ಪುಟ:ವಸಂತಮಿತ್ರ ವಿಜಯ ನಾಟಕಂ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೫ ನ ಸ ೦ ತ ಮಿ ತ ವಿ ಜಿ ಯ ನಾ ಟ ಕ ೦ . ಚಂಪಕಮಾಲಿನಿ, ನಿನ್ನ ಸ್ಥಿತಿಯೇ ಪರಿಹಾಸ್ಯಕರವಾಗಿರುವ ದೆಂದು ಹೇಳುವುದಕ್ಕೆ ನೀನು ಮಾಡಿರುವ ಗಂಡಸರ ಗುಣಕಥನವೇ ಗುರುತಲ್ಲವೆ ? ಶುಭಾಂಗಿ, ಸಖಿ. ಇದು ಹಾಗಿರಲಿ, ನನ್ನ ತಂದೆಯು ನನಗೆ ತಕ್ಕ ವರನು ದೊರೆಯಲಿಲ್ಲವೆಂದು ಚಿಂತಿಸುತ್ತಿರುವನಲ್ಲ, ಏನು ಮಾಡಲಿ. ಸಖಿ. ಈಗಿನ ಕಾಲದಲ್ಲಿ ನಮಗೆ ಇಷ್ಟು ತೊಂದರೆ ಯಾಗಿರುವಲ್ಲಿ ಬಡವರ ಪಾಡೇನೆಂದು ಹೇಳುವುದಕ್ಕಾದೀತು. ಇದೂ ಅಲ್ಲದೆ ಯುವತಿಯರನ್ನು ಮುದಿಗಂಡನಿಗೆ ಹಣದಾತೆಗೆ ಕೊಟ್ಟು ಮದುವೆ ಮಾಡಿರುವರಲ್ಲ. ಅಂತಹ ಗಂಡನ ಹತೋಟಿಯು ತಪ್ಪಿ ನಡೆಯುತ್ತಿರುವ ಹೆಂಡರನ್ನ ನೋಡಿ, ನೋಡಿ, ಇನ್ನೂ ಅನೇಕರು ಮದುವೆಯಾಗುವದರಲ್ಲಿ ಇರುವರಲ್ಲ ! ಇವರಿಗೆ ಇನ್ನೂ ನಾಚಿಕೆ ಬೇಡವೆ ? ಅಂತವರ ಜನ್ಮವು ಅತ್ಯಂತ ಹಾಸ್ಯಾಸ್ಪದವೇ ಸರಿ. ಚಂಪಕಮಾಲಿನಿ ನಿಜ, ಇ೦ತಹ ದಂಪತಿಗಳಲ್ಲಿ ಪರಸ್ಪರಾನು ರಾಗವು ತಪ್ಪಿ, ಸಂಸಾರದಲ್ಲಿ ನಿರಾಶರಾಗಿ, ಕಲಹವುಂಟಾಗುತ್ತಿ ರುವ ವ್ಯಾಜ್ಯಗಳು ಸದಾ ನಿಮ್ಮ ತಂದೆಯ ಕೋರ್ಟುಗಳಲ್ಲಿ ಪ್ರತಿ ದಿವೂ ನಡೆಯುತ್ತಿರುವುದು, - ಶುಭಾಂಗಿ ಇದಕ್ಕೆ ಏನು ಮಾಡಬೇಕೆಂದು ನಿನ್ನ ಅಭಿಪ್ರಾಯವು ? ಚಂಪಕ, ರಾಜನು ಯೋಗ್ಯನಾದ ಮಂತ್ರಿಶ್ರೇಷ್ಮನಿಂದ, ಈಗಿನ ರಾಜ್ಯದ ಸ್ಥಿತಿಗೆ ಯಾವುದು ಅವಶ್ಯಕವಾಗಿರುವುದೆಂದು ಯೋಚಿಸಿ, ತಕ್ಕ ಕಾರಗಳನ್ನು ಮಾಡಬೇಕಲ್ಲದೆ, ಅವರುಪದವಿಗೆಬಂದಾಗ್ಗೆ ಇದೇ ಸಮಯವೆಂದು ದ್ರವ್ಯಾರ್ಜನೆ ಮಾಡಿ, ತಮ್ಮ ಅಧಿಕಾರದಲ್ಲಿ ಒಂದು ವರ್ಗಗಳಿಗೆ ಮಾತ್ರ ಉಪಪತ್ತಿಗಳನ್ನುಂಟು ಮಾಡಿಕೊಡುತ್ತಿರುವು ದನ್ನು ನೋಡಿದರೆ ಬಹು ಶೋಚನೀಯವಾಗಿದೆ. ರಾಜನಿಗೆ ಪ್ರಜೆಯೇ ಒಂದು ಕಾಮಧೇನು. ಇದಕ್ಕೆ ಉಂಟಾಗಿರುವ ಅವ್ಯವಸ್ಥಿತಿಯನ್ನು ಪದ್ಯಾಲೋಚಿಸಿ, ತಕ್ಕ ಪರಿಹಾರೋಪಾಯಗಳನ್ನು ಹುಡುಕುವುದೇ ರಾಜಧರ್ಮವು, ಪ್ರಜಾಭಿವೃದ್ಧಿಗೆ ಹೆಂಗಸರೇ ಕಾರಣರಾಗಿರುವರು. ಆಂಗ್ಲೆಯರ ಆಚರಣೆಗಳನ್ನು ಆ೦ತರದಲ್ಲಿ ನಡಿಸಬೇಕೆಂಬ ಬುದ್ದಿಯು ಈಗಿನ ವಿದ್ಯಾವತಿಯರಲ್ಲಿ ಹುಟ್ಟಿರಲು, ಅವರು ತಮ್ಮ ಜಾತಿ ಧರ್ಮವನ್ನು ಬಿಟ್ಟು, ತಮ್ಮ ಕರ್ತವ್ಯವ್ಯವದೆಂದು ಯೋಚಿಸದೆ,