ಪುಟ:ರಾಮಚಂದ್ರ ಚರಿತ ಪುರಾಣಂ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪರಾಮಾಯಣದ ಕಥೆ

65

ಶ್ರೀಪಕ್ವತ ನಗರವನ್ನು ಹನುಮಂತನಿಗೂ ಪಾತಾಳಲಂಕೆಯನ್ನು ವಿರಾಧಿತನಿಗೂ ರಥನೂ ಪುರಚಕ್ರವಾಳ ಪುರವನ್ನು ಪ್ರಭಾಮಂಡಲನಿಗೂ ರಾಜ್ಯಾಭಿಷೇಕ ಮಾಡಿ ಕೊಟ್ಟು ತಮಗೆ ಉಪಕಾರ ಮಾಡಿದ ಅನೇಕರಿಗೆ ನಾಡು ಬೀಡುಗಳನ್ನು ಕೊಟ್ಟು ಲಕ್ಷಣನನ್ನು ಖಂಡಮಂಡಲಕ್ಕಧಿರಾಜನನ್ನಾಗಿ ಮಾಡಿ ಭರತನನ್ನು ಮುನ್ನಿನಂತೆ ಅಯೋಧ್ಯೆ ಯನ್ನಾಳುವುದೆಂದು ಅಪ್ಪಣೆಯಿತ್ತನು. ಅದಕ್ಕೆ ಭರತನು ಅದು ವರೆಗೂ ರಾಮನ ಆಜ್ಞೆಯ ಮೇರೆಗೆ ಭೂಮಿಯನ್ನು ಕಾದುಕೊ೦ಡಿದೆನೆಂದೂ ಇನ್ನು ಮುಂದೆ ವಿಷಯಸುಖವನ್ನು ತಾನೆಲ್ಲಿನೆಂದೂ ಮೋಕ್ಷಲಕ್ಷ್ಮಿಯನ್ನು ಪಡೆಯು ವುದಕ್ಕೆ ಅಪ್ಪಣೆ ಕೊಡಬೇಕೆಂದೂ ಕೈಮುಗಿದು ಬೇಡಿಕೊಳ್ಳಲು, ರಾಮನು ಭೂಚರ ರಲ್ಲದೆ ಖೇಚರರೂ ತಮ್ಮ ಆಜ್ಞಾನುವರ್ತಿಗಳಾಗಿರುವುದರಿಂದ ಮತ್ತೆ ಕೆಲವು ಕಾಲ ರಾಜ್ಯಭಾರ ಮಾಡಿದರೆ ತರುವಾಯ ತಾವೆಲ್ಲರೂ ಕೂಡಿ ತಪಕ್ಕೆ ಹೋಗೋಣ ವೆಂದು ಎಷ್ಟು ವಿಧವಾಗಿ ಹೇಳಿದರೂ ಭರತನು ಕೇಳದೆಹೋದನು.
ಆಗ ಮಷಿನಿವೇವಕನು ಬಂದು ನಮಸ್ಕರಿಸಿ ಮಹೇಂದ್ರೋ ದ್ಯಾನವನಕ್ಕೆ ದೇಶಭೂಷಣ ಭಟ್ಟಾರಕರು ಬಿಜಯಮಾಡಿರುವರೆಂದು ತಿಳಿಸಲು ರಾಮನು ಸಿಂಹಾ ಸನದಿಂದೆದ್ದು ಆ ಕಡೆಗೆ ಕೈಮುಗಿದು ಕೂಡಲೆ ಸಕಲ ಬಂಧು ಪರಿವಾರದೊಡನೆ ಹೊರಟು ಉದ್ಯಾನವನವನ್ನು ಸೇರಿ ರಾಜಚಿಹ್ನೆಗಳನ್ನು ದೂರದಲ್ಲಿರಿಸಿ ಭಟ್ಟಾರಕ ರನ್ನು ಬಲಗೊಂಡು ಸಾಷ್ಟಾಂಗ ನಮಸ್ಕಾರಮಾಡಿ ನಿಯಮಿತಾಸನದಲ್ಲಿ ಕುಳಿತು ಕೊಂಡನು. ಆಗ ರಾಮನು ತನ್ನ ತ್ರಿಜಗದ್ದೂ ಷಣ ಗಜವು ನಾಲ್ಕು ದಿನಗಳಿಂದಲೂ ಆಹಾರವನ್ನು ತೆಗೆದುಕೊಳ್ಳದೆ ಇರಲು ಕಾರಣವೇನೆಂದು ಕೇಳಲು ಭಟ್ಟಾರಕರು ಅದು ತನ್ನ ಪೂರ್ವ ಜನ್ಮವನ್ನು ತಿಳಿದು ಉಪಶಮವನ್ನು ತಾಳಿತೆಂದು ಹೇಳಿ ಹಿಂದಣ ಜನಗಳ ವೃತ್ತಾಂತವನ್ನು ವಿಶದವಾಗಿ ತಿಳಿಸಿದರು. ಇದನ್ನು ಕೇಳಿ ಭರತನೂ ಕೈಕೆಯ ತಪಸ್ಸರಾದರು ; ತ್ರಿಜಗದೂಷಣ ಗಜವೂ ಅಲ್ಲಿಯೇ ಅಣುವ್ರತವನ್ನು ಕೈಕೊಂಡು ಹಲವು ನೋಂಸಿಗಳನ್ನು ನೋ೦ತು ಬ್ರಹ್ಮೋತ್ತರಕಲ್ಪಗತವಾಯ್ತು.
ರಾಮಲಕ್ಷ್ಮಣರು ಸಂಸಾರಸುಖವನ್ನನುಭವಿಸುತ್ತಿರಲು ಲಕ್ಷ್ಮಣನಿಗೆ ಎಂಟು ಮಂದಿ ಮಕ್ಕಳು ಹುಟ್ಟಿ ಅನುದಿನ ಪ್ರವರ್ಧಮಾನರಾಗಿ ಮನೋಹರಾಕಾರದಿಂದ ಬಳೆಯುತ್ತಿದ್ದರು. ಹೀಗಿರಲು, ಸೀತಾದೇವಿಯು ಒಂದು ದಿನ ಋತುಸ್ನಾನಮಾಡಿ ಶಯ್ಯಾಗೃಹವನ್ನು ಸೇರಿ ಸುಖನಿದ್ರೆಗೈದು ಬೆಳಗಿನ ಜಾವದಲ್ಲಿ ಶರಭ ದ್ವಿತಯವು ತನ್ನ ಮುಖವನ್ನು ಹೊಗುವಂತೆ ತಾನು ಪುಷ್ಟಕದಿಂದ ಭೂಮಿಗೆ ಬೀಳುವಂತೆಯೂ ಎರಡು ಕನಸನ್ನು ಕಂಡು ಅದನ್ನು ರಾಮಸ್ವಾಮಿಗೆ ತಿಳಿಸಲು ಆತನು ಶರಭ ದರ್ಶನದಿಂದ ಸೀತೆಗೆ ಅಮಿತ ಪರಾಕ್ರಮಿಗಳಾದ ಇಬ್ಬರು ಮಕ್ಕಳು ಹುಟ್ಟುವ ರೆಂದೂ ಎರಡನೆಯ ಕನಸು ಖೇದವನ್ನು ಹುಟ್ಟಿಸುವುದೆಂದೂ ತಿಳಿಸಿದನು,
9