ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪ೦ಪರಾಮಾಯಣದ ಕಥೆ

43

ದವರು. ಸುರಾಸುರ ವಿಯಚ್ಚರ ಸೇನೆಯಲ್ಲಿ ಯಾರಿಗೂ ಯುದ್ದದಲ್ಲಿ ಸೋಲದ ಮೇಘವಾಹನನೂ ಇಂದಗಿಯೂ ರಾವಣನ ಕುಮಾರರು. ಅವನ ವಿಯಚ್ಚರ ಸೇನೆಯು ಅಸಾಧಾರಣವಾದುದು. ಭುಜಬಲದಲ್ಲಿಯೂ ವಿದ್ಯಾ ಬಲದಲ್ಲಿಯ ಮನೋಬಲದಲ್ಲಿಯೂ ಯಾವ ರಾಜನೂ ರಾವಣನನ್ನು ಜಯಿಸಲಾರನು. ದೇವೇಂದ್ರನಿಗೂ ಇವನನ್ನು ಗೆಲ್ಲಲು ಸಾಧ್ಯವಲ್ಲ” ಎಂದು ನುಡಿಯಲು, ಲಕ್ಷ್ಮಣನು ಕೋಪದಿಂದ ಕೂಡಿದ ಮುಗುಳ್ಳಗೆಯನ್ನು ನಕ್ಕು ಪರಿಹಾಸದ ಮಾತಿನಿ೦ದಿ೦ತೆ೦ದನು :- “ ಅಯ್ಯಾ ! ರಾವಣನ ಪರಾಕ್ರಮವನ್ನು ಇಷ್ಟು ವರ್ಣಿಸಲೇಕೆ ? ಅವನು ಸೀತಾದೇವಿಯನ್ನು ಕದ್ದುಕೊಂಡು ಹೋದುದೇ ಅವನ ಭೀತಿಯನ್ನು ತೋರಿಸುವು ದಿಲ್ಲವೆ ? ಇಕ್ಷಾಕು ವಂಶದವರನ್ನು ಗೆಲ್ಲಲು ರಾವಣನಿಗೆ ಸಾಧ್ಯವೆ? ರಾಮ ರಾವಣರ ಬಳ್ಮೆಯನ್ನು ನಾಳೆ ಯುದ್ಧರಂಗದಲ್ಲಿ ನೋಡುವಿರಿ. ಸಿಂಹವು ಆನೆಗಳನ್ನು ಗೆದ್ದಮಾತ್ರಕ್ಕೆ ಶರಭವನ್ನು ಗೆಲ್ಲಲಾ ಪುವ್ರದೆ ! ಕತ್ತಲೆಯು ದಟ್ಟವಾಗಿದ್ದ ಮಾತ್ರಕ್ಕೆ ಅದು ಸೂರನಿಗೆ ತಕ್ಕ ಹಗೆಯಾದೀತೆ ? ಅಜೇಯನಾದ ಬಲದೇವನಿಗೆ ರಾವಣನು ಎಷ್ಟು ಮಾತ್ರದವನು ? ”


ಆಶ್ವಾಸ ೧೧-ಲ೦ಕಾ ದಹನ

ಲಕ್ಷಣನು ರಾವಣನನ್ನು ಹಿಯ್ಯಾಳಿಸಿ ಮಾತನಾಡಿದುದನ್ನು ಕೇಳಿ ಜಾಂಬವನೇ ಮೊದಲಾದ ಸುಗ್ರೀವನ ಪ್ರಧಾನರು ತಮಗಧಿರಾಜನಾಗಿಯೂ ಖಚರ್ವಿಗೆ ವಲ್ಲಭನಾಗಿಯೂ ಇರುವ ರಾವಣನ ಮುಂದೆ ಇತರರ ಪರಾ ಕ್ರಮವು ಉಪಯೋಗವಾಗಲಾರದೆಂದೂ ಇತರ ರಾಜರು ಅವನಿಗೆ ಭಯಪಟ್ಟು ಅವನನ್ನು ಎದುರಿಸಲಾರರೆಂದೂ ಆದಕಾರಣ ದೇವಿಯನ್ನು ಭೇದೋಪಾಯ ದಿ೦ದಲೇ ತರತಕ್ಕದ್ದೆಂದೂ ಹೇಳಿದರು. ಇದಕ್ಕೆ ರಘುವೀರನು ಅಂತಹ ಭೀತರ ಸಹಾಯವು ತನಗೆ ಆವಶ್ಯಕವಿಲ್ಲವೆಂದೂ ಲಕ್ಷಣನು ರಾವಣನನ್ನು ದಂಡಿಸಲು ಶಕ್ತನೆಂದೂ ಅನ್ಯಸ್ತ್ರೀಯನ್ನು ಬಯಸಿದ ದುರಾತ್ಮನನ್ನು ದೆಸೆಬಲಿ ಕೊಡುವೆ ನೆಂದೂ, ಆದರೆ ಭಯಪಟ್ಟು ಜಾನಕಿಯನ್ನು ತಂದೊಪ್ಪಿಸಿದರೆ ರಾವಣನನು ಕಾಯುವೆನೆಂದೂ ಉತ್ತರಕೊಟ್ಟನು. ಇದನ್ನು ಕೇಳಿ ಜಾಂಬೂನದನು, ಹಿಂದೆ ದಶಗ್ರೀವನು ತನಗೆ ಯಾರ ಕೈಯಿಂದ ಮರಣವಾಗುವುದೆಂದು ಅನಂತವೀರ ಕೇವಲಿಗಳನ್ನು ಕೇಳಿದಾಗ ಅವರು ಸಿದ್ಧಶೈಲವನ್ನೆತ್ತಿದವನ ಕೈಯಲ್ಲಿ ಮರಣ ವಾಗುವುದನ್ನಲು ಅಂತಹ ಮಹಾ ಸತ್ವನು ಯಾವನೂ ಇಲ್ಲದುದರಿಂದ ತನಗೆ ಮರಣವಿಲ್ಲವೆಂದು ರಾವಣನು ಹರುಷಚಿತ್ತನಾದ ವೃತ್ತಾಂತವನ್ನು ತಿಳಿಸಿದನು.