ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ಷೋಡಶಾಶ್ವಾಸಂ ಶಾ || ನೀಡುತ್ತುಂ ಕುಮತಕ್ಕೆ ತೇಜದವಂ ವಿಖ್ಯಾತಿಯಂ ತಾಳಿದೊ | ಇಾಡಂ ಕೂಡೆ ತೊಳಲ್ಲು ಭವ್ಯ ಜನನಂ ರತ್ನತ್ರಯಾಲಂಕೃತಂ | ಮಾಡುತ್ತುಂ ದೆಸೆವೆಣ್ಣೆ ಧನ್ಮವಿಜಯ ಶ್ರೀ ಕೇಕರಾಲೋಕನ | ಕ್ರೀಡಾ ಮಂಡನಮಾಗೆ ಕೇವಲಿ ಕುಬೇರಾದ್ರೀ೦ದ್ರಮಂ ಮುಟ್ಟಿದಂ ॥ ೭೮ || ಮ ಪ್ರಕೃತಿಚ್ಛನ್ಮೂರ್ಧಾಭಿಷಿಕ್ತಂ ವಲಮೆನಿಸಿದ ಕೈಲಾಸ ಶೈಲೇಂದ್ರದೊಳ್ ಕ || ಲ್ಪತರು ಸ್ತೋಮ೦ಗಳಿ೦ ಮಂಡಲಿಸಿದ ಕನಕಾಂಭೋಜ ಷಂಡಂಗಳಿಂ ಮ೦|| ಡಿತಮಾದತ್ಯಂತ ಶುದ್ದ ಸ್ಪಟಿಕ ಮಣಿ ಶಿಲಾ ಪಟ್ಟದೊಳ್ ರಾಮಚಂದ್ರಂ | ಪ್ರತಿಮಾಯೋಗ ಪ್ರಯೋಗಂ ಗುಣಭವನ ಮಣಿಸ್ತಂಭಮಿರ್ಪಂತಿರಿರ್ದ೦॥೭೯॥ ಅ೦ತಿರ್ದು ಸೂಕ್ಷ್ಮಶರೀರ ಯೋಗದಿಂ ಸೂಕ್ಷ್ಮಕ್ರಿಯಾ ಪ್ರತಿಪಾತಿಯೆಂಬ ಪರಮ ಶುಕ್ಲ ಧ್ಯಾನದೊಳ್ ನೆಲಸಿ ಲಘು ಕರ ಪರಿಪಾತನಶಕ್ತಿ ಪ್ರಾಪ್ತಿ ನಿಮಿತ್ತಂ ದಂಡ ಕವಾಟ ಪ್ರತರ ಲೋಕ ಪೂರಣ ಕ್ರಿಯೆಗಳಂ ಪ್ರತಿಸಮಯಂ ಪ್ರಯೋಗಿಸಿ ನಾಲ್ಕು ಮಘಾತಿಕರ ಸ್ಥಿತಿಯ ಕಾಲಮಂ ಸದೃಶ೦ಮಾಡಿ ಮಲ ಶರೀರ ಪ್ರಮಾಣ ದೊಳೆ ನಿಂದು ವಾಲ್ಮನಃಕಾಯ ಯೋಗಮನಡ೦ಗಿಸಿ ಸಕಲ ಬದ್ಧಾಶ್ರವ ನಿರೋಧದಿ ನಯೋಗಿ ಕೇವಲಿ ಗುಣಸ್ನಾನಮಂ ಪೊರ್ದಿ ಸಮುಚ್ಛಿನ್ನ ಪ್ರಾಣಾಪಾನ ಪ್ರಚಾರ ಸಮುಚ್ಛಿನ್ನ ಕ್ರಿಯಾವೃತ್ತಿ ಧ್ಯಾನ ಪ್ರವರ್ತನಾ ಸರನಾಗಿ ಕಂ || ಪರಿಪೂ‌ಮೆನಿಸೆ ಗುಣ ಪರಿ ಕರಂ ಯಥಾಖ್ಯಾತ ಚರಿತನಾಗಿ ಜಿನಂ ಮು || * ರಮಾ ಕಚ ಗ್ರಹ ಸ್ತನ ಪರಿರಂಭಾರಂಭ ಕೋಳಿಗುತ್ತು ಕನಾದಂ !! ೮೦ | ಆಗಿ ತದುಪಾಂತ ಸಮಯದೊಳನ ತರ ವೇದನೀಯ ದೇವಗತಿ ತತ್ರಾಯೋ ಗ್ಯಾನುಪೂರ್ವ್‌ದಾರಿಕ ಶರೀರ ತದ್ಭಂಧನ ಸಂಘಾತ ಸಂಸ್ಥಾನಾಂಗೋಪಾಂಗ ಸ೦ ಹನನ ವರ್ಣ ಗಂಧ ರಸ ಸ್ಪರ್ಶ ಪ್ರಶಸ್ತಾ ಪ್ರಶಸ್ತ ವಿಹಾಯೋಗತಿ ಗುರು ಲಘಪಘಾತ ಪರಘಾತಾತಪೋದ್ರೂತೋಚ್ಛಾಸ ನಿಶ್ವಾಸ ಸತ್ಯಾಪ್ತಿ ಪ್ರತ್ಯೇಕ ಶರೀರ ಸ್ಥಿರಾಸ್ಥಿರ ಸುಭಗ ದುರ್ಭಗ ಸುಸ್ವರ ದುಗ್ಧರಾದೇಯಾನಾದೇಯ ಯಶಸೀರ್ತ್ಯ ಯಶಸೀರ್ತಿ ನಿರಾಣ ನೀಚೈರ್ಗೊತ್ರಂಗಳೆ೦ಬೇಲ್ಪತ್ತೆರಡುಂ ಪ್ರಕೃತಿಗಳಂ ದೂರೀಕೃತ೦ಮಾಡಿ ಕಂ 1 ಪ್ರಕೃತಿಗಳಗಿಯಿಂ ಶು ಕ್ರಿಕೆಯಿಂ ಪೋಳಿಮಟ್ಟ ಮೌಕ್ತಿಕಂ ನೀರದ ಮಾ || ಲಿಕೆಯಿಂ ತೊಲಗಿದ ಶಶಿ ಕಾ ಲಿಕೆಯಿಂ ಬೇರ್ಪಟ್ಟ ಕನಕಮಿರ್ಪಕತಿರ್ದ೦ || ೮೦ || 1. ಹೃತಿ, ಚ. 42