ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೧ ರಾಯೂರುವಿಜಯ | ಹಲುಬಿ ಗೋಳಾಡುತ್ತಿದ್ದರು, ಇವರನ್ನು ಕಂಡು ಮನಸ್ಸು ಕರಗಿ ಕೃಷ್ಣ ದೇವರಾಯರು ಅಂತಹವರ ಬಳಿಯಲ್ಲಿದ್ದ ಆಯುಧಗಳನ್ನು ಕಿತ್ತುಕೊಂಡು ಅವರಿಗೆ ಯಾವಬಗೆಯ ಬಾಧೆಯನ್ನೂ ಮಾಡದೆ ಕಳುಹಿಸಿಬಿಡಬೇಕೆಂದು ಆಜ್ಞಾಪಿಸಿದರು. ಇದನ್ನು ಕಂಡು ಅನೇಕ ಮಹಮ್ಮದೀಯ ಸೈನಿಕರು ತಮ್ಮ ತಮ್ಮ ಆಯುಧಗಳನ್ನು ಎಸೆದುಬಿಟ್ಟು ತಮ್ಮ ಕಾಲಿಗೆ ಬುದ್ಧಿ ಹೇಳಿ ದರು. ರಾಯರಿಗೆ ಬೇಕಾಗಿದ್ದುದು ಶತ್ರುಗಳಿಗೆ ಭಯವನ್ನುಂಟುಮಾಡಿ ಅವರು ರಾಯೂರಿನ ರಕ್ಷಣೆಗೆ ಬಾರದೆ ಇರುವಂತೆ ಆಗಬೇಕೆಂಬುದೇ, ಈ ಯುದ್ಧದಲ್ಲಿ ಶತ್ರುಗಳ ಸಮರಸಾಧನಗಳು ಕೃಷ್ಣದೇವರಾಯರಿಗೆ ಅಸಂಖ್ಯಾತವಾಗಿ ಸಿಕ್ಕಿಹೋದುವು. ಹೀಗೆ ಜಯವಾದುದಕ್ಕಾಗಿ ತಮ್ಮ ಸೈನಿಕರಿಗೆ ಅವರವರ ಯೋಗ್ಯತಾನುಸಾರವಾಗಿ ಅನೇಕ ಬಹುಮಾನ ಗಳನ್ನು ಕೊಟ್ಟು ರಾಯರನ್ನು ಸಾಧಿಸುವುದಕ್ಕೆ ಮುಂಚೆ ಸೈನಿಕರು ದುವಾರಿಸಿಕೊಳ್ಳಲು, ಕೃಷ್ಣಾ ನದಿಯ ತೀರದಲ್ಲಿ ತಮ್ಮ ಪಾಳೆಯವನ್ನು ಬಿಟ್ಟು ವಿಶ್ರಮಿಸಿಕೊಳ್ಳುತ್ತಿದ್ದರು. 8 P Wy