ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೬ / ವಾಗರ್ಥ

ತನ್ನ ಮಿತಿಗಳನ್ನು, ತಪ್ಪುಗಳನ್ನು ಒಪ್ಪಿಕೊಂಡು ತನ್ನ ಧೋರಣೆ ಯಲ್ಲಿ ಮಾರ್ಪಾಡು ಮಾಡುವ, ತಿದ್ದಿಕೊಳ್ಳುವ, ತೆರೆದ ಮನಸ್ಸು ವಿಮರ್ಶಕನಿಗೆ ಇರಬೇಕಾದ ಮತ್ತೊಂದು ಅರ್ಹತೆ. ಎಂದರೆ- ಕಲೆ, ಕಲೆಯ ಹಿನ್ನೆಲೆ, ಪರಿಸರ ಮತ್ತು ಸ್ವತಃ ತನ್ನ ಬಗ್ಗೆ 'ಎಚ್ಚರ' ಇರಬೇಕಾದುದು ವಿಮರ್ಶಕನ ಮೂಲ ಅರ್ಹತೆ.

ಮೂರು ನೆಲೆಗಳು

ಚಿಂತಕ ಲಕ್ಷ್ಮೀಶ ತೋಳ್ಳಾಡಿಯವರು ತಮ್ಮ ಟಿಪ್ಪಣಿಯೊಂದರಲ್ಲಿ ಯಕ್ಷಗಾನ ವಿಮರ್ಶೆಯ ಮೂರು ಪ್ರಕಾರಗಳನ್ನು ಗುರುತಿಸುತ್ತಾರೆ- ರಸಾನುಭವ ವಿಮರ್ಶೆ, ಸೃಜನಶೀಲತೆಯನ್ನು ಅಪೇಕ್ಷಿಸುವ ವಿಮರ್ಶೆ ಮತ್ತು ಸಂಸ್ಕೃತಿನಿಷ್ಠ-ಸಾಮಾಜಿಕನಿಷ್ಠ, ವಿಮರ್ಶೆ- ಇವು ಮೂರೂ ಪರಸ್ಪರ ಸಾಪೇಕ್ಷ ಮತ್ತು ನಿಕಟ ಸಂಬಂಧ ಹೊಂದಿವೆ ಎಂದೂ ವಾದಿಸಬಹುದಾದರೂ, ಅಧ್ಯಯನಕ್ಕಾಗಿ ಇವನ್ನು ತುಸು ಭಿನ್ನ ದೃಷ್ಟಿಯ ನೆಲೆಗಳೆಂದೇ ಗುರುತಿಸುತ್ತೇವೆ.

ರಸಾನುಭವೀ ವಿಮರ್ಶೆಯು, ಪ್ರಧಾನವಾಗಿ ಪ್ರಸಂಗ ಪ್ರದರ್ಶನ 'ಏನು' ಹೇಳುತ್ತದೆ, ಎಂಬುದಕ್ಕಿಂತ ಪ್ರಸಂಗ-ಪ್ರದರ್ಶನಗಳು 'ಹೇಗೆ', ಎಷ್ಟು ಚೆನ್ನಾಗಿ ಹೇಳುತ್ತವೆ ಎಂಬುದನ್ನೆ ಲಕ್ಷಿಸುತ್ತದೆ. ಕಥೆಯ ಸತ್ವದ ಬಗೆಗೆ ಕೂಡ ರಸಾನುಭವಕ್ಕೆ ಅನುಕೂಲಿಸುವ ಅರ್ಹತೆಯ ದೃಷ್ಟಿಯಿಂದ ನೋಡುತ್ತದೆ. ಕಲೆಯಲ್ಲಿ ಅಭಿವ್ಯಕ್ತಿಯ ಸುಧಾರಣೆ, ಅಭಿಪ್ರಾಯದ ನಾವೀನ್ಯ ರಸಾನುಭವಿ ದೃಷ್ಟಿಗೆ ಅಷ್ಟೊಂದು ಮುಖ್ಯವೆನಿಸುವುದಿಲ್ಲ. ಈ ಬಗೆಯ ಚಿಂತನದಲ್ಲಿ ಹಿಂದಿನ ನೆನಪುಗಳು, ಮಾರ್ಗದರ್ಶಕ. ಆದುದ ರಿಂದಲೇ ಇಲ್ಲಿ ಹಿಂದಿನ ಕಲಾವಿದರ ಯಾ ಪ್ರದರ್ಶನಗಳ ಜತೆ ಹೋಲಿಕೆ ಬಹಳ ನಡೆಯುತ್ತಿರುತ್ತದೆ. ಕೇವಲ ರಸನಿಷ್ಟ ದೃಷ್ಟಿ ಕೆಲವೊಮ್ಮೆ ತೀರ ಸೀಮಿತವಾಗಿ, ಜಡವಾಗಿ ಕಾಣಿಸುವುದು ಪ್ರಾಯಃ ಅದರ ಮುಗ್ಧವಾದ ರಸಪ್ರಿಯತೆಯಿಂದ.

ಸೃಜನಶೀಲ ನೆಲೆಯ ವಿಮರ್ಶೆ, ಕಲೆಯಲ್ಲಿ ಅರ್ಥವತ್ತಾದ ನಾವೀನ್ಯವನ್ನು ಬಯಸುತ್ತದೆ. ಕಲೆಯ ಕೆಲಸ ಮುಖ್ಯವಾಗಿ ಹೊಸ ಭಾವ, ಹೊಸ ಅರ್ಥ ಮತ್ತು ನವೀನ ಕಲ್ಪನೆಗಳತ್ತ ನಡೆಯುವುದು ಎಂದು ಇಲ್ಲಿನ ಅಭಿಪ್ರಾಯ. ಆದರೆ ಬರಿಯ ಹೊಸತನಕ್ಕೂ, ಸೃಜನ ಶೀಲತೆಗೂ ಇರುವ ವ್ಯತ್ಯಾಸವನ್ನು ಗುರುತಿಸುವಲ್ಲಿ ಮತ್ತು ಸೃಷ್ಟಿಗೂ,