ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೬ / ವಾಗರ್ಥ

ನೋಟಕನು ಒಂದು ಅಂತರದಿಂದಲೇ ನೋಡಿ ಬಿಟ್ಟುಬಿಡುತ್ತಾನೆ. ಯುಗ ಧರ್ಮವು ಅಭಿವ್ಯಕ್ತಿಯನ್ನೂ, ರಸಿಕತೆಯನ್ನೂ ತಿದ್ದುತ್ತ ಹೋಗುತ್ತದೆ.

ರಂಗದಾಚೆಯ ಕಾಳಜಿಗಳು

ವಿಮರ್ಶೆಯೆಂಬುದು ರಂಗಪ್ರದರ್ಶನಕ್ಕೆ ಸೀಮಿತವಾಗದೆ, ಕಲೆ ಯನ್ನು ಅದರ ವ್ಯಾಪಕ ಪರಿವೇಶದಲ್ಲಿ ಗ್ರಹಿಸಬೇಕು. ರಂಗದಾಚೆಗೆ ಇರುವ ಕಾಳಜಿಗಳ ಕಡೆಗೂ ಗಮನ ಅಗತ್ಯ. ಇದರಲ್ಲಿ ರಂಗವನ್ನು ಶ್ರೀಮಂತಗೊಳಿಸುವ ವಿಧಾಯಿಕ ಕಾಠ್ಯಕ್ರಮಗಳು, ಕಲಾತ್ಮಕ ಪ್ರಭಾವ ಗಳ ಸ್ವೀಕರಣಗಳು ಮತ್ತು ರಂಗದ ಸಮಸ್ಯೆಗಳ ಅಧ್ಯಯನವೂ ಸೇರುತ್ತದೆ.

ಈ ಕಲೆಗೆ ಸಂಬಂಧಿಸಿದ ಸಮಸ್ಯೆಗಳ ಪರಿಶೀಲನೆಗೆ ಆರೋಗ್ಯಕರ ವಾದ ರಂಗಪ್ರಗತಿ ಅತ್ಯವಶ್ಯ. ಈ ಕಲೆಯನ್ನು ಉದ್ಯೋಗವಾಗಿ ಸ್ವೀಕರಿಸಿರುವ ಕಲಾವಿದರ, ಸಿಬ್ಬಂದಿಗಳ ಸಮಸ್ಯೆಗಳೇನು? ಅವರ ಬದುಕು ಭದ್ರವಾಗುವಂತೆ ಏನು ಮಾಡಬಹುದು? ಹತ್ತಾರು ಸಂಕಷ್ಟ ಗಳನ್ನು ಹೊತ್ತು, ಬಂಡವಾಳ ಹೂಡಿ, ದಿನವೂ ಸವಾಲುಗಳ ಮಧ್ಯೆ ಸಂಘಟನೆಯನ್ನು ನಿಭಾಯಿಸಬೇಕಾದ ಮೇಳಗಳ . ಮಾಲಕರ, ಸಂಚಾಲಕರ ಸಮಸ್ಯೆಗಳೇನು? ಎಂಬ ಕುರಿತೂ ಚರ್ಚೆಗಳಾಗಬೇಕಾಗಿವೆ.

ಸಾಮಾಜಿಕ ವಿಮರ್ಶೆ

ಸದ್ಯ ವಿಮರ್ಶೆಯೆಂಬುದು ಆಸಕ್ತರ ಚಿಕ್ಕ ವಲಯದ ಹವ್ಯಾಸಕ್ಕೇ ಸೀಮಿತವಾಗಿದೆ. ವಿಮರ್ಶೆ ಏನನ್ನು ಹೇಳುತ್ತದೆ, ಏನನ್ನು ಬಯಸುತ್ತದೆ ಎಂಬುದನ್ನು ಸಂಬಂಧಪಟ್ಟ ಎಲ್ಲರಿಗೆ ತಲಪಿಸಲು ಆಗುತ್ತಿಲ್ಲ. ಹಾಗಾಗಿ ವಿಮರ್ಶೆ ಒಂದೆಡೆ, ಕಲಾರಂಗದ ಕಲಾವಿದ, ಸಂಘಟಕರು ಒಂದೆಡೆ ಎಂಬಂತಾಗಿದೆ. ವಿಮರ್ಶಕನಿಗೂ, ವ್ಯವಸಾಯಿಗೂ ಅರ್ಥಪೂರ್ಣ ಸಂವಾದ ಏರ್ಪಟ್ಟಿಲ್ಲ. ವ್ಯವಸಾಯಿಗೆ ಪ್ರತಿಕ್ರಿಯೆ ಮಾಹಿತಿ (feed back) ಸೂಕ್ತವಾಗಿ ಸಿಗುವುದಿಲ್ಲ. ಆತನಿಗೆ ದೊರಕುವ ಅಭಿಪ್ರಾಯ ದಲ್ಲಿ ಬಹ್ವಂಶವು ಅಭಿಮಾನಿ ಬಳಗದ ಪ್ರಶಂಸೆಯೇ,

ಯಕ್ಷಗಾನದ ಪ್ರೇಕ್ಷಕ, ವಿಮರ್ಶಕ, ಕಲಾವಿದ, ಸಂಘಟಕರನ್ನೊಳ ಗೊಂಡ ಸಂವಾದಗಳ, ಚರ್ಚೆಗಳ ಮೂಲಕ ವಿಚಾರ ವಿನಿಮಯಗಳು