ಪುಟ:ರಾಮಚಂದ್ರ ಚರಿತ ಪುರಾಣಂ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪರಾಮಾಯಣದ ಕಥೆ

73

ನ್ನುಪೇಕ್ಷಿಸಿರುವನೆಂದೂ ಆತನಿಗೆ ಲಕ್ಷ್ಮಣನ ವಿಯೋಗವಾದರೂ ಲಕ್ಷ್ಮಣನಿಗೆ ರಾಮನ ವಿಯೋಗವಾದರೂ ಪರಸ್ಪರವಾಗಿ ಅತಿ ವಿಷಾದಪಡುವರೆಂದೂ ಹೇಳಲು ರತ್ನಚೂಲ ಅಮೃತಚಲರೆಂಬ ಇಬ್ಬರು ದೇವರುಗಳು ರಾಮಲಕ್ಷ್ಮಣರ ಸ್ನೇಹ ವನ್ನು ನೋಡುವ ಕುತೂಹಲವುಳ್ಳವರಾಗಿ ಅಯೋಧ್ಯೆಗೆ ಬಂದು ಅರಮನೆ ಯನ್ನು ಹೊಕ್ಕು ರಾಮನು ಪರಲೋಕ ಪ್ರಾಪ್ತನಾದಂತೆಯೂ, ರಾಜಾಲಯ ವೆಲ್ಲವೂ ಶೋಕ ಸಮುದ್ರದಲ್ಲಿ ಮುಳುಗಿದಂತೆಯೂ, ರಾಮನಾಕೃತಿಯನ್ನು ಪ್ರಾಣವಳಿದಂತೆಯೂ ತಮ್ಮ ವಿದ್ಯಾ ಬಲದಿಂದ ನಿರ್ಮಿಸಿದರು. ಇದನ್ನು ಕಂಡು ಲಕ್ಷಣನು ಅತ್ಯಂತ ಶೋಕದಿಂದ ಕ್ಷಣಮಾತ್ರದಲ್ಲಿ ಪ್ರಾಣವನ್ನು ಬಿಟ್ಟನು; ಅರಮನೆಯೆಲ್ಲವೂ ದುಃಖಮಯವಾಯಿತು. ರಾಮನು ಈ ವಾರ್ತೆಯನ್ನು ಕೇಳಿ ಲಕ್ಷಣನ ಬಳಿಗೆ ಬಂದು ಮೂರ್ಛ ಹೋಗಿ ಎಚ್ಚತ್ತು ಮರಳಿ ಮೂರ್ಛಗೊಂಡು ಬಹು ವಿಧವಾಗಿ ಪ್ರಲಾಪಿಸಿದನು. ಇದನ್ನು ಕಂಡ ಲವಾ೦ಕುಶರು ಅದೇ ತಮಗೆ ನಿರ್ವೆಗೆ ಕಾರಣವಾಗಲು ರಾಮಸ್ವಾಮಿಗೆ ನಮಸ್ಕರಿಸಿ ಅಪ್ಪಣೆ ಪಡೆದು ಅಮೃತೇ ಶ್ವರ ಭಟ್ಟಾರಕರ ಬಳಿಯಲ್ಲಿ ದೀಕ್ಷೆಗೊಂಡರು. ವಿಭೀಷಣನು ಈ ಸುದ್ದಿ ಯನ್ನು ಕೇಳಿ ರಾಮಚ೦ದ್ರನ ಶೋಕವನ್ನು ಉಪಶಮಿ ಸಲೆಂದು ಬಂದು ಆತನೂ ಸುಗ್ರೀವಾದಿ ಗಳೂ ಲಕ್ಷ್ಮಣನ ಶವಕ್ಕೆ ದಹನ ಸಂಸ್ಕಾರವನ್ನು ಮಾಡಿಸಲುದ್ಯುಕ್ತರಾದರು. ಇದನ್ನು ಕಂಡು ರಾಮನು ಅವರನ್ನು ಬಲು ತೆರನಾಗಿ ಬಯು ಹೋಯ್ತು 'ಕೂಡಲೆ ಲಕ್ಷ್ಮಣನ ಶವವನ್ನೆತ್ತಿಕೊಂಡು ಹೋಗಿ ಅದಕ್ಕೆ ವಸ್ತ್ರಾಭರಣಗಳನ್ನು ತೊಡಿಸಿ ಚಂದನವನ್ನು ಹಚ್ಚಿ ಅದನ್ನು ಆರು ತಿಂಗಳ ಕಾಲ ಹಾಗೆಯೇ ಹೊತ್ತುಕೊಂಡಿದ್ದನು.
ಈ ರೀತಿಯಾಗಿ ರಾಮಸ್ವಾಮಿಯು ಲಕ್ಷ್ಮಣನ ವಿಯೋಗದಿಂದ ರಾಜ್ಯ ರಕ್ಷಣೆಯನ್ನು ಮರೆತು ವಿಕಲನಾಗಿರಲು ಇಂದಗಿಯ ಮಗನಾದ ವಜ್ರ ಮಾಲಿ ಮೊದಲಾದವರು ಅಯೋಧ್ಯೆಗೆ ಮುತ್ತಿಗೆ ಹಾಕಿದರು. ರಾಮನು ಈ ವಾರ್ತೆಯನ್ನು ಕೇಳಿ ಲಕ್ಷ್ಮಣನ ದೇಹವನ್ನು ಬಿಡಲಾರದೆ ತನ್ನ ವಜ್ರಾವರ್ತ ಚಾಪ ವನ್ನೂ ಅಗ್ನಿಮುಖ ಶಿಲೀಮುಖವನ್ನೂ ನೋಡುತ್ತಿರುವಲ್ಲಿ ದೇವಗತಿವಡೆದ ಜಟಾಯುವಿಗೂ ಕೃತಾಂತವಕ್ರನಿಗೂ ಆಸನ ಕಂಪವಾಯಿತು. ಅವರು ಅವಧಿ ಬೋಧೆಯಿಂದ ಅಯೋಧ್ಯೆಯ ವೃತ್ತಾಂತವನ್ನರಿತು ಅಲ್ಲಿಗೆ ಬಂದು ಶತ್ರು ಸೈನ್ಯವನ್ನೋಡಿಸಿ ರಾಮನ ಬಳಿಗೆ ಬಂದು ರಾಮನಿಗೆ ಹೇಗಾದರೂ ಧರ್ಮ ಬೋಧೆಯನ್ನು ಮಾಡಿ ಆತನ ವಿಕಲತೆಯನ್ನು ಕಳೆಯಬೇಕೆಂದು ಪ್ರಯತ್ನಿಸಿ ಹಲವು ದೃಷ್ಟಾಂತಗಳನ್ನು ಕೊಟ್ಟು ಕಡೆಗೆ ರಾಮನ ಮೋಹಾಂಧಕಾರವನ್ನು ಹೋಗಲಾಡಿಸಿ ತಮ್ಮ ದಿವ್ಯ ಸ್ವರೂಪವನ್ನು ತೋರಿಸಿ, ನಡೆದ ವೃತ್ತಾಂತವನ್ನು ತಿಳಿಸಲು ರಾಮನು ತನ್ನನ್ನು ತಾನರಿಯದೆ ಈ ತೆರನಾಗಿ ಮರುಳಾದೆನೆಂದು
10