ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

MMw mmmmmmmmmmwwwmmwamy ಕಾಯುವಿಜಯ ವಿಜಯಸಿಂಹನನ್ನು ಸತ್ಕರಿಸಿ, ವಿಜಯಸಿಂಹನನ್ನು ಕುರಿತು, “ಹೃದ ಯೇಶ್ವರರೇ ! ನೀವು ದೂರದಲ್ಲಿದ್ದರೂ ನನ್ನನ್ನು ರಕ್ಷಿಸುವ ಭಾರ ತಪ್ಪು ದೇ, ನನ್ನನ್ನು ಮರೆಯಬೇಡಿ. ” ಎಂದು ಹೇಳಿ ಅವರಿಬ್ಬರನ್ನೂ ಕಳು ಹಿಸಿ, ಆದಿನ ಮಲಮುಲ್‌ಖಾನನಿಗೆ ಸಂಭವಿಸಿದ್ದ ಸಂಗತಿಯನ್ನು ಕೇಳಿ ರಾಮ ಯಾಮಾತ್ಯನು ಏನೆಂದುಕೊಳ್ಳುವನೋ ಎಂದು ಹೆದರುತ್ತಾ ಆ ಸಂಗತಿ ಯನ್ನು ಮರೆಮಾಚುವುದಕ್ಕಾಗಿ ಯೋಚಿಸಿಕೊಳ್ಳುತ್ತಾ ತನ್ನ ಮಂದಿರಕ್ಕೆ ಹೋದಳು. ಮೂವತ್ರನೆಯ ಪ್ರಕರಣ, ಯುದ್ಧ ೪ ದಿ ಒಂದು ದಿನ ತೋಫಖಾನನು ತನ್ನ ಮಂದಿರದಲ್ಲಿ ಕುಳಿತುಕೊಂಡು ಏನನ್ನೋ ಯೋಚಿಸಿಕೊಳ್ಳುತ್ತಿದ್ದನು. ಆಗ ಫಕೀರನು ಅಲ್ಲಿಗೆ ಬಂದು ಸತ್ಯತನಾಗಿ ಉಚಿತಾಸನದಲ್ಲಿ ಕುಳಿತುಕೊಂಡು ಖಾನನನ್ನು ಕುರಿತು, (* ಯವನಶ್ರೇಷ್ಠರೇ ! ಕಾರಾಲೋಚನಾಭಾರದಿಂದ ತಾವು ಬಳಲಿರುವಂತೆ ಕಾಣುವುದು, ಈ ಭಾಗದಲ್ಲಿ ನನ್ನಿಂದ ಏನಾದರೂ ಸಹಾಯವಾಗುವಂತಿ ದ್ದರೆ ತಮ್ಮ ಬಳಲಿಕೆಯಲ್ಲಿ ಸ್ವಲ್ಪಭಾಗವನ್ನು ನಾನೂ ವಹಿಸಬೇಕೆಂದಿರು ವೆನು ” ಎಂದು ಹೇಳಿದನು. ಅದನ್ನು ಕೇಳಿ ಖಾನನು ಸಂತೋಷಪಟ್ಟು, “ ಮಹಾತ್ಮರೇ ! ರಾಜ ಕೀಯ ವ್ಯವಹಾರಗಳು ಸ್ಪಲ್ಪ ತೊಡಕಾಗುತ್ತಿವೆ. ಇನ್ನು ಕೆಲವು