ಪುಟ:ವಸಂತಮಿತ್ರ ವಿಜಯ ನಾಟಕಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೬ ವ ಸ ತ ಮಿತ್ರ ಏ ಜ ಯ ನಾ ಟ ಕ ೦ . ಕುಂಟನಿಗೆ ಕೊಡುವುದಕ್ಕಾಗಿ, ವೈಯಾರದಿಂದ ಮಂದಹಾಸೆಯು ಕ್ಯಳಾಗಿ ಬರುವವಳನ್ನು ನೋಡಿ ಸಂತೋಷಪಡು. (ತೋರಿಸುವನು.) ರಾಜಹಂಸ (ಅತ್ತಿತ್ತ ನೋಡಿ) ಇದೇನು ? ಅರ್ಧರಾತ್ರಿಯಲ್ಲಿ ಒಳ ಬರುವವಳ್ಯಾರು ? ಸುನೀತಿ, ಶತ್ರುಗಳನ್ನೆಲ್ಲಾ ತೃಣೀಕರಿಸುವಂತಹ ಧೈರವಂತನ ಮಗಳಾಗಿರುವುದರಿಂದಲೇ, ಹೀಗೆ ಬರುವುದಕ್ಕೆ ದೈತ್ಯವುಂಟಾಗಿರು ವುದೆಂದೇ ಹೇಳಬೇಕಾಗಿದೆ. ಆನಂದವತಿಯ ಪ್ರವೇಶ. ಆನಂದವು. (ಕುಂಟನಹತ್ತರಕ್ಕೆ ಬಂದು) ನಿನ್ನ ಸಂತೋಷಕ್ಕೆ ಪ್ರತಿ ಬಂಧಕನನ್ನು . . . ಈಗ ಹೇಳಿ ಪ್ರಯೋಜನವಿಲ್ಲ. ಆದ್ರೆ, ಈ ಪಲಹಾರದ ಸಾಮಾನುಗಳನ್ನು ಸ್ವೀಕರಿಸಿದಮೇಲೆ ಮಿಕ್ಕ ವಿಷಯ ಗಳನ್ನು ವಿಸ್ತಾರವಾಗಿ ಹೇಳುವೆನು, ವಸಂತಮಿತ್ರ, (ರಾಜನನ್ನು ನೋಡಿ) ಮಹಾರಾಜನೆ? ಈ ದಂಪತಿ ಗಳನ್ನು ನೋಡಿ ಸಂತೋಷಪಡು ; ಸದ್ದು ಮಾಡಬೇಡ. ಕುಂಟ, ನೀನು ಆ ರಾಜಹಂಸನ ಮಗಳೇಸರಿ, ಒಳ್ಳೇದು ನನ್ನ ಹತ್ತಿರಕ್ಕೆ ಬಾ, ವಸಂತಮಿತ್ರ, ರಾಜನೆ, ಈಕೆಯು ತಮ್ಮ ಮಗಳಲ್ಲದೆ ಮತ್ತಾ ರೂ ಅಲ್ಲ. ರಾಜಹಂಸ (ಸ್ವಗತ) ಅಯ್ಯೋ, ನಂದಭಾಗ್ಯನಾದ ರಾಜನೆ, ಇದನ್ನು ನೋಡಿ ಜೀವಿಸಿರಬೇಕೆ ! ನೀಚಳ, ನನ್ನ ಹೆಸರನ್ನು ವೃಥಾ ಹೇಳುವುದೇಕೆ ? ನಾಚಿಕೆಯಿಲ್ಲದೆ ನರಹತ್ಯಕ್ಕೆ ಹೇಸದಿರುವ ಪಾತಕಿಯೇ ನನ್ನಲ್ಲಿ ಜನಿಸಿದುದಕೆ ಸಫಲವಾಯಿತು. ಮಂತ್ರಿಯೆ, ಈ ನೀತರನ್ನು ಈಗಲೇ ಕೊಂದುಹಾಕುವೆನು. (ಸ್ವಲ್ಪ ಮುಂದಕ್ಕೆ ಹೋಗುವನು.) ಸುನೀತಿ, ಮಹಾರಾಜನೆ, ನಿಧಾನಿಸಬೇಕು. ತನ್ನ ಮಗಳಾದ ಮಾತ್ರಕ್ಕೆ ಏನು ? ಏತಕ್ಕೆ ಬಂದಿರುವಳೋ, ನಡೆಯುವುದನ್ನೆಲ್ಲಾ ಚೆನ್ನಾಗಿ ಪರೀಕ್ಷೆ ಮಾಡಿದನಂತರ, ತಮ್ಮ ಮನಸ್ಸಿಗೆ ಬಂದಂತೆ ನಡೆಸಬಹುದು. ಸ್ವಲ್ಪ ನಿಧಾನಿಸಿ, (ತಡೆಯುವೆನು )