ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ವಿಮರ್ಶೆಯ ನೆಲೆಗಳು / ೧೦೩

ಇವೆ. ಅವುಗಳನ್ನು ನಿವಾರಿಸಲು ಹೊರಡುವಾಗ,ಹಿಂದಿನದರ ಸ್ಫೂರ್ತಿಯಿಂದ ಮುಂದುವರಿಯಬೇಕು. ಕಳೆದುಹೋದ ಅಂಶಗಳ ಪುನರುದ್ಧಾರ, ಪುನಸ್ಸಂಧಾನಗಳು, ಸಮಸ್ಯೆಗಳಿಗೆ ಪರಿಹಾರ ನೀಡ ಬಲ್ಲುವು. ಆದರೆ ಅಷ್ಟೇ ಸಾಕಾಗುವುದಿಲ್ಲ. ಸೃಷ್ಟಿಗಳೂ ಅಗತ್ಯ.. ಈ ಸೃಷ್ಟಿಗಳಿಗೊಂದು ದಾರಿ ('ಮಾರ್ಗ') ಮೊದಲೇ ನಿರ್ಮಿತವಾದುದುಂಟು. ಅದನ್ನು ಬಳಸಿ ಕಲೆ ವಿಸ್ತರಣ ನಡೆಯಬೇಕು. ಆದರೆ ಅದು ಕ್ಷಣಿಕ ಹೊಂದಾಣಿಕೆಯ ರಚನೆ ಆಗಲಾರದು. ಕಲಾಪರಂಪರೆಯ ಗಂಭೀರ ಸಾಂಗೋಪಾಂಗ ಅಧ್ಯಯನದಿಂದ ಬಂದುದಾಗಬೇಕು. ಪಾರಂಪರಿಕ ಕಲೆಯಲ್ಲಿ ಸೃಷ್ಟಿಸ್ವಾತಂತ್ರಕ್ಕೆ ಇರುವ ನಿಯಂತ್ರಣವನ್ನು ವಿಮರ್ಶಕನು ಅರಿತು, ತಿಳಿಸಬೇಕು. ಪುನಾರಚನೆಯ ಸಾರ್ಥಕ್ಯ ಇರುವುದು 'ಸಮನ್ವಯ' ಮತ್ತು 'ಸಮರಸ' ತತ್ವಗಳಲ್ಲಿ ಎಂಬ ಮೂಲ ತತ್ವ ವಿಮರ್ಶಕನಲ್ಲಿ ಜಾಗೃತವಾಗಿರಬೇಕು.

ಪ್ರಾಯೋಗಿಕ ರಂಗಭೂಮಿ

ಯಕ್ಷಗಾನದ ಅಂಶಗಳನ್ನು ಬಳಸಿಕೊಂಡು, ಪ್ರಾಯೋಗಿಕ (experimental) ರಂಗವನ್ನು ಸೃಜಿಸುವ ಯತ್ನಗಳಾಗಿವೆ. ಯಕ್ಷಗಾನ ವನ್ನು ಅಂಶತಃ ಅಥವಾ ಪೂರ್ತಿಯಾಗಿ ಅಳವಡಿಸಿ, ಅದರ ಮಿತಿಗಳನ್ನು ಮೀರಿ ಹೋಗುವ ಪ್ರಯತ್ನಗಳು ನಡೆದಿವೆ. ಇವನ್ನು ವಿಮರ್ಶಿಸುವಾಗ, ವಿಮರ್ಶಕನು ತನ್ನ ಪರಂಪರಾಗತ ಕಲೆಯ ದೃಷ್ಟಿಯನ್ನು ಒಂದಿಷ್ಟು ಬದಿಗೆ ಇರಿಸಿ, ವೀಕ್ಷಿಸಬೇಕಾಗುತ್ತದೆ. ಶಿವರಾಮ ಕಾರಂತರ 'ಯಕ್ಷ ರಂಗ'ವನ್ನಾಗಲಿ, ಉದ್ಯಾವರ ಮಾಧವಾಚಾರ್ಯರ 'ಸಮೂಹ'ದ ರೂಪಕ ಗಳನ್ನಾಗಲಿ, ನೋಡುವಾಗ ವಿಭಿನ್ನ ದೃಷ್ಟಿಯೊಂದು ಅನಿವಾರವಷ್ಟೆ? ಪ್ರಯೋಗದ ಸಿದ್ಧಾಂತವೇನು? ಅದು ಏನನ್ನು ಸಾಧಿಸಲು ಯತ್ನಿಸಿದೆ? ಅದರ ತಾಂತ್ರಿಕ ಯೋಜನೆಯೇನು? ಅದರ ಸಾಫಲ್ಯ, ವೈಫಲ್ಯಗಳೇನು ಎಂದು ನೋಡುವ ಧೋರಣೆ ಇಲ್ಲಿ ಮುಖ್ಯವಾಗುತ್ತದೆ. ನೂತನ ಪ್ರಸಂಗರಚನೆಗೂ ಇದೇ ಮಾತು ಭಾಗಶಃ ಅನ್ವಯಿಸುತ್ತದೆ.

ಮಾನದಂಡ ನಿರ್ಮಾಣ - ವಿಮರ್ಶೆಯ ಸೋಲು

ಯಾವುದೇ ವಿಮರ್ಶ ಬೆಳೆಯಲು, ಅದಕ್ಕೆ ಸಂಬಂಧಿಸಿದ ಪರಿಕಲ್ಪನಾತ್ಮಕ ಚಿಂತನದ ಬೆಳವಣಿಗೆಬೆಳವಣಿಗೆ ಆಗಬೇಕು. ಯಕ್ಷಗಾನದ