ಪುಟ:ವಸಂತಮಿತ್ರ ವಿಜಯ ನಾಟಕಂ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

V೪ ಚ ತು ರ್ಥಾ೦ ಕ ೦ . ವಸಂತಮಿತ್ರ. ಹಸುಖವು ನೀರಸವೆಂದು ತಿಳಿದು ಇಂದ್ರಿಯ ವ್ಯಾಪಾರಗಳಲ್ಲಿ ವಿಮುಖನಾಗಿ, ನಿಶ್ಚಂಚಲಚಿತ್ತನಾಗಿರಲು ಈ ಆಶ್ರಮವನ್ನು ತಾಳಿರುವೆನು. ಕುಶಲಮತಿ, ನಿಶ್ಚಂಕಲಮನಸ್ಸುಳ್ಳವರಾಗಿದ್ದರೆ, ತಾವು ಭ್ರಾಂತಿ ಯಿಂದ ಹೀಗೆ ತಿರುಗುತ್ತಿರುವುದಕ್ಕೆ ಕಾರಣವೇನು ? ವಸಂತಮಿತ್ರ, ಯತಿಗೆ ವಿವಾಹ ಮಾಡಬೇಕೆಂಬ ದುರ್ಬೋಧ ನೆಯು ನಿಮ್ಮ ಮಹಾರಾಜನಿಗೆ ಹುಟ್ಟಿರುವಾಗ್ಗೆ, ಇನ್ನು ನಮ್ಮ ಕರ್ಮಗಳನ್ನು ನಡೆಸಿಕೊಳ್ಳುವುದು ದುರ್ಲಭವೆಂದು ತಿಳಿದು, ಪರ ರಾಜ್ಯಕ್ಕೆ ಹೋಗಬೇಕೆಂದು ಹೀಗೆ ಹೊರಟಿರುವೆನು. ಕುಶಲಮತಿ, ಸ್ವಾಮಿ, ಇದುಹಾಗಿರಲಿ, ತಮ್ಮ ಅಂತರಂಗದ ಜ್ಞಾನವೆಲ್ಲಾ ತಾವು ಈ ಪೆಟ್ಟಿಗೆಯನ್ನು ನೋಡಿ ಹಂಬಲಿಸಿದಾಗಲೇ ಗೊತ್ತಾಯಿತು. (ರಾಜನನ್ನು ನೋಡಿ) ಸ್ವಾಮಿ, ತಾವು ದಯಮಾ ಡಿಸಬಹುದು. ತಮ್ಮ ಕಾವ್ಯವನ್ನು ನಾನು ನೆರವೇರಿಸುವನು. ಸತ್ಯನಿಧಿ, ಪೂಜ್ಯರೇ ಹೋಗುವೆನು. (ನಮಸ್ಕರಿಸುವನು ) ವಸಂತ ಮಿತ್ರ, ಹೋಗಿಬಾ. ಕಂದ! ಜನಮು೦ನಯಮುಂಘನತೆಯು ಮಿನಿತುಂರ ೦ಗಳೆಂದು ಭಾವಿಸಿಸತತ೦ !! ಅನುರಾಗದಿಂದಲಾರ್ಜಿಸಿ ವಿನತಾಮರಭೂಜದಂತೆರಾಜಿಸುಮಹಿಪಾ ||೫ || (ಸತ್ಯನಿಧಿಯು ಹೋಗುವನು.) ಕುಶಲಮತಿ (ಯತಿಯನ್ನು ನೋಡಿ) ಸ್ವಾಮಿ, ನಮ್ಮ ಮಹಾರಾಜನು ತುಂಬಾ ಕೋಪಿಸನು. ಆತನ ಮನೋಗತದಂತೆ ನಡೆಯದಿದ್ದರೆ, ತಮ್ಮ ಪ್ರಕೃತೋಚಿತ ಕಾವ್ಯಗಳಿಗೆ ಭಂಗವುಂಟಾಗದಿರದು. ಇದರಮೇಲೆ ತಮ್ಮ ಚಿತ್ರ, ವಸಂ ಮಿ. (ಸ್ವಗತ) ಈಗದ್ವಂದ್ವ ಸಂಕಟವಾಗಿರುವದಲ್ಲ. ಏನು ಮಾಡಲಿ. ನನ್ನ ಮನೋರಥವನ್ನು ನೆರೆವೇರಿಸಿಕೊಳ್ಳುವುಗೆ ಹೇಗೆ,