ಪುಟ:ರಾಯಚೂರು ವಿಜಯ ಭಾಗ ೧ .djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ ಒ ಜ್ಞೆಗೆ ಒಳಪಟ್ಟು ಕಾರಾಗೃಹದಲ್ಲಿ ಇದ್ದೇ ಇರಬೇಕಾಗುವುದು. ಅದಕ್ಕೆ ಮಾರಲು ಯತ್ನಿಸಿದರೆ ಕವಪ್ರಕಾರ ಬಂಧಿಸಿ ಕರೆದುಕೊಂಡುಹೋಗಬೇ ಕಾಗುವುದು. ಅಂತಃಪರದ್ರೋಹವನ್ನು ಮಾಡಲು ಯತ್ನಿಸಿದ ನಿನಗೆ ಶಿಕ್ಷೆ ಯು ಆವಶ್ಯಕವಾದುದೆ. ಕಾಲವಿಳಂಬ ಮಾಡಬೇಚ.' ಎಂದು ನಾಯಕನು ನಿಸ್ಸಂದೇಹವಾಗಿ ಹೇಳಿದನು. “ ಅಯ್ಯಾ, ಅಧಿಕಾರಿ ! ರಾಜಾಜ್ಞೆಯನ್ನು ಮಾರಲು ನನಗೆ ಸ್ವಲ್ಪವೂ ಮನಸ್ಸಿಲ್ಲ, ಆದರೂ ಅಪರಾಧವನ್ನು ವಿಮರ್ಶಿಸದೆ ಇಂತಹ ಶಿಕ್ಷೆಯನ್ನು ನಿರಪರಾಧಿಗೆ ವಿಧಿಸಿದರಲ್ಲಾ ಎಂಬುದೊಂದೇ ಚಿಂತೆಯಾಗಿದೆ ಈ ಉಂಗುರ ವು ಯಾರದೆಂಬುದು ನನಗೆ ತಿಳಿಯದು, ಹುಚ ಬ್ರಾಹ್ಮಣನನ್ನು ಕಾಪಾಡಿ ದುದಕ್ಕಾಗಿ ಆ ಹುಚ್ಚನು ಇದನ್ನು ನನಗೆ ಬಹುಮಾನವಾಗಿ ಕೊಟ್ಟನು. ಇದು ಅನಂಗಸೇನೆಯದು ಎಂದು ನನಗೆ ಸ್ವಲ್ಪವೂ ತಿಳಿಯದು. ಅಷ್ಟೇಕೆ ? ( ಅನಂಗಸೇನೆ ' ಎಂಬ ಹೆಸರನ್ನು ಕೇಳಿದುದು ಈಗಲೇ, ನನಗೆ ಈ ಉಂಗು ರವು ಲಭಿಸಿದ ಸಮಾಚಾರವೆಲ್ಲವನ್ನೂ ವಿಶದವಾಗಿ ರಾಯರಲ್ಲಿ ಅರಿಕೆಮಾಡಿ ಕೊಂಡರೆ, ವಿವೇಕನಿಧಿಗಳಾದ ಮಹಾರಾಜರು ನನ್ನನ್ನು ನಿರಪರಾಧಿಯೆಂದು ನಿರ್ಣಯಿಸದೆ ಇರಲಾರರು. ಆದುದರಿಂದ ನೀನು ಹೋಗಿ ವಿಜಯಸಿಂಹನು ಮಹಾಸ್ವಾಮಿಗಳ ದರ್ಶನವನ್ನು ಬೇಡುತ್ತಿರುವನು ಎಂದು ಮಹಾರಾಜರನ ರಿಗೆ ಬಿನ್ನಹವಾಡು, ಅದರಮೇಲೆ ನನ್ನ ಅದೃಷ್ಟವಿದ್ದಂತಾಗಲಿ, ” ಎಂದು ಬಗೆಬಗೆಯಲ್ಲಿ ಹೇಳಿಕೊಂಡನು, ಆದರೆ ಕಠಿನಹೃದಯನಾದ ಆ ಅಧಿಕಾರಿ ಯು ಇವನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದೆ “ ವಿಜಯಸಿಂಹ ! ನಿನ್ನ ದೀನಾಲಾಪಗಳನ್ನು ಕೇಳುವವರಾರು ? ಅಪರಾಧಿಯಾದ ನಿನ್ನ ಮುಖ ವನ್ನು ಸಹ ನೋಡಕೂಡದೆಂದು ರಾಜಮಂತ್ರಿಗಳಿಬ್ಬರೂ ನಿರ್ಧರಿಸಿಕೊಂಡಿ ರುವರು. ಕೋಪೋದ್ದೀಪಿತಮಾನಸರಾದ ಚಕ್ರವರ್ತಿಗಳು ನಿನ್ನನ್ನು ತತ್‌ ಕ್ಷಣವೇ ವಧಿಸಿಬಿಡಬೇಕೆಂದು ಮನಸ್ಸು ಮಾಡಿದ್ದರು. ಆದರೆ ದಯಾದ್ರ್ರ