ಪುಟ:ವಸಂತಮಿತ್ರ ವಿಜಯ ನಾಟಕಂ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೬ ಚ ತು ಥಾ ೯೦ ಕ ೦ • ಎಲ್ಲಾ ಮರೆತು ಹೋಗಿರುವುದೇ ಈಗಿನ ಸ್ತ್ರೀಯರ ಅವ್ಯಸ್ಥೆಯೇ ಕಾರಣವಾಗಿದೆ. ಇದು ಹಾಗಿರಲಿ, ಮಂತ್ರಿಯು ಹುಡುಕಿಕೊಂಡು ಬರುವವನೇ ತಕ್ಕವರನಾಗಲೆಂದು ನಿಮ್ಮ ಕುಲದೇವತೆಯಾದ ಕಾಳಿ ದೇವಾಲಯಕ್ಕೆ ಹೋಗಿ ಏಕೆ ಪೂಜಿಸಬಾರದು ? ಶುಭಾಂಗಿ, ಸಖಿ, ಈಗ ಚೆನ್ನಾಗಿ ಜ್ಞಾಪಿಸಿದೆ. ಇದು ಸಕಾಲವಾ ದುದರಿಂದ ಪೂಜಾ ಸಾಮಗ್ರಿಗಳನ್ನು ಸಿದ್ಧಗೊಳಿಸು ನಡೆ. ಚಂಪಕ, ಜಾಗ್ರತೆಯಾಗಿ ದಯಮಾಡಿಸಬೇಕು. (ಹೋಗುವರು ) ಸ್ನಾನ, ೩. ಸ್ಮಶಾನ. ಕಾಳೀಗುಡಿ, (ವಸಂತಮಿತ್ರನ ಪ್ರವೇಶ.) ವಸಂತಮಿತ್ರ ಇದೋ, ಸ್ಮಶಾನವು ಎಂತಹ ಧೀರನಿಗಾದರೂ ಭೀತಿಯನ್ನುಂಟುಮಾಡದೆ ಬಿಡತಕ್ಕುದಾಗಿಲ್ಲ. ಎಲೈ ಜೀವವೆ ? ನಶ್ವರವಾದ ಈ ದೇಹದಲ್ಲಿ ಸೇರಿಕೊಂಡು, ಸೌಖ್ಯವನ್ನೆ ಬಯಸು ತಿರುವ ನೀನು ಈಗ ಭಯದಿಂದ ಬೆದರುವೆಯಾ ? (ಹೆಣಗಳನ್ನು ನೋಡಿ) ಹೆಣಗಳೇ, ನೀವೇ ಧನ್ಯರು, ಧನ್ಯರು. ಹೇಗೆಂದರೆ, ನೀವು ನಿರ್ಜಿವಿಗಳಾಗಿದ್ದರೂ, ನಿಮ್ಮ ಅಂಗಗಳನ್ನು ಈ ನಾಯಿ, ನರಿ ಮುಂತಾದವುಗಳಿಗೆ ಬಹಳ ವಿಶ್ವಾಸದಿಂದ ನೀಡಿ, ತಿಂದು ತೃಪ್ತಿ ಪಡಿ ಸುತ್ತಿರುವಿರಿ. ನಿಮ್ಮ ಹಾಗೆ ನಾನೂ ಇದ್ದು, ಜೀವವನ್ನು ಹೊಂದಿ ದಾಗ್ಯೂ ಇದೋ, ಈ ನನ್ನ ಮಿತ್ರನ ಜೀವವನ್ನು ಕಾಪಾಡದೇ ಇದೇನೆ. ಆದುದರಿಂದ ಈ ನನ್ನ ಜೀವವು ನಿಮ್ಮನ್ನು ನೋಡಲು ಅಂಚಿತ್ತಿರುವುದು. ಜನರು ತಮಗೆ ಪ್ರಾಪ್ತವಾಗಿರುವ ಕ್ಷಣಿಕವಾದ ಅಧಿಕಾರದಲ್ಲಿದ್ದಾಗ್ಗೆ, ಬಂದು ಆಶ್ರಯಿಸುವ ಬಡವರ ವಿಷಯದಲ್ಲಿ ತಮ್ಮ ಕೈಲಾದಮಟ್ಟಿಗೂ ಸಹಾಯಮಾಡದೆ ಇರುವ ದೊಡ್ಡ ಮನು ಪ್ಯರು ಈ ಹೆಣಗಳಿಗಿಂತಲೂ ನೀತರಲ್ಲವೇ ? ನನ್ನ ಮಿತ್ರನ ಶವ ವನ್ನು ತೆಗೆದುಕೊಂಡು ಬಂದು ಬಹಳ ಕಾಲವಾದಾಗೂ ವಿಘ್ನವರಂ ಪರೆಗಳಿಂದ ಇನ್ನೂ ಗಂಗಾತೀರಕ್ಕೆ ಸೇರಲೂ ಇಲ್ಲ. (ಅತ್ತಿತ್ತ ನೋಡಿ) ಆಹಾ, ಇಲ್ಲಿ ಒಂದು ಕಾಳಿ ದೇವಾಲಯವಿರುವುದು. ಇಲ್ಲಿ ಈ