ರಾಯರುವಿಜಯ | ೧೧೧. ನನಗೂ ತಿಳಿಸು!” ಎಂದು ತಾನಾಗಿ ಸಂಭಾಷಣೆಯನ್ನು ಪ್ರಾರಂಭಿಸಿದಳು. ರಾಮಯಾಮಾತ್ಯನು ಆ ಮಾತುಗಳನ್ನು ಕೇಳಿ ಸ್ವಲ್ಪ ಧೈಯ್ಯ ವನ್ನು ತಂದುಕೊಂಡು, “ ತಾಯಿ, ನಾನು ಮೊದಲಿನ ರಾಮಯಮಂತ್ರಿ ಯಲ್ಲ. ಸುಖವಾಗಿ ಇದ್ದ ನಿನ್ನನ್ನು ಆನೆಗೊಂದಿಯಿಂದ ಇಲ್ಲಿಗೆ ಕರೆತಂದು ಕಷ್ಟಕ್ಕೆ ಗುರಿಮಾಡಿರುವುದರಿಂದ ನನಗೆ ಬಹಳ ವ್ಯಸನವಾಗಿದೆ. ಅದು ಯಕ್ಕೆ ಒಳಗಾಗಬಾರದೆಂದು ನಿನಗೆ ಪುರುಷನೇಪವನ್ನು ಹಾಕಿಸಿ ಮೊನ್ನೆ ಯ ಸಭೆಯಲ್ಲಿ ಎಲ್ಲರಿಗೂ ಭಾಂತಿಯನ್ನುಂಟುಮಾಡಿದೆ. ಆದರೆ ಗೋಲ್ ಕೊಂಡದ ಸೇನಾನಾಯಕನಾದ ಮಲಮಲಖಾನನು ನನ್ನ ಗುಟ್ಟನ್ನು ಕಂಡುಹಿಡಿದುಬಿಟ್ಟಿರುವನು” ಎಂದು ಹೇಳಿ ಮುಂದಕ್ಕೆ ಮಾತನಾಡಲು ರದೆ ನಿಲ್ಲಿಸಿದನು. ಸ್ವಲ್ಪ ಹೊತ್ತು ಸುಮ್ಮನಿದ್ದು ಬಳಿಕ ಪುನಃ ಹೀಗೆ ಹೇಳಿದನು :-
- *
“ ಅಮ್ಮ ಮುಕ್ಕಾಂಬೆ !, ಆ ದುರ್ಜನನು ನುಡಿದ ಮಾತುಗಳನ್ನು ನಾನು ಹೇಳಲಾರೆ ಆ ತುಚ್ಛಾತ್ಮನು ಸಹಾಯಮಾಡದಿದ್ದರೆ ಅವನ ತಾತ ನಂತಹ ಮತ್ತೊಬ್ಬನನ್ನು ಸಂಪಾದಿಸುವೆನು ಆ ನೀಚನಿಗೆ ನಿನ್ನನ್ನು ಮದುವೆಯಾಗಬೇಕೆಂದು ಆಸೆಯಿರುವುದಂತೆ, ಸತ್ತು ಲಪ್ರಸೂತೆಯ ನಿರುಪಮಾನಪ್ರತಿಭಾಶಾಲಿನಿಯ ಅತ್ಯ೦ತಸಂದಠ್ಯವತಿಯೂ ಆದ ನಿನ್ನನ್ನು ಆ ಕರಿಯ ಮೊಣೆಯನಿಗೆ ಕೊಟ್ಟು ಮದುವೆಮಾಡಬೇಕಂತೆ !” ತಿ “ ಮಂತ್ರಿವಯ್ಯ ! ಈ ಸ್ಪಲ್ಪಕಾರಕ್ಕೆ ಇಷ್ಟು ಏಕ ವ್ಯಸನಪಡು ತಿರುವೆ ? ಆತನಬಳಿಗೆ ಹೋಗಿ, “ ನಿನ್ನಭಿಪಯದಂತೆಯೇ ಆಗಲಿ,” ಎಂದು ಹೇಳಬಹುದು ನೀತಿವಿಶಾರದನಾದ ನೀನು ಧೈಲ್ಯವನ್ನು ತಾಳ ನನ್ನ ಸೂಚನೆ ಯನ್ನು ಅಂಗೀಕರಿಸು ನಿನಗೆ ನಾನು ರಾಜನೀತಿಯನ್ನು ಹೇಳಬೇಕಾಗಿ ದೆಯೇ ?” ಎಂದು ದೃಢಮನಸ್ಸಿನಿಂದ ಹೇಳಿದಳು.