ಪುಟ:ವಸಂತಮಿತ್ರ ವಿಜಯ ನಾಟಕಂ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ ಸ೦ತ ಮಿ ತ ವಿ ಜ ಯ ನಾ ಟ ಕ ೦ - ೩ ಚಂಪಕಮಾಲಿನಿ. ಹಾಗಾದರೆ, ಸದ್ದು ಣಾಡ್ಯರಿರಲಿಲ್ಲವೆ, ಅವರನ್ನು ಏಕೆ ಧರಿಸಬಾರದಾಗಿತ್ತು ? - ಶುಭಾಂಗಿ, ಸ್ವಭಾವವಾಗಿ ಮನುಷ್ಯನಿಗೆ ಹುಟ್ಟುವಾಗಲೇ ಸದ್ದು ಣಗಳಿರುವುವು. ಇವು ಸಂಗದೋಷದಿಂದ ವ್ಯತ್ಯಾಸವಾಗುವು ದರಲ್ಲಿ ಸಂಶಯವೇನು ? ಆದುದರಿಂದ ಸದ್ದು ಣವೊಂದೇ ಮೋ ಹಕ್ಕೆ ಕಾರಣವಲ್ಲವೆಂದು ತಿಳಿಯಲಾರೆಯೋ ? ಚಂಪಕಮಾಲಿನಿ, ಹಾಗಾದರೆ, ಶೌರವಂತರಾದ ರಾಜರಲ್ಲಿಯೂ ನಿನ್ನ ಮನಸ್ಸು ಒಡಂಬಡದೆ ಇರುವುದಕ್ಕೆ ಕಾರಣವೇನು ? - ಶುಭಾಂಗಿ, ಈಗಿನ ಕಾಲದ ರಾಜರು ಪರದೇಶಿಯರ ವಕರಾಗಿ ಸ್ವಾತಂತ್ರ್ಯವನ್ನು ಮರೆತು, ತಮ್ಮ ಕರ್ತವ್ಯದಚ್ಯುತಿಯಿಂದ ಪ್ರಜೆ ಗಳ ಅನುರಾಗವು ತಪ್ಪಿದುದರಿಂದ ಪ್ರಜೆಗಳು ಜೀವನಕ್ಕಿಲ್ಲದೆ ಪೇಚಾಡು ತಿರುವರು. ಆದುದರಿಂದ ಧರ್ಮದಮೇಲೆ ದೃಷ್ಟಿಯಿಡದೆ ಪ್ರಜೆಗ ೪ಂದ ಹೇಗೆ ಹಣವನ್ನು ಸುಲಿದುಕೊಳ್ಳಬೇಕು, ಅವರ ಸ್ವಾತಂ ತ್ರ್ಯವನ್ನು ಹೇಗೆ ಕಮ್ಮಿ ಮಾಡುತ್ತಾ ಬರಬೇಕು, ಇವುಗಳನ್ನು ಯೋಚಿಸುತ್ತಾ ರಾಜ್ಯಾಡಳಿತಗಳಲ್ಲಿಯೇ ಮಗ್ಯ ಮನೋರಥರಾಗಿ ರುವ ರಾಜ್ಯಾಧಿಪತಿಗಳ ಪಾಡೇನೆಂದು ಹೇಳಲಿ. ಇಂತಹವರಿಗಿಂ ತಲೂ ನ್ಯಾಯವನ್ನು ಬಿಡದೆ, ಧರ್ಮಾಚರಣೆಯಲ್ಲಿದ್ದು ಬಡವನಾಗಿ ದ್ದರೂ ಚಿಂತೆಯಿಲ್ಲ; ಅವನೇ ಯೋಗ್ಯನು. ಚಂಪಕಮಾಲಿನಿ, ಹಾಗಾದರೆ, ಎಂತಹ ಪುರುಷನ್ನು ವರಿಸಬೇ ಕೆಂದು ನಿನ್ನ ಅಭಿಪ್ರಾಯವು ? ಶುಭಾಂಗಿ ಸಖಿ, ಕೇಳು. ಕಂದ ಕಲೆಯಿಂಜ್ಞಾ ನಂವಿನಯಂ | ವಿಲಸಿತಚಾತುರ ಕೀರ್ತಿಮುಕ್ತಿಗಳನಿಶಂ || ಫಲಿಸದೆಬಿಡವದರಿಂದಂ । ನೆಲನೊಳಕಸುರಭೂಜದಂತೆ ವಿದ್ಯೆಯದೆಸೆಗುಂ 11 ೪೫ || 10