ಪುಟ:ರಾಯಚೂರು ವಿಜಯ ಭಾಗ ೧ .djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ఎరుపయే Mಷಿ ಮಾಡಿದ್ದ ಪರಾಭವಕ್ಕಾಗಿಯೂ ಅವನಮೇಲೆ ಮುಯಿ ತೀರಿಸಿಕೊಳ. ಬೇಕೆಂದು ಪ್ರಹರೇಶ್ವರನು ದೃಢಸಂಕಲ್ಪವಾಗಿದ್ದನು. ಇದನ್ನು ವಿಜಯ ನಿಂಹನಿಗೆ ತಿಳಿಸಿದುದೇ ಆದರೆ, ಪ್ರಹರೇಶ್ವರನಿಗೆ ಹಾನಿಯಾಗುವುದೆಂದು ಅವಳು ಹೆದರಿಕೊಂಡಿದ್ದಳು. ಆದರೆ ಹೀಗೆ ತಿಳಿಸದಿದ್ದರೆ ಪ್ರಸರೇಶ್ವರನು ಸಜ್ಜನನೆಂದು ತಿಳಿದು ಅಲ್ಲಿಗೆ ನಿಲ್ಲಲು ವಿಜಯಸಿಂಹನು ಒಡಂಬಡುವ ನಂದೂ ಅದರಿಂದ ಅವನಿಗೆ ಹಾನಿ ತಟ್ಟುವುದೆಂದೂ ಯೋಚಿಸಿದಳು. ಆದುದರಿಂದ ಯಾವ ತೊಂದರೆಗೂ ಸಿಕ್ಕುವುದಕ್ಕೆ ಮುಂಚೆಯೇ, ವಿಜಯ ಸಿಂಹನನ್ನು ಕಳುಹಿಸಿಬಿಡುವುದು ಉತ್ತಮವೆಂದು ತಿಳಿದು, ಆತನನ್ನು ಕಳುಹಿಸಿಬಿಟ್ಟಳು. ಏಳನೆಯ ಪ್ರಕರಣ. - ಪ್ರಹರೇಶ್ವರಪಾತ್ರ. (* ಮುಖಂ ಪದ್ಮದಳಾಕಾರಂ ವಚಶ್ಚಂದನಶೀತಲಂ | ಕೃತ್ಯರ್ಶರೀಸಮಂ ಚಾತಿವಿಸಯಂ ಧೂರ್ತಲಕ್ಷಣಂ|| ) - ಹೀಗೆ ತನ್ನ ಪ್ರಿಯಳ ಸಂದರ್ಶನವನ್ನು ಮಾಡಿಕೊಂಡು ಆಕೆಯೊ ಚನೆ ಮಾತನಾಡಿದ್ದರೂ ವಿಜಯಸಿಂಹನು ಅಸಂತುಷ್ಟನಾಗಿ ಆ ಸ್ಥಳವನ್ನು ಬಿಟ್ಟು ಹೋಗಲು ಇಚ್ಛೆಯಿಲ್ಲದವನಾಗಿದ್ದನು. ಆದರೂ ಅವನಿಗೆ ಒದಗ ಬಹುದಾದ ಅಪಾಯಗಳನ್ನು ನೆನೆದು ಹಿಂದಿರುಗಿದನು, ರಾಜಮಂತ್ರಿಗಳ ಬೃರೂ ಹೇಳಿದ ಮಾತನ್ನು ಕೇಳದೆ ಸಾಯಹಸವಾಡಿ ಬಂದು ಅಪಾಯವಿಲ್ಲದೆ ಹಿಂದಿರುಗಿ ಹೋಗಲು ಸಾಧ್ಯವಾದುದಕ್ಕಾಗಿ ಸಂತೋಷಿಸಿ ಭಗವಂತನಿಗೆ ಮನಸ್ಸಿನಲ್ಲಿಯೇ ವಂದಿಸುತ್ತಾ ದುರ್ಗದ್ವಾರವನ್ನು ದಾಟಿಬಂದನು, ಅಷ್ಟ ರಲ್ಲಿ ಒಬ್ಬನು ಅವನನ್ನು ಕಂಡು ನಿಂತುಕೊಂಡನು, ಅವನ ಸಮೀಪಕ್ಕೆ - ಬಂದು ವಿಜಯಸಿಂಹನು ತನ್ನ ಕುದುರೆಯ ನಡಿಗೆಯನ್ನು ಸಾವಕಾಶವಾಗಿ ದನು. ಕೂಡಲೆ ಆ ಪುರುಷನಿಗೂ ವಿಜಯಸಿಂಹನಿಗೂ ಈ ಮುಂದೆ ಕೇಳುವಂತೆ ಸಂಭಾಷಣೆ ಪ್ರಾರಂಭವಾಯಿತು~