ಪುಟ:ರಾಯಚೂರು ವಿಜಯ ಭಾಗ ೧ .djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಪ್ರಕರಣ ೨೫

೧ ೧ ೧ ೧ ನೋಡಲು ಅಲ್ಲಿಗೆ ಬರುತ್ತಿದ್ದರು, ಕೆಲವರು ವೀರರು ಖರತರಖಡ್ಗಳನ್ನು, ಧರಿಸಿ ಮಹೋತ್ಸಾಹಭರಿತಂತರಂಗರಾಗಿ ಹೋಗುತ್ತಿದ್ದರು. ಅವರ ದೃಢ ತರ ಶರೀರಗಳನ್ನು ನೋಡಿದ ಮಾತ್ರದಿಂದಲೇ ಅವರು ಮಹಾಬಲಶಾಲಿಗಳಾಗಿ ದ್ದರೆಂದು ಊಹಿಸಬಹುದಾಗಿದ್ದಿತು. ಆ ಹುಚ್ಚನು ಹೀಗೆ ಹೋಗುತ್ತಿದ್ದ ವೀರರಲ್ಲಿ ಒಬ್ಬನನ್ನು ಕಣ್ಮರೆಯಾಗಗೊಡದಂತೆ ಹಿಂಬಾಲಿಸಿಕೊಂಡ ಹೋಗುತ್ತಿದ್ದನು. ಬಾಲಕರೂ ಸಹ ಹುಚ್ಚನನ್ನು ಅನುಸರಿಸಿಕೊಂಡೇ ಹೋಗುತ್ತಿದ್ದರು, ಹೀಗೆ ಹುಚ್ಚ ನೂ ಅವನನ್ನು ಮುಸುರಿಕೊಂಡಿದ್ದ ಹುಡುಗರೂ ತನ್ನ ಹಿಂದೆಹಿಂದೆಯೇ ಬರುತ್ತಿದ್ದರೂ, ಆ ವೀರಪುರುಷನು ಅತ್ತಿತ್ತ ನೋಡದೆ ಹೋಗಿ ಜನರ ಗುಂಪನ್ನು ಸೇರಿದನು, ಆ ಗುಂಪಿನೊಳ ಗಡೆ ಕಲವರು ಆಯುಧಧಾರಿಗಳಾದ ವೀರರು ನಿಂತಿದ್ದರು. ಜನರ ಗುಂಪು ಒಳನುಗ್ಗದಂತೆ ಅದನ್ನು ತಡೆದು ನಿಲ್ಲಿಸುವುದಕ್ಕಾಗಿ ಕೆಲವರು ರಾಜಭಟರು ನೋಡಿಕೊಳ್ಳುತ್ತಿದ್ದರು. ಹಿಂದೆ ನಿಂತಿದ್ದವರಿಗೆ ಒಳಗಣ ಸಮಾಚಾರಗಳು ಗೊತ್ತಾಗದಿದ್ದುದರಿಂದ ಅವರು ಸಮೀಪದಲ್ಲಿದ್ದ ಗಿಡಮರಗಳನ್ನು ಹತ್ತಿ ನೋಡುತ್ತಿದ್ದರು. ಮೇಲೆರಳಿದ ವೀರಪುರುಷನು ಒಳಗಿದ್ದ ವೀರರಂತೆಯೇ ಸುಸಜ್ಜಿತನಾಗಿ ಬಂದಿದ್ದರೂ, ಒಳಗಣ ಸಮಾಚಾರಗಳನ್ನು ತಿಳಿದುಕೊಂಡ ಹೊರತು ಆ ಗುಂಪಿನೊಳಕ್ಕೆ ಪ್ರವೇಶಿಸಲು ಇಷ್ಟಪಡದೆ ಹೊರಪಕ್ಕದಲ್ಲಿಯೇ ನಿಂತುಕೊಂಡಿದ್ದನು. ಸಾಧಾರಿಜನರಿಗಿಂತಲೂ ಆತನು ದೀರ್ಘಕಾರ ನಾಗಿದ್ದುದರಿಂದ, ಒಳಗೆ ನಡೆಯುತ್ತಿದ್ದ ಕಾರ್ಯಗಳಲ್ಲವೂ ನಿಂತಿದ್ದ ಸ್ಥಳ ದಿಂದಲೇ ಆತನಿಗೆ ಸುಲಭವಾಗಿ ಕಾಣುತ್ತಿದ್ದುವು. ಇಷ್ಟರಲ್ಲಿ ಆ ಹುಚ್ಚನೂ ಅದೇ ಸ್ಥಳವನ್ನು ಸಮೀಪಿಸಿ ಹುಚ್ಚು ಹುಚ್ಚಾಗಿ ಹರಟೆಹೊಡೆಯುತ್ತಾ ಆ ಗುಂಪಿನೊಳಕ್ಕೆ ನುಗ್ಗಿ ದನು, ಅವನನ್ನು ಒಬ್ಬರಾದರೂ ತಡೆಯಲಿಲ್ಲ, ಅಲ್ಲಿ ದ್ದವರನ್ನು ಕುರಿತು ಆ ವೀರನು ಅಲ್ಲಿ ನಡೆಯುವ ಸಂಗತಿಯೇನೆಂದು ವಿಚಾ ರಿಸಲು “ ವೀರರ ಬಲಾಬಲಗಳನ್ನೂ, ಆಯುಧವಿದ್ಯಾಚಾತುರವನ್ನೂ ಚೆನ್ನಾಗಿ ಪರೀಕ್ಷಿಸಿ ಕೃಷ್ಣದೇವರಾಯರು ಅವರವರ ಯೋಗ್ಯತೆಗೆ ತಕ್ಕಂತೆ ಬಹುಮಾನಗಳನ್ನು ದಯಪಾಲಿಸುವರು ” ಎಂದು ಅವರು ತಿಳಿಸಿದರು. - ಇದನ್ನು ಕೇಳಿ ಆ ಸೂತನಬೈಲುಷನು ಅತ್ಯಾನಂದವನ್ನು ಹೊಂದಿ ನಿನಗೆ ತಕ್ಕ ಸಮಯವು ೪ಭಿಸಿತೆಂದು ನೆನೆಸಿ ಇಸ ಆ ವೀಡನೆ