ಪುಟ:ರಾಯಚೂರು ವಿಜಯ ಭಾಗ ೧ .djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಪ್ರಕರಣ ತಿದ್ದ ಕೆಲವರು ಸ್ತ್ರೀಯರು ಆತನ ದೃಷ್ಟಿಗೆ ಗೋಚರರಾಗಿ, ವಿದ್ಯುಲ್ಲತ ಯಂತೆ ಕ್ಷಣಮಾತ್ರದಲ್ಲಿ ಅದೃಶ್ಯರಾದರು. ವಿಜಯಸಿಂಹನು ಸ್ವಲ್ಪ ಕಾಲದ ವರೆಗೆ ತಿರುಗಾಡಿ ಬಳಿಕ ತನ್ನ ನಿವಾಸಸ್ಥಾನಕ್ಕೆ ಹಿಂದಿರುಗಿ ಆರೋಗಣೆ ಯನ್ನು ತೀರಿಸಿಕೊಂಡು ಹಗಲನ್ನು ಅತ್ಯಂತ ಕಷ್ಟದಿಂದ ಕಳೆದನು. ರಾತ್ರಿ ಯಾದ ಕೂಡಲೆ ಸಂಗೀತವನ್ನು ಕೇಳಬಹುದೆಂದು ಸಂಜೆಯಾಗುವುದನ್ನೇ ಕುತೂಹಲದಿಂದ ನಿರೀಕ್ಷಿಸುತ್ತಿದ್ದನು. ಆದರೆ ಆದಿನ ರಾತ್ರಿ ಸಂಗೀತಧ್ವನಿ ಯೇ ಕೇಳಿಸಲಿಲ್ಲ, ಆದುದರಿಂದ ಆ ವಿಷಯದಲ್ಲಿ ನಿರಾಶನಾಗಿ ನಿದ್ದೆಯನ್ನಾ ದರೂ ಮಾಡಬೇಕೆಂದು ಪ್ರಯತ್ನಿಸಿದನು, ಸರಿಹೊತ್ತಿನವರೆಗೂ ಸ್ವಲ್ಪವಾ ದರೂ ನಿದ್ದೆ ಬಾರಲಿಲ್ಲ, ಕಡೆಗೆ ಬೆಳಕು ಹರಿಯುವ ಸಮಯದಲ್ಲಿ ಸ್ವಲ್ಪ ತೂಕಡಿಕೆ ಹತ್ತಿತು, ಆಗ ತನ್ನ ಬಳಿಗೆ ಯಾವತ್ತೂ ಒಬ್ಬ ವ್ಯಕ್ತಿಯು ಬಂದಂತಾಯಿತು, ಕಣ್ಣೆರೆದು ಸುತ್ತಲೂ ನೋಡಲಾಗಿ ಯಾರೊಬ್ಬರೂ ಕಾಣಿಸಲಿಲ್ಲ ವಾದಕಾರಣ, ಭಾಂತಿಯಿಂದ ಹಾಗಾಗಿರಬೇಕೆಂದು ಊಹಿಸಿ ಪುನಃ ಮಲಗಿಕೊಂಡನು. ರಾತ್ರಿಯೆಲ್ಲಾ ನಿದ್ದೆ ಇಲ್ಲದಿದ್ದುದರಿಂದ ಬಲವಾಗಿ ನಿದ್ದೆ ಹಿಡಿಯಿತು. ಈ ಸಮಯದಲ್ಲಿ ಒಬ್ಬ ಸ್ತ್ರೀಯು ಆತನ ಕೊಠಡಿಗೆ ಬಂದು, ಶಯನಿಸಿದ್ದ ೬ ವೀರನ ರೂಪರೇಖಾವಿಲಾಸಕ್ಕೆ ಆಗ್ಲರ ಪಡುತ್ತು ಆತನನ್ನು ಎಬ್ಬಿಸಿ ಮಾತನಾಡಿಸಬೇಕೆಂದು ಯೋಚಿಸಿದಳು, ಆದರೆ ಸಮೀಪ ದಲ್ಲಿ ಯೇ ಮಲಗಿದ್ದ ಸೇವಕನನ್ನು ಕಂಡು ಅಪಾಯವೇನಾದರೂ ಆಗ ಬಹುದೆಂದು ಹೆದರಿ ವಿಜಯಸಿಂಹನ ಸಮೀಪದಲ್ಲಿ ಜೋಲಾಡುತ್ತಿದ್ದ ಅವನ ಅಂಗರೇಖೆಯ ಜೇಬಿನಲ್ಲಿ ತಾನು ತಂದಿದ್ದ ಪತ್ರಿಕೆಯನ್ನು ಮಡಿಸಿಟ್ಟು, ಅಲ್ಲಿಂದ ಅತಿಚಿರತೆಯಾಗಿ ಹೊರಟುಹೋದಳು. ಬೆಳಕು ಹರಿದಮೇಲೆ ವಿಜಯಸಿಂಹನು ತನ್ನ ಅಂಗರೇಖೆಯನ್ನು ತೊಟ್ಟು ಕೊಳ್ಳಬೇಕೆಂದು ತೆಗೆದು ಕೊಂಡಾಗ ಅದರಲ್ಲಿದ್ದ ಪತ್ರಿಕೆಯು ಅವನ ದೃಷ್ಟಿಗೆ ಗೋಚರವಾಗಿ ಅದರಲ್ಲಿ ಬರೆದಿದ್ದ ಬರೆವಣಿಗೆಯು ಆತನ ಮನಸ್ಸಿಗೆ ಅತ್ಯಂತ ಹರ್ಷವನ್ನುಂಟು ಮಾಡಿತು, ಆ ಪತ್ರಿಕೆಯನ್ನು ಬಹಳ ಆದರದಿಂದ ತೆಗೆದುಕೊಂಡು ನೋಡಲು ಅದರಲ್ಲಿ ಹೀಗೆ ಬರೆದಿದ್ದಿತು

  • ಹೃದಯವಲ್ಲಭರೇ ! ಆನೆಗೊಂದಿಗೆ ತರದೆ ಒಂದುಬಾರಿ ದಯ ಮಾಡಿಸಬೇಕು.

ಬಿಂಗಳಾದ ಮುಕುಂಟೆ »