ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒ ದಿ ಬ ಆಕ್ಕೂರು ವಿಜಯ ಹಿಗಳಿಂದ ನಿನಗೆ ಯಾವ ತೊಂದರೆಯೂ ಆಗದಂತ ಈ ಇಬ್ಬರು ಭಟರು ನಿನ್ನ ಅಧೀನದಲ್ಲಿರುವರು. ಬೇಗ ಹೋಗಿಬಿಟ್ಟು ಬರಲೋ ? !! ಎಂದು ಪ್ರಹರೇಶ್ವರನು ಉತ್ಸಾಹದಿಂದ ಕೇಳಿ, ಅವನ ಅನುಮತಿಯನ್ನು ಪಡೆದು ಹೊರಟನು. ಈ ಸಮಯದಲ್ಲಿ ವಿಜಯಸಿಂಹನು, ಸಾಧ್ಯವಾದರೆ ಮುಕ್ತಾಂಬೆ ಯನ್ನು ಕಂಡು, ಆಕೆಯ ಕೋರಿಕೆಗೆ ವ್ಯತಿರಿಕ್ತವಾಗಿ ನಡೆಯಬೇಕಾಗಿ ಬಂದುದನ್ನು ಕುರಿತು ತಿಳಿಸಬೇಕೆಂದು ನಿರ್ಧರಿಸಿಕೊಂಡನು, ಆದರೆ ಪ್ರಹ ರೇಕ್ಷರನು ನಿಯಮಿಸಿದ್ದ ಇಬ್ಬರು ಆಳುಗಳೂ ಅಲ್ಲಿಯೇ ಇದ್ದುದರಿಂದ ಅವಕಾಶವೇ ಸಿಕ್ಕಲಿಲ್ಲ. ವಿಜಯಸಿಂಹನಿಗೆ ಸನ್ನಿಹಿತವಾಗಿದ್ದ ಆಪತ್ತನ್ನು ತಿಳಿಸಬೇಕೆಂದು ಮುಕ್ಕಾಂಬೆಗೂ ಅತ್ಯಂತ ಕುತೂಹಲವಿದ್ದಿತು, ಆದರೆ ಅಲ್ಲಿ ನಿಯಮಿತರಾಗಿದ್ದ ಸೇವಕರು ಕೇವಲದುರಾತ್ಮರಾಗಿದ್ದುದರಿಂದ ಅವರ ಅದಿರಿಗೆ ಹೋಗಿ ವಿಜಯಸಿಂಹನೊಡನೆ ಮಾತನಾಡುವುದು ಅತ್ಯಪಂದಕರ ಎಂದು ತಿಳಿದು ಬಹಳವಾಗಿ ವ್ಯಥೆಪಟ್ಟು ಕೊಂಡಳು. ಆದುದರಿಂದ ಕೊಟಡಿ ಯಲ್ಲಿ ಹೊಂಚುಹಾಕಿಕೊಂಡು ಕೇಳುತ್ತಿದ್ದ ರಾಮರಾಜನಿಗೆ ಮತ್ತೊಂದು ಬಾರಿ ಎಚ್ಚರಿಸುವುದು ಯುಕ್ತವೆಂದು ಭಾವಿಸಿ, ಅವನ ಬಳಿಗೆ ಹೊರಟಳು. ಅವರ ಸಂಭಾಷಣೆಯಲ್ಲವನ್ನೂ ಕೇಳಿದ್ದ ರಾಮರಾಜನಿಗೆ ಹೆಚ್ಚಾಗಿ ಹೇ ಳುವ ಆವಶ್ಯಕವಿರಲಿಲ್ಲ, ರಾಮರಾಜನು-" ಪಂಪ 1 ಪ್ರಹರೇಶ್ವರನು ನಿರ ಪರಾಧಿ ; ಇದ್ದ ಸಂಗತಿಯನ್ನು ತಿಮ್ಮರಸರಿಗೆ ತಿಳಿಸಿ ಅವರಿಗೆ ಆತನ ವಿವ ಯದಲ್ಲಿರುವ ಸಂಶಯವೆಲ್ಲವನ್ನೂ ಹೋಗಲಾಡಿಸುವೆನು ” ಎಂದು ಹೇಳಿ ದನು. ಮುಕ್ತಾಂಬೆಯು ಆತನ ಮಾತುಗಳನ್ನು ಕೇಳಿ ಬಹಳ ಸಂತುಷ್ಟ ೪ಾಗಿ, ಆತನೊಡನೆ ಕೆಲವು ಗುಟ್ಟು ಮಾತುಗಳನ್ನು ಹೇಳಿ ಹೊರಟುಹೋ ದಳು, ರಾಮರಾಜನೂ ಬೇರೊಂದುದಿಕ್ಕಿಗೆ ಹೊರಟುಹೋದನು. ರಾಜ್ಯ