೭೦ ಕರ್ಣಾಟಕ ಗ್ರಂಥಮಾಲೆ ಔಷಧವನ್ನು ಮಾತ್ರ ಹೇಳಿದಂತೆ ಕೊಡುತ್ತಿರು ಎಂದು ಹೇಳಿ ಒಂದು ಬಿಳಿಯ ಕಾಗದದಲ್ಲಿ ಸ್ವಲ್ಪ ಬಿಳಿಯ ಪುಡಿಯನ್ನು ಹಾಕಿಕೊಟ್ಟನು. ಅದನ್ನು ಮಾಲತಿಯು ತೆಗೆದುಕೊಂಡು ಬೇಗಬೇಗನೆ ಅನಂಗಸೇನೆ ಯ ಬಳಿಗೆ ಬಂದು * ಅಮ್ಮಾ ! ಔಷಧವನ್ನು ತಂದಿರುವೆನು. ತೆಗೆದು ಕೂ” ಎಂದು ಆಕೆಯನ್ನು ಎಬ್ಬಿಸಿದಳು. ಆಕೆಯು ಸ್ವಲ್ಪ ಕಣ್ಣು ತರದು “ ಮಾಲತಿ ! ನನಗೆ ಇನ್ನು ಔಷಧವೇಕೆ ? ಈ ಲೋಕವನ್ನು ಬಿಟ್ಟು ಹೊರಟುಹೋದರೆ ಸಾಕಂದು ಕಾದಿರುವೆನು ಎಂದು ನಿರಾಶೆ ಯಿಂದ ಉತ್ತರಕೊಟ್ಟಳು. ಆಗ ಮಾಲತಿಯು “ ಅಯ್ಯಾ ! ಅಭೈರಪಡಬೇಡ. ಈ ಔಷಧ ವನ್ನು ಸೇವಿಸಿದರೆ, ನಿನ್ನ ರೋಗವು ಗುಣವಾಗುವುದು ” ಎಂದು ನಯ ದಿಂದ ಒಪ್ಪಿಸಿ ಸ್ವಲ್ಪ ಶುದ್ಧ ಜಲದಲ್ಲಿ ಅದನ್ನು ಹಾಕಿಕೊಟ್ಟಳು. ಅದನ್ನು ತೆಗೆದುಕೊಂಡ ಬಳಿಕ ಅನಂಗಸೇನೆಗೆ ಬೆವರು ಹಿಡಿದು, ನಿದ್ದೆ ಬಂತು. ಸ್ಪಲ್ಪ ಸ್ವಲ್ಪವಾಗಿದ್ದರವು ಬಿಡುತ್ತ ಬಂತು. ಇಷ್ಟರಲ್ಲಿ ಔಷಧವನ್ನು ಕಟ್ಟಿದ್ದ ಕಾಗದದಲ್ಲಿದ್ದ “ ಅನಂಗಸೇನೆ” ಎಂಬ ಪದವು ಗೋಚರವಾಗಲು ಮಾಲ ತಿಯು ಕುತೂಹಲದಿಂದ ಆ ಕಾಗದವನ್ನು ಆದ್ಯಂತವಾಗಿ ಓದಿನೋಡಿ ಕೊಂಡು, ಪರಮಾನಂದ ಭರಿತಳಾದಳು, ತನ್ನ ಸಂತೋಷವನ್ನು ತಿಳಿಸಲು ಯಾವಾಗ ಅನಂಗಸೇನೆಗೆ ಎಚ್ಚರವಾಗುವುದೋ ಎಂದು ಕಾದಿದ್ದಳು. ಸ್ವಲ್ಪ ಹೊತ್ತಾದ ಬಳಿಕ ಆಕೆಗೆ ಎಚ್ಚರವಾಗಲು, ಮಾಲತಿಯು * ಅಮ್ಮಾ ! ನಿಮ್ಮ ದೇಹಸ್ಥಿತಿಯು ಈಗ ಸ್ವಲ್ಪ ಗುಣಮುಖವಾಗಿರು ವುದೆ ?!” ಎಂದು ಮಾತನಾಡಿಸಿದಳು. ಅನಂಗಸೇನೆಗೆ ವಾಸ್ತವವಾಗಿ ಯ ಜರನಿಂತಿದ್ದರೂ, ತನಗೆ ಮುಂದೇನಾಗುತ್ತದೋ ಎಂಬ ಭಯವು ಮಾತ್ರ ಬಲವಾಗಿ ಬಾಧಿಸುತ್ತಿತ್ತು. ಆದುದರಿಂದ ತನ್ನ ಆರೋಗ್ಯದ ವಿಷಯದಲ್ಲಿ ಕೇವಲ ಅಲಕ್ಷದಿಂದಿದ್ದಳು. ರೋಗವು ಹೆಚ್ಚಾಗಿ ಪ್ರಾಣವು
ಪುಟ:ರಾಯಚೂರು ವಿಜಯ ಭಾಗ ೧ .djvu/೨೦೨
ಗೋಚರ