ಪುಟ:ವಸಂತಮಿತ್ರ ವಿಜಯ ನಾಟಕಂ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ ಸ೦ತ ಮಿ ತ ವಿ ಜ ಯ ನಾ ಟ ಕ ೦. - ಮಾಂಡವ, ಅಯ್ಯಾ, ನಿನ್ನ ಸ್ನೇಹಿತನನ್ನು ಕಾಪಾಡುವ ಮಾರ್ಗ ವನ್ನು ಅನುಸರಿಸುವೆಯೋ ಅಥವ ನನ್ನ ಸೇವಾವೃತ್ತಿಯಲ್ಲಿರು ವೆಯೋ ಹೇಳು ? ವಸಂತಮಿತ್ರ, (ಯೋಚಿಸಿ ತಮ್ಮ ಅಪ್ಪಣೆಯಂತೆ ನಡೆದುಕೊ ಳ್ಳುವೆನು. ಮಾಂಡವ, ನಿನ್ನ ಸ್ನೇಹಿತನು ನಿನ್ನನ್ನು ರಾಜ್ಯಭ್ರಹ್ಮನನ್ನಾಗಿ ಮಾಡಿದಮೇಲೆ ಆ ವೇಶ್ಯಾಂಗನೆಗೆ ಮರುಳಾಗದೆ, ನಿನ್ನನ್ನು ಅಗಲಿದ ದುಃಖದಿಂದಲೇ, ತನ್ನ ರಾಜ್ಯಕ್ಕೆ ಪ್ರವೇಶಿಸದೆ, ಅರಣ್ಯಮಾರ್ಗವಾಗಿ ಸಂಚರಿಸಿಕೊಂಡು ಹೋಗುತ್ತಿರುವಲ್ಲಿ, ಅಮೃತಶೇಖರೀ ಎಂಬ ಪಟ್ಟ ಇದ ಅರಸನಾದ ರಾಜಹಂಸನ ಮಗಳು ಆನಂದವತಿಯನ್ನು ಮದುವೆ ಯಾಗಬೇಕೆಂದು ನಿರ್ಬಂಧ ಸಡಿಸಲು ಕೊನೆಗೆ ಆತನು ಒಪ್ಪಿಕೊ ಳ್ಳಬೇಕಾಯಿತು. ಮದುವೆಯು ಇನ್ನು ಮೂರು ದಿವಸಗಳಿವೆ. ವಸಂತಮಿತ್ರ. (ಹಸನ್ಮುಖದಿಂದ) ಮಹಾತ್ಮರೆ, ಆ ರಾಜ್ಯಕ್ಕೆ ಹೇಗೆ ಹೋಗಬೇಕು. ಮಾಂಡವ, ನೀನು ಹೀಗೆಯೇ ದಕ್ಷಿಣಾಭಿಮುಖವಾಗಿ ಹೋದರೆ ( ಕೈಯೆತ್ತಿ ತೋರಿಸಿ ) ಪಟ್ಟಣವು ಸಿಕ್ಕುವುದು. ಆದರೆ ಮತ್ತೊಂದು ವಿಶೇಷವಿದೆ. ಮದುವೆಯಾದ ಐದನೆಯ ದಿವಸವೇ ನಿನ್ನ ಮಿತ್ರನಿಗೆ ಮರಣವು ಸಂಭವಿಸುವುದಲ್ಲದೆ, ನೀನು ಆತನ ವಿವಾಹಮಹೋ ತ್ವವನ್ನು ನೋಡಲು ಅಕಸ್ಮಾತ್ ಕೋಟೆಯೊಳಗೆ ಬಂದರೆ, ಖಂಡಿತವಾಗಿಯೂ ನಿನ್ನನ್ನು ಬಿಡಕೂಡದೆಂದು ಆಜ್ಞೆ ಮಾಡಿರುವ : ನಲ್ಲ, ಇದಕ್ಕೆ ಏನುಮಾಡುವೆ ? ವಸಂತಮಿತ್ರ. ಆಹಾ! ಸಖನ ಮನಸ್ಸು ಇಸ್ಮರಮಟ್ಟಿಗೂ ಆಯಿತೆ? ಎಂತಹನೀತಳು! ಎಂತಹಸ್ನೇಹಿತ!! ಎಂತಹವರಣ!!! ಪೂಜ್ಯರೆ, ತಾವೇ ಇದಕ್ಕೆ ಉಪಾಯವನ್ನು ಹೇಳಬೇಕು. ಅಲ್ಲದೆ ನನ್ನ ಮಿತ್ರನನ್ನು ಈ ನನ್ನ ಪಾಪಿ ಕಣ್ಣುಗಳಿಂದ ನೋಡುವಹಾಗೆ ಅನು ಗ್ರಹ ಮಾಡಬೇಕು.