ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೮ / ವಾಗರ್ಥ

ಬಹುದು. ಹೀಗೆ ವಿಮರ್ಶೆಯು ಮರುವಿಮರ್ಶೆಗೆ ಒಳಗಾಗಿ, ಚರ್ಚೆ ಸಾಗಬೇಕು. ತನ್ಮೂಲಕ ಸೂಕ್ಷ್ಮಗಳು ಹೊಳೆದು ವಿಮರ್ಶೆ ಬೆಳೆಯ ಬೇಕು. ಕಲಾಸಕ್ತರಾದ ಎಲ್ಲರಿಗೆ ಈ ಚರ್ಚೆಯಲ್ಲಿ ಪಾಲ್ಗೊಳ್ಳುವ ಹಕ್ಕಿದೆ. ಅದರಿಂದ ಕಲಾರಂಗ ಶ್ರೀಮಂತವಾಗಬೇಕು. ಅದೇ ವಿಮರ್ಶೆ, ಚರ್ಚೆಗಳ ಲಕ್ಷ್ಯ.

ಹೊಸ ನೆಲೆಗಳು

ರಸ, ಭಾವ, ಪಾತ್ರಚಿತ್ರಣ, ಪರಂಪರೆ, ರಂಜಕತೆ- ಮುಂತಾದ ನೆಲೆಗಳಲ್ಲೂ, ಶೈಲಿಯ ನೆಲೆಯಲ್ಲೂ ನಾವು ಪ್ರದರ್ಶನವನ್ನು ನೋಡು ತ್ತೇವೆ. ಅದರ ಜತೆಗೆ ಯಕ್ಷಗಾನವನ್ನು ಒಂದು ವಿದ್ಯಮಾನವಾಗಿ ಅಭ್ಯಸಿಸುವಾಗ ನಮಗೆ ಆಧುನಿಕ ಕಾಲದಲ್ಲಿ ಬೆಳೆದು ಬಂದಿರುವ ಇತರ ಕೆಲವು ವಿಧಾನಗಳನ್ನು ಬಳಸಿಯೂ ಪರಿಶೀಲಿಸಬಹುದು. ಯಕ್ಷಗಾನವು ವೇಷ, ನೃತ್ಯ, ತಂತ್ರ, ಮಾತುಗಳ ನೆಲೆಯಲ್ಲಿ ಸಂವಹನವನ್ನು ಸಾಧಿಸುವ ಕ್ರಮವೆಂತಹುದೆಂಬುದು ಅಂತಹ ಒಂದು ಪರಿಶೀಲನೆಯಾಗ ಬಲ್ಲುದು. ಹಾಗೆಯೇ ಯಕ್ಷಗಾನದಂತಹದೇ ಇತರ ರಂಗಪ್ರಕಾರಗಳು ದೇಶಾದ್ಯಂತ ಪ್ರಚಲಿತವಿವೆ. ಅವನ್ನು ಹೋಲಿಸಿ ಅಭ್ಯಸಿಸುವುದು ತುಂಬ ಬೋಧಕವಾಗಬಲ್ಲುದು. ಯಕ್ಷಗಾನದ ಸಂದರ್ಭ ಮತ್ತು ಅದರ ಪ್ರದರ್ಶನಗಳನ್ನು ಅವುಗಳ ಪರಸ್ಪರ ಸಂಬಂಧದೊಂದಿಗೆ ಪರಿಶೀಲಿಸಿ ದಾಗ ಕುತೂಹಲಕರ ಅಂಶಗಳು ಕಾಣಿಸಬಹುದು. ಜಾನಪದ ಪ್ರಕಾರ ಗಳನ್ನು ಈ ದೃಷ್ಟಿಯಿಂದ ಅಭ್ಯಸಿಸುವ ಪ್ರವೃತ್ತಿ ಈಗ ಪ್ರಾಶಸ್ತ್ರಗಳಿಸು ತ್ತಿದೆ (text, context and performance study) ಒಂದೇ ಪ್ರಸಂಗದ ಹಲವು ಪ್ರದರ್ಶನಗಳನ್ನು ಈ ವಿಧಾನದಲ್ಲಿ ಅಭ್ಯಸಿಸ ಬೇಕಾಗುತ್ತದೆ.

ಸಂಘರ್ಷ – ಸಾಮರಸ್ಯ

ಕಲೆಯೆಂಬುದು ಹುಟ್ಟುವುದು, ವಸ್ತು-ಮೌಲ್ಯ-ವಿಧಾನಗಳ ಸಂಘರ್ಷ ಮತ್ತು ಸಮರಸತೆಗಳ ವಿಶಿಷ್ಟ ಒಗ್ಗೂಡುವಿಕೆಯಿಂದ. ಅದರ ಸರಿಯಾದ ಗುರುತಿಸುವಿಕೆ, ಅರ್ಥೈಸುವಿಕೆಗಳಿಂದ ಹುಟ್ಟುವುದು ವಿಮರ್ಶೆ, ಲಕ್ಷ್ಮೀಶ ತೋಳ್ಳಾಡಿ ಅವರ ಟಿಪ್ಪಣಿಯನ್ನು ಮತ್ತೊಮ್ಮೆ ಉದ್ಧರಿಸುತ್ತೇನೆ.

ವಿವಾದಿ ಸ್ವರಗಳೂ ಸೇರಿದಂತೆ ಸ್ವರಗಳ ಸಂವಾದವೇ ಸಂಗೀತ. ಅರ್ಥಾತ್, ರಾಗ ಎಂದು ನಾವು ಹೇಳುವಂತೆ, ಕಲೆಯು ಸ್ವರಸಂವಾದ,