ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಷೋಡಶಾಶ್ವಾಸಂ ಕಂ || ಶ್ರೀಕಾಂತಂ ವಿಶದ ಯಶ ಶ್ರೀಕಾಂತಂ ಚಂದ್ರಕಲಶನಂ ನಿಯಮಿಸಿದಂ || ಸ್ವೀಕೃತ ಸತ್ಸಂಗಂ ದೂ ರೀಕೃತ ದೋಷಾನುಷಂಗನಭಿನವಪಂಪ li ೧ 8 ಅ೦ತು ನಿಯಮಿಸುವುದು. ಪುರೋಹಿತಂ ಚಂದ್ರಕಲಶನನುದಿನಮಾ ಮಾರ್ಗದಿಂ ನೆಗತ್ತು ಮಿರ್ಪುದುಮಿತ್ತಲ್‌ ಕಂ ॥ ಆ ಸೀತೆ ಪೂರ್ಣಮೆನೆ ನವ ಮಾಸಂ ಶ್ರವಣ ಪ್ರಸಕ್ತನೆನೆ ತುಹಿನ ಕರಂ | ವಾಸವ ನಿಭರಂ ಶ್ರಾವಣ ಮಾಸದ ಹುಣ್ಣಿಮೆಯ ಪಗಲೋಳಮಳಂ ಪೆತ್ತ || ೨ || ಅ೦ತವಳಂ ಪೆತ್ತು ಮಹಾವಿಭೂತಿಯಿಂ ಜಾತೋತ್ಸವಮಂ ಮಾಡಿ ಶುಭ ದಿನ ಮುಹೂರ್ತದೊಳೆರ್ವರ್ ತನೂಭವರ್ಗ೦ ಲವನುಂ ಕುಶನುಮೆಂದು ಹೆಸರ ನಿಟ್ಟು ಶುಕ್ಲ ಪಕ್ಷದ ಚ೦ದ್ರಮನಂತನುದಿನೋಪಚಯಮನಪ್ಪುಕೆಯು ಶೈಶವನು ನಧಃಕರಿಸಿದಿಂಬಕ್ಕೆ | ೩ || ಕಂ || ಅವರಂ ಸಿದ್ದಾರ್ಥ೦ ಕಲಿ ಸುವುದುಂ ಕಲ್ಲರ್ ನಿರಂಕುಶರ್ ತಮ್ಮನ್ನರ್ || ಭುವನದೊಳಿಲ್ಲ೦ಬಿನೆಗಂ ಲವಾಂಕುಶರ್ ಕಲೆಗಳಂ ಚತುಷ್ಪಷ್ಟಿಗಳಂ ಮತ್ತಂ ಶಸ್ತ್ರಾಸ್ತ್ರವಿದ್ಯೆಗಳೆಲ್ಲಮಂ ನೆರೆಯೆ ಕಲ್ಲು ನವ ಯವನ ಪ್ರಾಪ್ತ ರಫ್ತುದುಂ ವಜ್ರಜಂಘಂ ಶಶಿಮಾಲೆಯೆಂಬ ತನ್ನ ಮಗಳೊರಸು ಮಾವರ್ನರ್ ಕನ್ನೆಯರಂ ಲವಂಗೆ ಕಲ್ಯಾಣೋತ್ಸವದಿಂ ಮದುವೆಯಂ ಮಾಡಿದಿಂಬಲಿಯಮಂ ಕುಶಂಗ ಪೃಥ್ವಿಪುರಮನಾಳ್ವ ಪೃಥುಗಮಾತನರಸಿಯಪ್ಪಮೃತಮತಿಗಂ ಪುಟ್ಟಿದ ಕನಕಮಾಲೆಯಂ ಬೇಡಿ ಪೆರ್ಗಡೆಗಳನಟ್ಟುವುದು ಮಾತನಿಂತೆಂದಂ