ಪುಟ:ರಾಮಚಂದ್ರ ಚರಿತ ಪುರಾಣಂ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಥಮಾಶ್ವಾಸಂ

೭

ಉ || ನಾಯಕನನ್ನಾಗೆ ಕೃತಿ ವಿಶ್ರತವಾಗದುದಾತ್ತ ರಾಘವಂ |
      ನಾಯಕನಾಗೆ ವಿಶ್ರುತಮೆನಿಪ್ಪುದು ವಿಸ್ಮಯಕಾರಿಯಲ್ಕು ಕಾ||
      ಲಾಯಸದಿಂ ವಿನಿರ್ಮಿಸಿದ ಕಂಠಿಕೆ ಕಾಂಜನಿ ಮಾಲೆಯಂತು ಪಾ |
      ದೇಯಮೆನಿಕ್ಕು ಮೇ ವಿಷಯವೊಪ್ಪದೊಡಾವುದುಮೊಪ್ಪಲಾರ್ಕುಮೇ || ೩೭ ||

ಮ || ಏಗತಾಷ್ಟಾದಶ ದೋಷರಪ್ಪ ಜಿನರುಂ ಜ್ಞಾನರ್ಧಿ ಸಂಪನ್ನರ |
       ಪ್ಪ ಗಣಾಧೀಶ್ವರರುಂ ಕ್ರಮಂಬಿಡದೆ ಮುನ್ನ ಪೇಟ್ಟ ದಂ ಶ್ರಾವ್ಯ ಕಾ ||
       ವ್ಯಗುಣ ಖ್ಯಾತಿ ನಿಮಿತ್ತ ಮಲ್ಲದೆ ಶುಭ'ಧ್ಯಾನಾರ್ಥಿಯೆಂ ಪೇಲಾ೦ |
       ಬಗೆದಂದೆಂ ರಘುವಂಶ ರಾಮಕಥೆ ಪೇ೦ತನ್ನ ಸಾಮಾನ್ಯ ಮೇ || ೩೮ ||
 
       ರವಿ ಮಾಲಿಟ್ಟಿದ್ದ ನಿಯತ್ತಳಮನಾಶಾ'ಸೀಮೆಯಂ ದಾಂಟುವ |
       ನ್ನೆವರಂ ತನ್ನ ಕಂಗಳಿ೦ದೆನೆ. ಸೆಲಿ೦ಗೇಂ ಮೊಗ್ಗೆ ಮುನ್ನಂ ಗಣ ||
       ಪ್ರವರ‌ರ್ ಗೌತಮರಾದಿಯಾಗೆ ಮುನಿಮುಖ್ಯ‌ ಪೇರೆಂದಂದು ಮಾ |
       ನವರೆಮ್ಮೊಂದಿಗರಾರ್ಪರೇ ರಚಿಯಿಸಲ್ ರಾಮಾನ, ಯ ಖ್ಯಾತಿಯಂ ॥೩೯॥

       ಕಂ|| ವಿಪುಲ್ಯಾಚದೊಳ್ ವೀರ ಜಿ
             ನ ಪಾರ್ಶ್ವದೊಳ್ ಗೌತಮಂ ಗಣಾಗ್ರಣಿ ಮಗಧಾ ||
             ಧಿಪನಆಯೆ ನೆಲೆಯೆ ಪೇಟ್ಟುದ
             ನಪೂರೈಮೆನೆ ರಾಮಕಥೆಯನಭಿವರ್ಣಿಸುವೆಂ ||೪೦||

             ಜಗಮಂ ಯುಗಮಂ ಮನ್ವಾ
             ದಿಗಳಂಕಾಲ ಸ್ವರೂಪಮಂ ಜಿನರಂ ಚ ॥
             ಕ್ರಿಗಳಂ ಹಲಧರ ಕೃಷ್ಣಾ
             ದಿಗಳಂ ಶ್ರೀರಾಮ ಚರಿತದೊಳ್ ವರ್ಣಿಸುವೆಂ ||೪೧||

       ಅದೆಂತೆನೆ-
ಮ|| ಸ್ರ ||ಕಡೆದೋ ಅಲ್ಲೆ ನಿಪ್ಪಾಗಸದ ನಡುವೆ ವಾಯು ತ್ರಯಂ ಸುತ್ತೆ ಪೇಜಾರ್
     ಪಡೆವನ್ನರ್ ತನ್ನನೆಂಬಗ್ಗಳಿಕೆವಡೆದೆಧರಗೂರ್ಧ್ವ ತ್ರಿಭೇದಂ ||
     ಬಡೆದಾಯಿಂ ದ್ರವ್ಯದಿಂ ಮೆಯ್ಯಡೆದಖಿಲ ಜಗಂ ರಜ್ಜು ವೀರೇಲಿ ಅದ್ದಂ ।
     ಬಡೆದತಾ ಪಂ ಜಿನಂ ಕೇವಲ ವಿಪುಲ ತುಲಾಕೋಟಿಯಿಂ ತೂಗೆ ತನ್ನ೦ ||೪೨॥


1.ಧ್ಯಾನಾರ್ಥಿಯಿಂ. ಕ. ಖ. ಗ.ಘ
2. ರೆಮ್ಮಂದಿಗ. ಕ. ಖ. ಘ. ಚ.; ರೇಂ ಮಂದಿಗ.