ಪುಟ:ವಸಂತಮಿತ್ರ ವಿಜಯ ನಾಟಕಂ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦ ಪ್ರ ಥ ಮಾ೦ ಕ ೦ . * ಚಾರುಶೀಲೆ. ಈಗ ಧನ್ಯಳಾದೆನು. ಆ ಪಿಶಾಚಿಯು ತೊಲಗಿತು. ರಾಜನು ಸ್ಥಿರಚಿತ್ತನಾದಂತಿದೆ. ಅಂತವನನ್ನೆ ಆರೀತಿ ಮಾಡಿಸಿದ ಮೇಲೆ ನನ್ನ ಪ್ರಿಯನನ್ನು ನನ್ನ ವಶಮಾಡಿಕೊಳ್ಳುವುದು ಒಂದು ದೊಡ್ಡ ಕಾಲ್ಯವೆ! ನನ್ನ ಹಾವಭಾವವಿಲಾಸಗಳಿಂದ ಅವನನ್ನು ಮರುಳು ಗೊಳಿಸಿ ನನ್ನ ಕೋರಿಕೆಯನ್ನು ನೆರವೇರಿಸಿಕೊಳ್ಳುವೆನು. (ಹತ್ತಿರಕ್ಕೆ ಹೋಗಿ) ಸುಂದರನೆ ? ದೀನಳಾದ ನನ್ನ ಮನೋರಥವನ್ನು ನೆರವೇರಿ ನಿಕೊಡಬೇಕು. ಸೌಗಂಧಿಕ. ನಿನ್ನ ಮನೋರಥವೇನು ? ಚಾರುಶೀಲೆ. ಕಂದ | ಮೀಸಲ್‌ ತಾನೆಂದೆನಿಸಿವಿ ಕಾಸಿಸುತಿರ್ಪ್ಪೇನ್ನ ಆಂವನಂ ನಿನ್ನ ನರೇಂ !! ಆಶಿಸಿತೊ ಕಾಣೆನಾಂ ಪ್ರಾ ಣೇಶನೆ ನಿನ್ನ೦ಗಸಂಗಮಂ ಕುಡುನಲವಿಂ! || ೨೦ ! ಗಂಧಿಕ, ಗುಟ್ಟಿನ ಮಾತುಗಳನ್ನು ನನ್ನ ಮಿತ್ರನ ಕಿವಿಯಲ್ಲಿ ಹೇಳಿ ನನಗೂ, ಆತನಿಗೂ ದ್ವೇಷವನ್ನುಂಟುಮಾಡಿ ಅಗಲಿಸಿರುವ ನಿನ್ನ ಮುಖಾವಲೋಕವು ಅತ್ಯಂತ ಘೋರವಾದದು ನಡೆ. ಚಾರುಶೀಲೆ, ( ರಾಜನ ಶರಗನ್ನು ಹಿಡಿದುಕೊಂಡು ) ಸೌಗಂಧಿಕ. ಸುಮ್ಮನೆ ಪೀಡಿಸಬೇಡ. ನೀನು ಪಾಪಿ, ದ್ರೋಹಿ. ಚಾರುಶೀಲೆ, ಚಕೋರಪಕ್ಷಿಯು ಚಂದ್ರೋದಯವನ್ನು ಬಯಸು ವಂತೆ, ನಾನು ನಿನ್ನ ಸಮಾಗಮಕ್ಕೆ ಬಯಸುತ್ತಿರುವೆನು. ಹೀಗೆ ಧಿಕ್ಕರಿಸಿದರೆ ಬಿಟ್ಟು ಹೋಗುವೆನೆ? - - - 1 ) ರಾಗ-ತೋಡಿ, ಛಾಪು, ಮುನಿಸೇತಕೆನ್ನೊಳು 1 ಪ್ರಿಯ || ವನಜಾತ್ರನೇತ್ರಚಾರುಗಾತ್ರ 1 ಪ | ಸದಯಾತನೆ | ಪದೆದೀಕ್ಷಿಸಿ 1 ಮುದದಿಂದ ಮಾತುಗಳಾಡದೆ | ಮದದಿಂದ ಪೋಪುದೇನು ಪ್ರಿಯ || ೧ || ತನುಬೇರೆಜೀವನವೇಕವು | ಅನುರಾಗದಿಂದಲಿ ಬೇಡುವೆ 1 ಮನಸಾರನೋಡಿಕೂಡುಪ್ರಿಯ ॥ ೨ ಕಡುನಿಯಿಂ | ದೊಡ ನಾಡದೆ 1 ನಿಡುಸುಯ್ದು ಪೋಪುದೇನಚ್ಚರಿ ! ಬಡಿವಾರವೇಕೆಪ್ರಾಣನಾಥ ೪೩||