ಪುಟ:ರಾಮಚಂದ್ರ ಚರಿತ ಪುರಾಣಂ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



74

ಪ೦ಪರಾಮಾಯಣದ ಕಥೆ

ಚಿಂತಿಸಿ ವೈರಾಗ್ಯ ಪರನಾಗಿ ವಿಭೀಷಣ ಸುಗ್ರೀವ ನಳ ನೀಲ ಜಾಂಬವ ಮೊದ ಲಾದವರನ್ನೂ ಹಲವರು ಪ್ರಧಾನ ಪುರುಷರನ್ನೂ ಕರೆಯಿಸಲು ಅವರು ಲಕ್ಷ್ಮಣನ ಶವವನ್ನು ಸರಯೂ ನದೀ ತೀರದಲ್ಲಿ ಯಥಾ ವಿಧಿಯಾಗಿ ಸಂಸ್ಕರಿಸಿ ಬಂದರು. ರಾಮನು ಲವನ ಹಿರಿಯ ಮಗನಿಗೆ ರಾಜ್ಯ ಪಟ್ಟವನ್ನು ಕಟ್ಟಿ ಹಲವರು ಅರಸುಮಕ್ಕ ಳೊಡನೆ ಸುವ್ರತರೆಂಬ ಚಾರಣರ ಪಕ್ಕದಲ್ಲಿ ತಪಸ್ಸನಾದನು. ಸಿಭೀಷಣ ಸುಗ್ರೀವ ಶತ್ರುಘ್ನ ನಳ ನೀಲ ನಿರಾಧಿತ ಮೊದಲಾದವರೂ ಅವರ ಅ೦ರ್ತ ಪುರ ಸ್ತ್ರೀಯರೂ ದೀಕ್ಷೆಗೊ೦ಡರು.
ರಾಮ ಯತಿಯು ಪರಮಾಗಮ ಪ್ರಣೀತ ಮಾರ್ಗದಲ್ಲಿ ನಡೆದು ಉದ್ಯೋಗ ತಪಶ್ಚರಣ ನಿರತನಾಗಿ ಕಾನನಕ್ಕೆ ಹೊರಟು ಲಕ್ಷ್ಮಣನೆತ್ತಿದ ಸಿದ್ಧಶಿಲೆಯನ್ನೇರಿ ಪ್ರತಿಮಾ ಯೋಗದಿಂದ ಕರ ಕ್ಷಯಂಗೈಯುವುದನ್ನು ಸೀತೇಂದ್ರನು ಅವಧಿ ಬೋಧದಿಂದರಿತು ಆತನ ತಪಸ್ಸಿಗೆ ನಿಮ್ಮ ಮಾಡುವುದಕ್ಕಾಗಿ ಆತನಿದ್ದೆಡೆಗೆ ಬಂದು ತಾನು ಸೀತೆಯ ರೂಪನ್ನು ಧರಿಸಿ, ವಿದ್ಯಾಧರ ಕನೈಯರು ಸುತ್ತಿ ಬರಲು, ರಾಮ ಯತಿಯ ಸವಿಾಪಕ್ಕೆ ಬಂದು, “ ನೀವು ಇನ್ನೂ ವಯಸ್ಸು ಕಳೆದವರಲ್ಲ, ನಿಮ್ಮ ಮನೋಹರಾಕಾರವನ್ನು ಕೆಡಿಸದೆ ನನ್ನಲ್ಲಿಯೂ ಈ ವಿದ್ಯಾಧರ ಕನ್ಯಯ ರಲ್ಲಿಯೂ ಕೂಡಿ ಸುಖದಿಂದಿರಿ ; ತರುವಾಯ ಎಲ್ಲರೂ ತಪಸ್ಸಿಗೆ ನಿಲ್ಲೋಣ ” ಎಂದು ತಪೋವಿಫ್ಟ್ ಕಾರಣಗಳನ್ನು ತೋರಿಸಿ ನುಡಿದರೂ ರಾಮಭಟ್ಟಾರಕನು ನಿಶ್ಚಲ ಚಿತ್ತದಿಂದ ಶುಕ್ಲ ಧ್ಯಾನ ಪ್ರವಿಷ್ಟನಾಗಿ ಮಾಘ ಶುದ ದ್ವಾದಶಿಯ ಬೆಳಗಿನ ಜಾವದಲ್ಲಿ ಕೇವಲಬೋಧೆಯನ್ನು ಪಡೆದನು. ಆಗ ದೇವಸಂಕುಲಕ್ಕೆ ಆಸನ ಕಂಪವಾಗಲು ಅವರು ಅವಧಿಬೋಧದಿಂದರಿತು ರಾಮ ಕೇವಲಿಯ ಪೂಜೆಗೆ ಬಂದರು. ಅವರಲ್ಲೊಬ್ಬನಾದ ಸೀತೇಂದ್ರನು ದಶರಥಾದಿಗಳ ಗತಿಯನ್ನು ಕೇಳಲು ರಾಮ ಕೇವಲಿಯು ಅದನ್ನು ವಿಶದವಾಗಿ ತಿಳಿಸಿದನು. ರಾಮಭಟ್ಟಾರಕನು ಇಪ್ಪತ್ತೈದು ಸಂವತ್ಸರಗಳು ದೇವ ಮರ್ತ್ಯ ಖಚರ ಕೈಾ ಪಾಲಕರಿಂದ ಪೂಜೆಯನ್ನು ಹೊಂದಿ ತರುವಾಯ ಶಾಶ್ವತವಾದ ಮುಕ್ತಿಯನ್ನು ಪಡೆದನು.