ಪುಟ:ರಾಯಚೂರು ವಿಜಯ ಭಾಗ ೧ .djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wwwmmmwaywan ಕಾಯ್ಕರುವಿಜಯ ೧v ಖಾನನು ಈ ಮಾತುಗಳನ್ನು ಕೇಳಿ ಧೈಲ್ಯವನ್ನು ತಂದುಕೊಂಡನು. ಮುಕ್ತಾಂಬೆಯನ್ನು ನೋಡಿ ಆಕೆಯೊಡನೆ ಮಾತನಾಡಿ ಸಂತೋಷವನ್ನು ಪಡೆಯಬೇಕೆಂಬ ಆಸೆಯು ಅವನಿಗೆ ಹೆಚ್ಚುತ್ತ ಬಂತು, ಆಗ ಮುಕ್ಕಾ ಬೆಯು ಮುಂಚೆ ಹೇಳಿದ್ದ ರೀತಿ ರಲ್ಲಿ ಫಕೀರನು ಬಾಗಿಲನ್ನು ತಟ್ಟಿ ದನು. ಸ್ವಲ್ಪಹೊತ್ತಿನವರೆಗೂ ಬಾಗಿಲು ತೆರೆಯಲಿಲ್ಲ, ಕೆಲವು ನಿಮಿಷಗಳು ಕಳೆದ ಬಳಿಕ ಫಕೀರನು ಪುನಃ ಹಾಗೆಯೇ ತಟ್ಟಿ ದನು, ಆಗ, “ ಬಂದೆ? ಎಂದು ಉತ್ತರಬಂತು. ಆ ಬಳಿಕ ಬಾಗಿಲನ್ನು ಮುಕ್ತಾಂಬೆಯು ತೆರೆ ದಳು. ಆಗ ಫಕೀರನು ಖಾನನೊಡನೆ “ ನಾನೂ ತಮ್ಮೊಡನೆ ಬಂದರೆ ಸಂಕೋಚದಿಂದ ಮುಕ್ಕಾಂಬೆಯು ಮಾತನಾಡಳು. ಆದುದರಿಂದ ತಾವು ಒಬ್ಬರೇ ಒಳಕ್ಕೆ ದಯಮಾಡಿಸಿ, ನಾನು ಈ ಬಾಗಿಲ ಬಳಿಯಲ್ಲೇ ಕಾದಿ ರುವೆನು ” ಎಂದು ಒಪ್ಪಿಸಿ ಖಾನನನ್ನು ಒಳಕ್ಕೆ ಕಳುಹಿಸಿದನು, ದಿರ್ವೆ ಖಾನೆಯನ್ನು ಪ್ರವೇಶಿಸಿದಮೇಲೆ ಒಂದು ಯುಕ್ತವಾದ ಪೀಠದಲ್ಲಿ ಕುಳಿತು ಕೊಂಡು ತನ್ನ ಇದಿರಿಗೆ ಸ್ವಲ್ಪ ದೂರದಲ್ಲಿ ಮೇಲ್ಮುಸುಕನ್ನು ಹಾಕಿಕೊಂಡು ನಿಂತಿದ್ದ ಮುಕ್ಕಾಂಬೆ ಯನ್ನು ಕುರಿತು ಈ ಮುಂದೆ ಹೇಳುವ ರೀತಿಯಲ್ಲಿ ಮಾತನಾಡಲಾರಂಭಿಸಿದನು :- ಖಾನ- ಯುವಶೀಮಣಿ ! ನಿನ್ನ ಅನುರ್ಗಹವನ್ನು ಸಂಪಾದಿಸಬೇ ಕೆಂದು ಸರ್ವಕಾಲದಲ್ಲಿಯ ಪ್ರಯತ್ನಿಸುತ್ತಿರುವ ನನ್ನ ಮೇಲೆ ನಿನ್ನ ದಯೆಯು ಬಂದುದಕ್ಕಾಗಿ ಬಹಳ ಕೃತಜ್ಞನಾಗಿರುವೆನು. " ಯುವತಿ-“ ಅಬಲೆಯರಾದ ನಮ್ಮಂತಹವರ ದಯೆಯಿಂದ ತಮ್ಮ ತಹವರಿಗೆ ಆಗುವ ಲಾಭವೇನು ? ಸಬಲರಾದ ತಮ್ಮಂತಹವರ ಸಹಾಯವೇ ನಮ್ಮಂತಹವರಿಗೆ ಅಭ್ಯ-ನೀಯವು, ತಮ್ಮ ದಯೆಯನ್ನು ಎಷ್ಟೊಕಾಲ ದಿಂದ ಕೋರುತ್ತಿರುವೆವು ಈಗಲಾದರೂ ಸಂಪೂರ್ಣವಾಗಿ ದಯೆಯುಂಟು ಗಿರುವುದೋ ಇಲ್ಲವೋ ತಿಳಿಯದು, 59