ಪುಟ:ರಾಯಚೂರು ವಿಜಯ ಭಾಗ ೧ .djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯೂರುವಿಜಯ ೧೫೭ ಗಿತ್ತು, ಫಕೀರನ ಅಭಿಪಾಯದ ಮೇರೆಗೆ ರಾಮಯಮಂತ್ರಿಯು ಶತ್ರು ವೆಂದು ನಂಬಿ ತನ್ನ ಪ್ರಭುವನ್ನು ನಂಬಿಸುವುದಕ್ಕಾಗಿ ತೋಫಖಾನನು ಆ ವಿಷಯದಲ್ಲಿ ಬಂದು ಕಾಗದವನ್ನು ಬರೆದು ತನ್ನ ಪತ್ರಕ್ಕೆ ಉಪಬಲವಾಗಿ ಉಳಿದ ಕಾಗದಗಳನ್ನು ಕಳುಹಿಸಿಕೊಟ್ಟನು. ಆದಿಲ್‌ಷಹನು ಆ ಪತ್ರಗ ಳನ್ನು ಓದಿಕೊಂಡು ಒಟ್ಟುಗೂಡುತ್ತಿದ್ದ ಮಹಮ್ಮದೀಯ ರಾಜ್ಯಗಳನ್ನು ಚದರಿಸುವುದಕ್ಕಾಗಿಯೇ ತಿಮ್ಮರಸನು ಮಾಡಿದ್ದ ಮಾಟಗಳಂದೂ, ತೋಫಲ'ಖಾನನು ಬುದ್ಧಿಹೀನತೆಯಿಂದ ಕೆಲಸವನ್ನು ಕೆಡಿಸಿಬಿಟ್ಟನೆಂದೂ ವ್ಯಥೆಪಟ್ಟನು. ರಾಮಯಮಂತ್ರಿಯಂತಹ ಬುದ್ಧಿಶಾಲಿ: ಮು ಮತ್ತೊಬ್ಬನಿಲ್ಲ ವೆಂದು ನಿರ್ಧರಿಸಿ, ಆತುರಪಟ್ಟು ಆತನಿಗೆ ಯಾವ ಒಗೆಯ ತೊಂದರೆಯನ್ನೂ ಮಾಡಕೂಡದೆಂದೂ ಹಿಂದಿನಂತೆಯೇ ಆತನನ್ನು ಗೌರವಿಸುತ್ತಿ' ಬೇಕೆಂದೂ, ದುರ್ಗರಕ್ಷಣೆಗಾಗಿ ತಾನೇ ಸೈನ್ಯವನ್ನು ತೆಗೆದುಕೊಂಡು ಬರುವೆನೆಂದೂ ಒಂದು ಪತ್ರವನ್ನು ಬರೆದು ತೋಫಖಾನನಿಗೆ ಕಳುಹಿಸಿದನು ತಿಮ್ಮ ರಸನಿಗೆ ಸರಿತೂಗುವ ಮಂತ್ರಿಯು ರಾಮಯನೇಎಂದು ನಿರ್ಧರಿಸಿ ಆತನನ್ನು ತನ್ನ ವಶಪಡಿಸಿಕೊಳ್ಳಬೇಕೆಂದು ಹೀಗೆ ಬರೆದಿದ್ದನು. ಅಷ್ಟು ಹೊತ್ತಿಗೆ ಸೈನ್ಯಗಳನ್ನು ಯುದ್ಧಕ್ಕೆ ಸಿದ್ಧಪಡಿಸಿದ್ದುದರಿಂದ ರಾಯರಸೈನ್ಯವನ್ನು ಸುಲ ಭವಾಗಿ ಜಯಿಸಬಹುದೆಂದು ಆದಿಲ್‌ಷಹನು ಭಾವಿಸಿದ್ದನು. ಆದುದರಿಂದ ಸರ್ವಸೈನ್ಯಾಧಿಪತ್ಯವನ್ನು ತಾನೇ ವಹಿಸಿ ತನ್ನ ಸೈನ್ಯವನ್ನೂ ನಡೆಯಿಸಿ ಕೊಂಡು ರಾಯರಿಗೆ ಹೊರಟನು. ಆತನು ಉತ್ಸಾಹದಿಂದ ಸೈನ್ಯದ ಮುಂಭಾಗದದಲ್ಲಿಯೇ ಹೋಗುತ್ತಿದ್ದುದನ್ನು ಕಂಡು ಸೈನ್ಯದವರೆಲ್ಲರೂ ಪರಮೋತ್ಸಾಹದಿಂದ ನುಗ್ಗಿ ಬರುತ್ತಿದ್ದರು. ಆದಿಲ್‌ಪಹನು ತನ್ನ ಸೈನ್ಯ ಬೆಲ್ಲಿ ಕುದುರೆಯ ದಳವನ್ನು ಮುಂದೆಯೂ ಆನೆಗಳ ಬಲವನ್ನು ಹಿಂದೆಯ ಆ ಬಳಿಕ ಪದಾತಿವರ್ಗವೂ ಬರುವಂತೆ ಏರ್ಪಡಿಸಿ ಕೃಷ್ಣಾ ನದಿಯನ್ನು ದಾಟಿ ರಾಯರಿನ ಸಮಿಾಪಕ್ಕೆ ಬರುತ್ತಿದ್ದನು.