ಪುಟ:ರಾಯಚೂರು ವಿಜಯ ಭಾಗ ೧ .djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ ಕರ್ಣಾಟಕ ಗ್ರಂಥಮಾಲೆ ೧ ಹೀಗೆ ಮಾತನಾಡುತ್ತಾ ಅವರಿಬ್ಬರೂ ಮುಂದಕ್ಕೆ ಹೊರಟು ಗ್ರಾಮವನ್ನು ಸೇರಿದರು. ಅವರು ಹೊಕ್ಕ ಬೀದಿಯಲ್ಲಿ ನಾಲೈದು ಮನೆಗಳನ್ನು ದಾಟಿದ ಕೂಡಲೆ ಅಲ್ಲಿ ಒಂದು ಮನೆಯ ಮುಂದೆ ನಿಂತು ರುದ್ರದೇವನನ್ನು ಕುರಿತು, “ ಅಯ್ಯಾ! ನಾನು ಹೇಳಿದುದು ಈ ಮನೆಯೇ. ಈ ಮನೆಯವರು ಬಹಳ ಒಳ್ಳೆಯವರು ; ಶ್ರೀಮಂತರು ; ಚೆನ್ನಾಗಿ ಆದರಿ ಸುವರು” ಎಂದು ಹೇಳಿ ಆ ಮಾರ್ಗಸ್ಥನು ತನ್ನ ದಾರಿಯನ್ನು ಹಿಡಿದನು. ಆ ಮನೆಯ ಬಾಗಿಲಲ್ಲಿ ಸುಮಾರು ಇಪ್ಪತ್ತು ವರ್ಷ ವಯಸ್ಸಿನ ಸ್ತ್ರೀಯು ಹಿಮ್ಮೊಗವಾಗಿ ನಿಂತು ಯಾರೊಡನೆಯೋ ಮಾತನಾಡುತ್ತಿದ್ದಳು, ರುದ್ರ ದೇವನು ಸವಿಾಪಕ್ಕೆ ಹೋಗಲು ನಾಜಿ ದೂರದಲ್ಲೇ ನಿಂತು, “ ಅಮ್ಮಾ ! ನಾನು ರೆಡ್ಡಿ ಕುಲದವನು, ನನ್ನ ಹೆಸರು ರುದ್ರದೇವ, ಈ ರಾತ್ರಿ ಇಲ್ಲಿ ವಿಶ್ರಮಿಸಿಕೊಳ್ಳಲು ನನಗೆ ಅನುಕೂಲವು ಸಿಕ್ಕೀತೇ?-೨ ಎಂದು ಸಂಕೋಚ ದಿಂದ ಕೇಳಿದನು. ಆಗ ಆ ಯುವತಿಯು ಅವನ ಕಡೆಗೆ ತಿರುಗಿ, “ ಓಹೋ ! ಸೋದರ, ರುದ್ರದೇವ : ಇದೇನು ? ಇಷ್ಟು ಹೊತ್ತಿನಲ್ಲಿ ಎಲ್ಲಿಂದ ಬರು ತಿರುವೆ ? ಎಲ್ಲಿಗೆ ಹೋಗುತ್ತಿರುವೆ ? ನಾ ಇಲ್ಲಿರುವೆವೆಂದು ನಿನಗೆ ಯಾರು ಹೇಳಿದರು ? ಕುಳಿತುಕೊ. ನಿಮ್ಮ ಭಾವನವರ ಇಲ್ಲೇ ಬಂದು ಹಳ್ಳಿಗೆ ಹೋಗಿರುವರು. ಇನ್ನೇನು ಬಂದುಬಿಡುವರು. ಅವರು ಬಂದು ನಿನ್ನನ್ನು ಚೆನ್ನಾಗಿ ಆದರಿಸುವರು, ” ಎಂದು ಆ ಯುವತಿಯು ಬಹಳ ವಿನಯದಿಂದ ಹೇಳಿದಳು. ರುದ್ರದೇವನು ಆಕೆಯ ಮಾತುಗಳನ್ನು ಕೇಳಿ ಆಶ್ಚರ್ಯಗೊಂ ಡನು, ಆಕೆಯು ಅವಕುಂಠನವನ್ನು ಧರಿಸಿದ್ದುದರಿಂದ ಆಕೆ ಯಾರೆಂ ಬುದನ್ನು ಗುರುತಿಸಲಾಗಲಿಲ್ಲ. ಕಂಠಧ್ವನಿಯಾದರೆ ಹಿಂದೆ ಎಲ್ಲಿಯೋ ಕೇಳಿದ್ದಂತಿತ್ತು, ಆಗ, “ ಅಮ್ಮಾ ! ನೀವು ಯಾರು ? ಹಿಂದೆ ಎಲ್ಲಿಯೋ ಓು