ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಯರು ವಿಜಯ ೧೫ಳ ಮೂವತ್ತೊಂದನೆಯು ಪ್ರಕರಣ ಪಂಗಿಜಯ. ದಕ್ಷಿಣ ಹಿಂದೂಸ್ಥಾನದ ರಾಜ್ಯಗಳಲ್ಲಿ ವಿಜಯನಗರವನ್ನು ಬಿಟ್ಟರೆ, ಬಿಜಾಪುರವೇ ಅನೇಕವಿಧವಾದ ಸಹಾಯಸಂಪತ್ತುಗಳನ್ನು ಪಡೆದಿದ್ದ ರಾಜ್ಯ ವೆನ್ನಬಹುದು, ಬಿಜಾಪುರ ರಾಜ್ಯಕ್ಕೆ ಮಲಪುರುಷನು ಯೂಸಫ್ಆದಿ ಲ್‌ಪಹನು. ಈತನು ಉತ್ಕೃಷ್ಟವಾದ ಮಹಮ್ಮದೀಯಕುಲವೊಂದರಲ್ಲಿ ಹುಟ್ಟಿದವನು. ಕ್ರಿ. ಶ. ೧೪೫೯ ನೆಯ ವರುಷದಲ್ಲಿ ಈತನು ಹಿಂದೂಸ್ಥಾನಕ್ಕೆ ಬಂದು ಆಗ ದಕ್ಷಿಣದೇಶದಲ್ಲಿ ಸುಪ್ರಸಿದ್ಧನಾಗಿದ್ದ ಮಹಮದ್‌ಗವಾನನ ದಯೆ ಯನ್ನು ಸಂಪಾದಿಸಿ ಬಿಜಾಪುರಕ್ಕೆ ಅಧಿಕಾರಿಯಾದನು, ಬಹಮನಿ ವಂಶದ ದೊರೆಯಾದ ಮಹಮ್ಮದ್‌ಪಹು ಕಾಲವಾದಬಳಿಕ ಬಿಜಾಪುರದಲ್ಲಿ ಆದಿಲ್‌ ಪಹನೇ ಸ್ವತಂತ್ರನಾದನು. ಆ ಬಳಿಕ ಬಿಜಾಪುರದಲ್ಲಿ ಈತನು ಅನೇಕ ಸುಂದರಮಂದಿರಗಳನ್ನು ಕಟ್ಟಿಸಿ ರಾಜಧಾನಿಯನ್ನು ಸಿಂಗರಿಸಿದನು. ಈತನು ಬದುಕಿದ್ದಷ್ಟು ಕಾಲವೂ ಯುದ್ಧಗಳನ್ನು ಮಾಡುತ್ತಾ ರಾಜ್ಯವನ್ನು ವೃದ್ಧಿ ಪಡಿ ಸಿಕೊಳ್ಳುತ್ತಿದ್ದನು, ಪಾಶ್ಚಾತ್ಯ ದೇಶದಿಂದ ಬಂದು ಗೋವಾಪಟ್ಟಣದಲ್ಲಿ ನೆಲೆ ಸಿದ್ದ ಪೋರ್ಚುಗೀಸರನ್ನೂ ಸೋಲಿಸಿ ಗೋವಾಪಟ್ಟಣವನ್ನು ಸ್ವಾಧೀನ ಪಡಿಸಿಕೊಂಡಿದ್ದನು. ಹೀಗೆಯೇ ಅನೇಕ ರಾಜ್ಯಗಳನ್ನು ಜಯಿಸಿ ಬಹಳ ಪ್ರಸಿದ್ಧನಾಗಿ ಕ್ರಿ.ಶ. ೫೧೦ರಲ್ಲಿ ಈದೊರೆಯು ಕಾಲವಶನಾದನು. ಈತನ ಕುಮಾರನೇ ಪಾಠಕರಿಗೆ ಪರಿಚಿತನಾಗಿರುವ ಇಸ್ಮಾಯಿಲ್ ಆದಿಲ್‌ಪಹನು. ಈತನು ಪಟ್ಟಕ್ಕೆ ಬಂದಾಗ ಇನ್ನೂ ಒಂಬತ್ತು ವರುಷದ ಹುಡುಗನಾ ? ಗಿದ್ದನು. ಕಮಾಲ್ರ್ಖಾ ಎಂಬ ಸರದಾರನು ಈ ಬಾಲಕನನ್ನು ಕೊಂದು