ಜಯಿಸಿ ಶರಣಾಗತನನ್ನಾಗಿ ಮಾಡಿದನು. ಲಕ್ಷ್ಮಣನು ಆ ದ್ವೀಪದಲ್ಲಿ ಬೀಡನ್ನು ಬಿಟ್ಟು ಪ್ರಭಾಮಂಡಲನನ್ನು ಬರುವಂತೆ ಹೇಳಿ ಕಳುಹಿಸಿ, ಸುತ್ತುಮುತ್ತಲಿರುವ ದ್ವೀಪಾಂತರಗಳ ವಿದ್ಯಾಧರಾಧಿರಾಜರನ್ನು ಆಜ್ಞಾ ವಿಧೇಯರನ್ನಾಗಿ ಮಾಡಿದನು.
ಇತ್ತ, ರಾವಣನು ಸಿಂಹಾಸನವನ್ನೇರಿ ಒಡೋಲಗಂಗೊಟ್ಟಿರುವಲ್ಲಿ ಚಾರನೊಬ್ಬನು ಬಂದು ಕೈಮುಗಿದು ನಿಂತು, ಮನುಷ್ಯ ಮಾತ್ರದವರಾದ ರಾಮ ಲಕ್ಷ್ಮಣರು ಅನೇಕ ಮಂದಿ ಖೇಚರರಿಂದಲೂ ರಾವಣನನ್ನು ಬಿಟ್ಟುಳಿದ ಸಾಮಂತರಿಂದಲೂ ಕೂಡಿ ಯುದ್ಧಕ್ಕೆ ಬರುತ್ತಿರುವರೆಂದು ಬಿನ್ನವಿಸಲು, ರಾವಣನು ಮುಗುಳಗೆ ನಕ್ಕು ತನ್ನ ಸಾಮ೦ತರು ಕಪ್ಪ ಕೊಡುವುದನ್ನು ತಪ್ಪಿಸಿಕೊಳ್ಳುವು ದಕ್ಕಾಗಿ ಏಕಾಕಿಗಳಾದ ರಾಮಲಕ್ಷ್ಮಣರನ್ನು ಮುಂದಿಟ್ಟುಕೊಂಡು ಸಂಧಾನ ಮಾಡಿ ಬರುತ್ತಿರುವಂತಿದೆಯೆಂದು ಹೇಳಲು ಮೇಘವಾಹನ ಮೊದಲಾದ ಸಭಾ ಸದರೆಲ್ಲರೂ ಮಾರ್ದನಿಗೊಟ್ಟರು. ಆದರೆ ವಿಭೀಷಣನು ಮಾತ್ರ ಅದಕ್ಕೊಪ್ಪಿ ಸುಮ್ಮನಿರದೆ ಅಣ್ಣನಿಗೆ ಬುದ್ಧಿವಾದವನ್ನು ಹೇಳಿ ಪರಸ್ತ್ರೀಯ ದೆಸೆಯಿಂದ ನಾನಾ ವಿಧವಾದ ಕೌಶಗಳು೦ಟಾಗುವುವೆಂದೂ ಕುಲನಾಶವಾಗುವುದೆಂದೂ ಸೀತೆಯನ್ನು ರಾಮನಿಗೊಪ್ಪಿಸಿದರೆ ತಾವೆಲ್ಲರೂ ಒಂದೇ ಕಡೆ ಸುಖದಿಂದಿರಬಹುದೆಂದೂ ತಿಳಿಸಿ ದನು. ಇದಕ್ಕೆ ಇಂದಗಿಯು ಕೋಪಾವಿಷ್ಟನಾಗಿ ನಿಭೀಷಣನನ್ನು ದೂಷಿಸಿ, ತಾರಾದ್ರಿಯನ್ನು ತೋಳಬಲದಿಂದೆತ್ತಿದ ರಾವಣನನ್ನು ಮನುಷ್ಯ ಮಾತ್ರದವರು ಗೆಲ್ಲುವುದು ಸಾಧ್ಯವಲ್ಲೆಂದೂ ಸುಮ್ಮನೆ ಭಯಪಡುವುದು ಅನುಚಿತವೆಂದೂ ನುಡಿದನು. ಇದನ್ನು ಕೇಳಿ ವಿಭೀಷಣನು ಸಿಟ್ಟಾಗಿ ತಂದೆಯ ರಾಜ್ಯ ಕ್ಯಾಸೆಪಟ್ಟು ದುರ್ಯಶಸ್ಸಿಗಂಜದೆ ಬಲ್ಲಿದರಲ್ಲಿ ಕಲಹವನ್ನು ಬಯಸುವುದು ತಪ್ಪೆಂದೂ ಖರ ದೂಷಣರನ್ನು ಸುಲಭವಾಗಿ ಸಂಹರಿಸಿ ಪ್ರಸಿದರಾದ ಖೇಚರರನ್ನು ಸಾಮರ್ಥ್ಯ ದಲ್ಲಿ ಮೂಾರಿಸಿದ ಸೌಮಿತ್ರಿಗೆ ಎಣೆ ಯಾರೂ ಇಲ್ಲವೆಂದೂ ರಣಭೂಮಿಯಲ್ಲಿ ರಾಮ ಬಾಣವು ಯಾರನ್ನೂ ಉಳಿಯಲೀಯದೆಂದೂ ಆದುದರಿಂದ ಸೀತೆಯನ್ನೊಪ್ಪಿಸಿ ರಾಮಲಕ್ಷ್ಮಣರೊಡನೆ ಸಂಧಿಮಾಡಿಕೊಳ್ಳುವುದೇ ಸರಿಯೆಂದೂ ಹಾಗೆ ಮಾಡದೆ ಕಾದಿದಲ್ಲಿ ಅಪವಾದವು ಶಾಶ್ವತವಾಗಿ ನಿಲ್ಲುವುದೆಂದೂ ತಿಳಿಸಿದನು.
ಈ ಮಾತನ್ನು ಕೇಳಿ ರಾವಣನು ರೌದ್ರಾಕಾರನಾಗಿ ಚಂದ್ರಹಾಸಾಸಿ ಯನ್ನು ಒರೆಯಿಂದ ಸೆಳೆಯಲು ವಿಭೀಷಣನು ಗದಾದಂಡವನ್ನು ಹಿಡಿದು ರಾವಣ ನೆದುರಿಗೆ ಅದಿರದೆ ನಿಂತನು. ಇದನ್ನು ನೋಡಿ ಕುಲವೃದ್ಧರು ಅಡ್ಡವಾಗಿ ಬಂದು ರಾವಣನನ್ನು ಸಮಾಧಾನಪಡಿಸಲು ಅವನು ಮುಗುಳಗೆ ನಕ್ಕು, “ ಅಯ್ಯಾ ! ಮನುಷ್ಯ ಮಾತ್ರದವನು ನನಗಿಂತಲೂ ಬಲಿಷ್ಟನೇ ? ಅಂಥವನ ಮಾತನ್ನು ಕೇಳಿ ಅವನಲ್ಲಿ ಆಳ್ತನಕ್ಕೆ ನಿಂತು ನನ್ನಲ್ಲಿ ದಾಯಾದಿತ್ವವನ್ನು ತೋರಿಸುತ್ತಿರುವ ಈ ವಿಭೀಷಣನ ಪುಂಡನ್ನಡಗಿಸುವೆನು ; ಮುಕ್ಕಣ್ಣನಾದರೂ ನನ್ನ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೬೭
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಪ೦ಪರಾಮಾಯಣದ ಕಥೆ
51