ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪರಾಮಾಯಣದ ಕಥೆ

41

ಅಟ್ಟದಳು. ರಾವಣನು ಅವಳ ಮಾತುಗಳನ್ನು ಕೇಳಿ ಪಾಪಕ್ಕೂ ನಿಂದೆಗೂ ಮನಕ್ಕೊಪ್ಪದೆ ವಿಭೀಷಣನನ್ನು ಬರಿಸಿ ರಹಸ್ಯದಲ್ಲಿ ಇದನ್ನು ತಿಳಿಸಲು, ಆತನು ವಿದ್ಯಾ ಪ್ರಾಕಾರವನ್ನು ಕೆಡಿಸುವ ಪ್ರತಿ ವಿದ್ಯೆಯನ್ನು ಕಲಿತುಕೊಳ್ಳುವುದಕ್ಕಾಗಿ ಆಕೆ ಯನ್ನು ಕರೆಯಿಸಿ ಹುಸಿಮಾತಿನೊಡನೆ ನಂಬಿಸಿ ವಿದ್ಯೆಯನ್ನು ಕಲಿತುಕೊಳ್ಳುವುದು ಸರಿಯೆಂದು ಹೇಳಿದನು. ಆಗ ರಾವಣನು ದೂತಿಯ ಮಾತಿಗೆ ಒಡಂಬಟ್ಟಿ ನೆಂದು ಹೇಳಿ ಉಪರ೦ಭೆಯನ್ನು ಕರೆತರುವಂತೆ ತಿಳಿಸಲು ಕೂಡಲೆ ಅವಳು ಹೋಗಿ ಕರೆತ೦ದಳು. ರಾವಣನು ಉಪರ೦ಭೆಗೆ ಹುಸಿಯಾದ ಪ್ರೀತಿಯನ್ನು ತೋರಿಸಿ ತನಗೂ ಅವಳಿಗೂ ದುರ್ಲ೦ತ್ಯ ಪುರದಲ್ಲಿ ಕೂಟವಾಗುವಂತೆ ಮಾಡೆಂದು ಹೇಳಲು, ಅವಳು ಕುಲಹಾನಿಯನ್ನೂ ಪತಿ ಗಾಗುವ ಕೇಡನ್ನೂ ಬಗೆಯದೆ ಹಾಗೆಯೇ ಮಾಡುವೆನೆಂದು ಹೇಳಿ ಸಾಲವಿದ್ಯಾ ಭೇದಿನಿಯಾದ ಪ್ರತಿವಿದ್ಯೆಯನ್ನು ರಾವಣನಿಗೆ ಕೊಟ್ಟಳು. ಮರು ದಿವಸ ರಾವಣನು ಈ ಪ್ರತಿವಿದ್ಯೆಯ ಸಹಾಯದಿಂದ ದುರ್ಲಂಘ್ಯಪುರವನ್ನು ಮುತ್ತಲು ನಳಕೂಬರನು ಯುದ್ಧ ಸನ್ನದ್ದನಾಗಿ ಬಂದು ಲಕ್ಷ್ಯಮಾಡದೆ ಯುದ್ದ ಮಾಡುತ್ತಿರುವಲ್ಲಿ ವಿಭೀಷಣನು ಅವನನ್ನು ಸೆರೆಹಿಡಿದನು. ಆ ಸಮಯದಲ್ಲಿ ರಾವಣನ ಆಯುಧಾಗಾರದಲ್ಲಿ ಮಹತ್ತರವಾದ ಸುದರ್ಶನ ಚಕ್ರವು ಹುಟ್ಟಿತು. ರಾವಣನು ಅದನ್ನು ಮಹೋತ್ಸವದಿಂದರ್ಚಿಸಿ ಉಪರ೦ಭೆಯನ್ನು ರಹಸ್ಯವಾಗಿ ಕರೆಯಿಸಿ ಅವಳು ವಿಶುದ್ದವಾದ ಕುಲದಲ್ಲಿ ಹುಟ್ಟಿದವಳಾದುದರಿಂದ ಶೀಲ ಸರಿ ಪಾಲನೆಯನ್ನು ಮಾಡುವುದು ತಕ್ಕದ್ದೆಂದೂ ತನಗೆ ವಿದ್ಯೋಪದೇಶವನ್ನು ಮಾಡಿದುದರಿಂದ ಆಕೆಯು ಗುರುವಾದಳೆಂದೂ ತಿಳಿಸಿ ಮತ್ತೇನನ್ನೂ ಬಗೆಯದೆ ನಳಕೂಬರನಲ್ಲಿ ಕೂಡಿ ಸುಖದಿಂದಿರೆಂದು ಹೇಳಿ ಅವಳ ದುಷ್ಪರಿಣಾಮವನ್ನು ತಪ್ಪಿಸಿದನು. ಕೂಡಲೆ ನಳಕೂಬರನನ್ನು ಬರಿಸಿ ತನ್ನ ಹಿರಿಯ ಮಗನಾದ ಇಂದಗಿಗಿ೦ತಲೂ ಹೆಚ್ಚಾಗಿ ಮನ್ನಿಸಿ ಅವನ ಭಯವನ್ನು ಕಳೆದು ಅವನನ್ನು ತನ್ನ ಸಾಮಂತನನ್ನಾಗಿ ಮಾಡಿ ಅವನೊಡನೆ ಇಂದ್ರನಮೇಲೆ ದಂಡೆತ್ತಿ ಹೋದನು.
ಇಂದ್ರನಿಗೂ ರಾವಣನಿಗೂ ಘೋರ ಯುದ್ಧವು ನಡೆದು ರಾವಣನು ಇಂದ್ರ ನನ್ನು ಸೆರೆಹಿಡಿದುಕೊಂಡು ಹೋದನು. ಆಗ ಇಂದ್ರಜಿತ್ಕುಮಾರನು ಇಂದ್ರನ ಮಗನಾದ ಜಯಂತನನ್ನು ಸೆರೆಹಿಡಿದು ತಂದು ರಾವಣನಿಗೊಪ್ಪಿಸಲು ಎಲ್ಲರೂ ಸೇರಿ ಹೊರಟ ಮಹಾ ವಿಭವದಿಂದ ಲಂಕೆಯನ್ನು ಸಹಸ್ರಾರನು ಮಗನ ಮೇಲಣ ಮೋಹದಿಂದ ಲಂಕೆಗೆ ಬರಲು ಆತನನ್ನು ರಾವಣನು ತಕ್ಕ ಮರ್ಯಾದೆಯೊಡನೆ ಕಂಡು ತನ್ನ ತಂದೆಗಿಂತಲೂ ಹೆಚ್ಚಾಗಿ ಮರ್ಯಾದೆ ಮಾಡಿ ಕುಳ್ಳಿರಿಸಿ ಅಪ್ಪಣೆಯೇನೆಂದು ಕೇಳಲು ಇಂದ್ರನನ್ನು ಬಿಟ್ಟುಬಿಡೆಂದು ಹೇಳಿದನು. ಅದಕ್ಕೆ ರಾವಣನು ಮಹಾಪ್ರಸಾದವೆಂದು ಹೇಳಿ ಇಂದ್ರನನ್ನು ಬರಿಸಿ ತನ್ನ ರಾಜ್ಯದಲ್ಲಿ ತಾನು ಸುಖವಾಗಿರುವಂತೆ ಹೇಳಿ ಕಳುಹಿಸಿದನು. ಇಂದ್ರನು
6