ಪುಟ:ವಸಂತಮಿತ್ರ ವಿಜಯ ನಾಟಕಂ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರ ಥ ಮಾ ೦ ಕ ೦ ೦ (ಅನಸೂಯೆಯಪ್ರವೇಶ.) ಅನಸೂಯೆ. ಸಖಿ, ನಮ್ಮ ಒಡತಿಯು ತುಂಬ ವ್ಯಸನಾಕ್ರಾಂತ ೪ಾಗಿರುವಳಲ್ಲ! ನಟ. ಕಾರಣವೇನು ? ಅನಸೂಯೆ. ಆಕೆಯು ರತ್ನಪುರಿದೇಶಕ್ಕೆ ತಿಲಕಪ್ರಾಯನಾದ ಸೌಗಂಧಿಕಮಹಾರಾಜನನ್ನು ಮೋಹಿನಿ, ಆತನ ಸಮಾಗಮವು ಎಂ ದಿಗೆ ಲಭಿಸುವುದೆಂದು ಕಾಲವನ್ನು ನಿರೀಕ್ಷಿಸುತ್ತಿದ್ದಾಗ್ಯೂ ಫಲಿಸದೆ, ರಾಜನಮಂತ್ರಿಯಾದ ವಸಂತಮಿತ್ರನು ರಾಜನನ್ನು ಎಡೆಬಿಡದೆ ಇರುವುದೇ ವ್ಯಸನಕ್ಕೆ ಕಾರಣವು. ನಟ, ಗೆಳತಿ, ನಿಮ್ಮ ಒಡತಿಯಾರು ದಯವಿಟ್ಟು ಬೇಗಹೇಳು. ಅನಸೂಯೆ, ಪ್ರಸಿದ್ಧಿ ಹೊಂದಿದ ಚಾರುಶೀಲೆಎಂಬ ವೇಶ್ಯಾಂಗನೆ ಯೆಂದು ಕೇಳಿಲ್ಲವೆ ನಟ, ಆಹಾ ! ನಾನುಬಲ್ಲೆ, ಆದರೇನು ? ಅನಸೂಯೆ. ಈಗ ಒದಗಿರುವ ಕಾರಣದಿಂದಲೂ, ಪ್ರಕೃತಸ್ಥಿತಿ ಯಿಂದಲೂ ಆಕೆಯ ಮನೋರಥವು ನೆರವೇರುವುದೆಂದು ತೋರು ವುದು. ಅಲ್ಲದೆ ಆಕೆಯು ಮಹಾರಾಜನಮೇಲಣ ವ್ಯಾಮೋಹದಿಂದ ಕಂದ | ಅಶನವತೊರೆಯುತ್ತೊದಗಿಹ ಬೆಸನಕ್ಕೆಡೆಯಾಗಿನೀಡಳೆನಗುತ್ತರಮಂ || ಅಸಮಾನ್ಯನಕೋಟಲೆಯಿಂ ದಸುವಂಬಿಡುವಂತೆ ತೋರ್ಪುದಾಲಿಸುಸಖಿನೀಂ || || ೫ || ನಟ, ಸಖಿ, ನಿಮ್ಮಒಡತಿಯ ಮನೋರಥವು ನೆರವೇರುವಬಗೆ ಹೇಗೆ ? ಅನಸೂಯೆ. ಹೇಗೆಂದರೆ, ಮಹಾರಾಜನು ಈದಿವಸ ಮಕರಂ ದೋದ್ಯಾನಕ್ಕೆ ವನವಿಹಾರಾರ್ಥವಾಗಿ ಪ್ರಯಾಣಸನ್ನದ್ದನಾಗಿರುವ ನಂತೆ, ನಮ್ಮ ಒಡತಿಯೂ ಅಲ್ಲಿಗೆ ಹೋಗಿ ತನ್ನ ಮನೋರಥವನ್ನು ನೆರವೇರಿಸಿಕೊಳ್ಳುವಳೆಂದು ತಿಳಿದುಬಂತು. ನಾನು ಬಂದು ಬಹಳ