ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಶ್ರೀ
ರಾಮಚಂದ್ರ ಚರಿತ ಪುರಾಣಂ
ಪ್ರಥಮಾಶ್ವಾಸಂ
,

ಶಾ || ಶ್ರೀಕೇಳೀ ನಿಲಯಂ ನಿಜಾಂಫ್ರಿಕಮಲಂ ವಿದ್ಯಾನಟೀ ನಾಟ್ಯ ವೇ |
      ದೀಕಲ್ಪಂ ಮುಖ ಚಂದ್ರಬಿಂಬಮಖಿಲೇಂದೋತ್ತಂಸ ಮಾಣಿಕ್ಯ ದೀ ||
      ಪಾಕೀರ್ಣಂ ಹರಿಪೀಠ ಪಾರ್ಶ್ವವೆನಿಸಂ ಪೂಜಾರ್ಹನಾರ್ಹ೦ತ್ಯ ಲ |
      ಕ್ಷ್ಮೀಕಾಂತಂ ಮುನಿಸುವ್ರತಂ ನಮಗೆ ಮಾಲಷ್ಟಾರ್ಥ ಸಂಸಿದ್ಧಿಯ೦ || ೧ ||

ಸ್ರ ಏನಸ್ಸಂತಾನವೆಂಟುಂ ಕಿಡೆನಿಜಗುಣಮೆಂಟು ಮೊಗಂದೋಜಿ ಮೆಯ್ಯಿಂ |
    ದೇನಾನುಂ ಕುಂದೆ ಲೋಕಾಗ್ರದೊಳಿರೆ ಸಹಜಾನಂದ ಚೈತನ್ಯ ರೂಪಂ||
    ಜ್ಞಾನಂ ಪ್ಲೇಯ ಪ್ರಮಾಣ೦ ಪಸರಿಸೆಗಣನಾತೀತರಾಗಿರ್ದ ಮುಕ್ತಿ |
    ಶ್ರೀನಾಥರ್ ಸಿದ್ಧರಾತ್ಯಂತಿಕ ಸುಖ ಪದವೀಸಿದ್ಧಿಯಂ ಮಾಜಕ್ಕೆ ನಮ್ಮೊಳ್||೨||

ಮ || ಮನಮಂ ಕಟ್ಟಿ ಗುಣಂಗಳಿ೦ತುಬಿದು ಪಂಚಾಚಾರದಿಂ ಪಂಚಬಾ |
      ಣನ ಬಾಹಾಬಲಮಂ( ಸಮಗ್ರತರ ಶಿಷ್ಯಾನುಗ್ರಹ ಪ್ರೌಢಿವೆ ||
      ತ್ತನವದ್ಯರ್ ದಯೆಗೆಯ್ಸರಕ್ಕೆ ದಯೆಯಿಂ ಭವ್ಯಾಳಿಗುದತ್ತಪೋ |
      ಧನ ವಿದ್ಯಾಧನದಿ ಮಹಾಮಹಿಮೆವಾಚಾರರಾಚಾರಮಂ|| ೩ ||

ಶಾ || ಪಾತ್ರೀಭೂತ ಏನೇಹ ಸಂತತಿಗೆ ಸಮ್ಯಗ್ದರ್ಶನ ಜ್ಞಾನ ಚಾ |
      ರಿತ್ರಂಗಳ್ ನಿಜಮಪ್ಪನಂತ ಸುಖಮಂ ರಾಗಾದಿಗಳ್ ಜನ್ಮ ಮೃ ||
      ತ್ಯು ತ್ರಾಸಂಗಳನೀವುವೆಂದು ಸದಸಧೈದಂಗಳಂ ಪೇಳ್ವಿವರ್ ||
      ಸೂತ್ರಪ್ರಾಯರಜೇಯರೀಗೆಮುಗುಪಾಧ್ಯಾಯರ್‌ ಸುಖೋಪಾಯಮಂ|| ೪ ||

ಮ|| ತಪಮಂ ಶೀಲಮನಸ್ಸು ಕೆಯ್ದು, ಕರಣ ಗ್ರಾಮಂಗಳಂ ಗೆಲ್ದುಚಿ |
      ತ್ತಪದೈ ಕಾತಿಥಿಮಾಡಿ ಶಾಂತರಸಮಂ} ಕಾರುಣ್ಯಮಂ ತಾಳ್ದಿತ ||
      ತ್ತ್ವಪರಿಜ್ಞಾನಮಪ್ರಮತ್ತಚರಿತ ಪ್ರಸ್ಥಾನಮಗೆ ಸಾರ್ದ ಸಾ |
      ಧುಪದ್ಯಂಗಲ್ ನಮಗೀಗೆ ಸಾಧುಪದಮ್ಮ ಕೈವಲ್ಯ ಮಾಂಗಲ್ಯಮಂ|| ೫ ||


1. ಮಯಂ ದೇನಾನು೦ಗು೦ದೆ. ಫ.
2. ಜ್ಞಾನಜೇಯ. ಕ. ಖ. ಗ. ಘ.