ಪುಟ:ವಸಂತಮಿತ್ರ ವಿಜಯ ನಾಟಕಂ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚ ತು ಥಾ ೯೦ ಕ ೦, ಸತ್ಯನಿಧಿ, ಮಂತ್ರಿಯೆ, ಆ ಮಹಾಪುರುಷನಿರುವ ಸ್ಥಳಕ್ಕೆ ಹೊಗಿ ಕರೆದುಕೊಂಡು ಬರೋಣವೆ ? ಕುಶಲಮತಿ, ಅಪ್ಪಣೆ ದಯಮಾಡಿಸಬಹುದು. (ಇಬ್ಬರೂ ಹೋಗುವರು.) ಸ್ಥಾನ ೫-ಸ್ಮಶಾನ. ವಸಂತಮಿತ್ರ, ಮಂತ್ರಿಯು ಹೇಳಿ ಹೋದವನು ಇನ್ನೂ ಬರಲಿಲ್ಲ ವಲ್ಲ. ನಾನು ಬರುವೆನೆಂದು ಆತನಿಗೆ ವಾಗ್ದಾನ ಮಾಡಿರುವೆನು. ಏನುಮಾಡಲಿ, ಹೊತ್ತಾಯಿತು. ಮಿತ್ರನ ವಿಯೋಗವೇ ನನ್ನನ್ನು ಇಷ್ಟು ತೊಂದರೆಗೊಳಿಸುತ್ತಿರುವುದು. ಏಕೆಂದರೆ, ಕಂದ ಪೋಷಿಪೊಡೆಮಾತೆತನುವಂ ಭೂಷಣಮೆನಿಸುತ್ತೆ ಪೊರೆವೊಡುರುವಿದ್ಯೆ ಮಹಾ ತೋಷಂಗೊಳಿಪೊಡೆಸತಿತಾಂ ಶೋಷಿಸುವೊಡೆದುಃಖಮಿಳಯೋಳಪ್ರತಿಮಂಗಳ ರ್೪|| (ಸತ್ಯನಿಧಿ ಕುಶಲಮತಿ ಪ್ರವೇಶಿಸುವರು.) ಸತ್ಯ ನಿಧಿ, ಮಂತ್ರಿಯೆ, ನೀನು ಹೇಳಿದ ಮಹಾಪುರುಷನೆಲ್ಲಿ ರುವನು ? ಕುಶಲಮತಿ, ಇದೋ ಇಲ್ಲಿಯೇ ನಿಂತಿರುವನು. (ತೋರಿಸುವನು. ಯತಿಯನ್ನು ನೋಡಿ) ಆರರೆ, ತಮ್ಮ ಕೆಲಸಕ್ಕೋಸ್ಕರವೇ ನಮ್ಮ ಮಹಾರಾಜನನ್ನು ಕರೆತಂದಿರುವೆನು, ಇವರೇ ನಮ್ಮ ಮಹಾರಾಜರು (ತೋರಿಸುವನು.) ಸತ್ಯನಿಧಿ, ಮಹಾಪುರುಷರೆ, ನನ್ನದೊಂದು ವಿಜ್ಞಾಪನೆ ಇರುವುದು. ವಸಂತಮಿತ್ರ, ಏನು, ಹೇಳಬಹುದು. ಯೋಗ್ಯವಾದುದಾಗಿದ್ದರೆ ಯೋಚಿಸಬಹುದಾಗಿರುವುದು, ಸತ್ಯನಿಧಿ, ಕಾಳೀ ವರದಿಂದ ನನಗೆ ಅಬ್ದ ವಾದ ಒಂದು ಕನ್ಯಾರತ್ನ ವಿರುವುದು. ಆ ನನ್ನ ಕುಮಾರಿಗೆ ವಿವಾಹ ಮಾಡಬೇಕೆಂದು ನಾನಾ