿ ನೀ || ಹಾರನನಾದರ್ಪಿಸೆ ಬಲ ನಾರಾಯಣ ದೇವರಿರ್ದ ಸಭೆಯಂ ಪೊಕ್ಕಂ || ೧೫ || ಅ೦ತು ಪುಗುವುದುಂ ರಾಮಸ್ವಾಮಿ ನಾರದನಪ್ಪು ದನ ಆದು ಬೇಗಮಿದಿರೆಟ್ಟು ಮಣಿಮಯಾಸನದೊಳಿರಿಸಿ ಕನಕ ಪಾತ್ರದೊಳರ್Fವುಂ ಕೊಟ್ಟು ನೀವೀ ರಣ ನಿರೀಕ್ಷಣಂ ಮಾಡದೆತ್ತಲಿರ್ದಿರೆಲ್ಲಿಂ ಬ೦ದಿರೆಂಬುದುಂ ನಾರದನಿಂತೆಂದನಾಮಾ ದೇಶದಿಂ ಪೋಗಿ ಧಾತಕೀಷಂಡದ ಪೂರ್ವವಿದೇಹದ ಸುರೇಂದ್ರರಮಣ ಪುರದೊಳ್ ತೀರ್ಥಕರ‌ ಜನಿಯಿಸಿದೊಡವರ್ಗೆ ಜನ್ಮಾಭಿಷೇಕಮಂ ಸಕಲ ಸುರವರ‌ ಸುರ ಗಿರಿ ಮಸ್ತಕದೊಳ್ ಮಾಲ್ವಿದಂ ನೋಡುತ್ತು ನಿರ್ದಿಗಳ ಯೋಧ್ಯೆ ಯ೦ ಪೊಕ್ಕು ಅಪರಾಜಿತಾ ಮಹಾದೇವಿಯರುಮಂ ಸುಮಿತ್ರಾದೇವಿಯರುಮಂ ಕಂಡೆನವರ್ ನಿಮ್ಮ ಸಮಯದೊಳ್ ಕಾಣದಿರ್ದೊಡೆ ನಿಶ್ಚಯ೦ ಶರೀರತ್ತಾ ಗಂಗೆಯ್ಯರೆಂ ದಜಿ ಪುವುದುಂ ಕಂ ॥ ಆ ಮಾತು ಮುಟ್ಟೆ ಕಿವಿಯಂ ರಾಮಂಗಂ ಲಕ್ಷ್ಮಣಂಗಮುದ್ವೇಗಂ ನಿ | ಸೀಮಂ ಸಮನಿಸೆ ತಮ್ಮ ತಾಮೆ ಕೃಪಾಶೂನ್ಯರೆಂದು ನಿಂದಿಸಿ ಕೊಂಡರ್ || ೧೬ || ಅಂತು ನಿಜ ಜನನಿಯರನಗಲ್ಲು ಬಹುಕಾಲಮತಿಕ್ರಾಂತವಾದುದೆಂದು ಕಟ್ಟು ಕಡೆದು ಕಂ | ನಮ್ಮಲ್ಪ ವಿಭವಮಂ ಸುಖ ಮಮ್ಮನದೊಳ್ ಬಗೆದು ಬಗೆದವಿಲ್ಲುಟಿದುದನೆಂ || ದುಮ್ಮಳಿಸಿ ವಿಭೀಷಣನಂ ತಮ್ಮಲ್ಲಿಗೆ ಬರಿಸಿ ರಾಮಲಕ್ಷ್ಮಣರೆಂದರ್‌ ಅವಧಿಯ ವರ್ಷoಗಳ್ ತೀ ರ್ದುವಯೋಧ್ಯೆಗೆ ಪೋಗದ೦ದು ಜನನಿಯರುಂ ಬಾಂ | ಧವರು ಖೇದಿಸುವರ್ ಪೋ ಗವೇಲ್ಪುದೆಂದeುಪಿ ತಮ್ಮ ಗಮನೋದ್ಯಮಮಂ || ೧೮ || 11 ೧೭ ||